ನವ ದೆಹಲಿ: ಮೆಟ್ರೊ ಕ್ಯಾಂಶ್ & ಕ್ಯಾರಿ (Metro Cash & Carry) ಕಂಪನಿಯ ಭಾರತೀಯ ಘಟಕವನ್ನು ಖರೀದಿಸಲು ರಿಲಯನ್ಸ್ ಇಂಡಸ್ಟ್ರೀಸ್, ಥಾಯ್ಲೆಂಡ್ ಮೂಲದ ಸಿಪಿ ಗ್ರೂಪ್ ಮತ್ತು ಲೈಟ್‌ಸ್ಪೀಡ್ ವೆಂಚರ್ ಅಂತಿಮ ಬಿಡ್ ಸಲ್ಲಿಸಿವೆ.
ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಮೆಟ್ರೊ ಕ್ಯಾಂಶ್ & ಕ್ಯಾರಿ ಖರೀದಿಸುವ ಸಾಧ್ಯತೆ ಹೆಚ್ಚು. ಏಕೆಂದರೆ ಸಾಧ್ಯವಾದಷ್ಟು ಬೇಗ ಭಾರತದಲ್ಲಿನ ವಹಿವಾಟಿನಿಂದ ಹೊರಗೆ ಬರಲು ಮೆಟ್ರೊ ಯತ್ನಿಸುತ್ತಿದೆ. ವಿದೇಶಿ ಖರೀದಿದಾರರನ್ನು ಆಯ್ಕೆ ಮಾಡಿಕೊಂಡು ನಿಯಂತ್ರಕ ವ್ಯವಸ್ಥೆಯಿಂದ ಏನಾದರೂ ಅಡಚಣೆ ಉಂಟಾಗಿ ವಿಳಂಬವಾಗುವ ಸಾಧ್ಯತೆ ಇರುವುದರಿಂದ ರಿಲಯನ್ಸ್‌ಗೇ ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಜರ್ಮನಿ ಮೂಲದ ಸಗಟು ಮಾರಾಟ ವಲಯದ ಮೆಟ್ರೊ ಕ್ಯಾಂಶ್ & ಕ್ಯಾರಿ ಭಾರತಕ್ಕೆ ೨೦೦೩ರಲ್ಲಿ ಪ್ರವೇಶಿಸಿತ್ತು. ಪ್ರಸ್ತುತ ೩೧ ಸಗಟು ವಿತರಣೆ ಕೇಂದ್ರಗಳನ್ನು ಒಳಗೊಂಡಿದೆ. ಬೆಂಗಳೂರಿನಲ್ಲಿ ೬, ಹೈದರಾಬಾದ್‌ನಲ್ಲಿ ೪, ಮುಂಬಯಿ ಮತ್ತು ದಿಲ್ಲಿಯಲ್ಲಿ ತಲಾ ೨, ಕೋಲ್ಕತಾ, ಜೈಪುರ, ಜಲಂಧರ್, ಅಮೃತಸರ, ವಿಜಯವಾಡಾ, ಅಹಮದಾಬಾದ್, ಸೂರತ್, ಇಂದೋರ್, ಲಖನೌ, ಹುಬ್ಬಳ್ಳಿ, ತುಮಕೂರು, ವಿಶಾಖಪಟ್ಟಣಂ, ಮೀರತ್, ನಾಸಿಕ್‌ನಲ್ಲಿ ತಲಾ ಒಂದು ಕೇಂದ್ರವನ್ನು ಒಳಗೊಂಡಿದೆ.