Site icon Vistara News

Subsidy | ಸಬ್ಸಿಡಿಗಳ ಬಗ್ಗೆ ಏಕಪಕ್ಷೀಯ ಧೋರಣೆ ತ್ಯಜಿಸುವಂತೆ ವಿಶ್ವಬ್ಯಾಂಕ್‌ಗೆ ವಿತ್ತ ಸಚಿವೆ ನಿರ್ಮಲಾ ಮನವಿ

world bank

ನವ ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ವಿಶ್ವಬ್ಯಾಂಕ್‌ಗೆ, ಸಬ್ಸಿಡಿಗಳಿಗೆ ಸಂಬಂಧಿಸಿದಂತೆ ಏಕಪಕ್ಷೀಯ ಧೋರಣೆಯನ್ನು ಅನುಸರಿಸದಂತೆ ಮನವಿ ಮಾಡಿದ್ದಾರೆ.

ಸಬ್ಸಿಡಿಗಳಲ್ಲಿ ಮಾರುಕಟ್ಟೆಯನ್ನು ಹದಗೆಡಿಸಬಲ್ಲ ಸಬ್ಸಿಡಿಗಳು ಹಾಗೂ ದುರ್ಬಲ ವರ್ಗದವರಿಗೆ ಸಹಕರಿಸುವ ಸಬ್ಸಿಡಿಗಳು ಎಂಬ ಎರಡು ವಿಧಗಳಿವೆ. ದುರ್ಬಲ ವರ್ಗದ ಜನತೆಗೆ ಸಬ್ಸಿಡಿ ನೆರವಿನ ಅಗತ್ಯ ಇರುತ್ತದೆ. ಈ ವ್ಯತ್ಯಾಸವನ್ನು ಮನಗಾಣಬೇಕು ಎಂದು ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದಾರೆ.

ನಾನಾ ರಾಷ್ಟ್ರಗಳು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಇಂಧನ ಮತ್ತು ಆಹಾರ ಬಿಕ್ಕಟ್ಟು ಉಂಟಾಗಿದೆ. ಹಣದುಬ್ಬರದ ಹೆಚ್ಚಳವು ಆರ್ಥಿಕ ಹಿಂಜರಿತದ ಆತಂಕವನ್ನೂ ಸೃಷ್ಟಿಸಿದೆ. ಇಂಥ ಸಂದರ್ಭದಲ್ಲಿ ಬಡ ಜನತೆಗೆ ಸಬ್ಸಿಡಿ ನೆರವಿನ ಅಗತ್ಯ ಇದೆ ಎನ್ನುತ್ತಾರೆ ತಜ್ಞರು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಕಳೆದ 6 ವರ್ಷಗಳಲ್ಲಿ ಬಡ ಮಹಿಳೆಯರಿಗೆ ಸ್ವಚ್ಛ ಇಂಧನವನ್ನು ಪೂರೈಸಲು ಸಾಧ್ಯವಾಗಿದೆ. ಇಂಥ ಯೋಜನೆಗಳಿಗೆ ಸಬ್ಸಿಡಿ ಅಗತ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Exit mobile version