Site icon Vistara News

Crypto Regulation | ಕ್ರಿಪ್ಟೊ ನಿಯಂತ್ರಣಕ್ಕೆ ಐಎಂಎಫ್‌ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಒತ್ತಾಯ

crypto

ನವ ದೆಹಲಿ: ಕ್ರಿಪ್ಟೊಗಳನ್ನು ನಿಯಂತ್ರಿಸಲು ಜಾಗತಿಕ ಮಟ್ಟದ ಸಹಕಾರಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು (Crypto Regulation) ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಐಎಂಎಫ್‌ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಜಿವಾ ಅವರ ಜತೆಗಿನ ಸಂದರ್ಶನದಲ್ಲಿ ಅವರು, ಕ್ರಿಪ್ಟೊ ನಿಯಂತ್ರಣ ಸಂಬಂಧ ಚರ್ಚಿಸಿದರು. ಹಣಕಾಸು ಸಚಿವಾಲಯ ಈ ಬಗ್ಗೆ ಟ್ವೀಟ್‌ನಲ್ಲಿ ತಿಳಿಸಿದೆ.

ಜಿ-20 ರಾಷ್ಟ್ರಗಳ ಒಕ್ಕೂಟದ ಮುಂದಿನ ನೇತೃತ್ವವನ್ನು ಭಾರತ ವಹಿಸಲಿದ್ದು, ಭಾರತದ ನಾಯಕತ್ವಕ್ಕೆ ಐಎಂಎಫ್‌ ಬೆಂಬಲದ ಬಗ್ಗೆಯೂ ವ್ಯವಸ್ಥಾಪಕ ನಿರ್ದೇಶಕರು ಚರ್ಚಿಸಿದರು.

ಕಳೆದ ಏಪ್ರಿಲ್‌ನಲ್ಲಿ ಐಎಂಎಫ್‌, ವಿಶ್ವಬ್ಯಾಂಕ್‌ ಜತೆಗಿನ ಮಾತುಕತೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಕ್ರಿಪ್ಟೊ ಆಸ್ತಿಗಳ ನಿಯಂತ್ರಣಕ್ಕೆ ಅಂತಾರಾಷ್ಟ್ರೀಯ ಸಹಕಾರದ ಅಗತ್ಯ ಇದೆ ಎಂದು ತಿಳಿಸಿದ್ದರು. ಭಾರತದಲ್ಲಿ ಪ್ರಸ್ತುತ ಕ್ರಿಪ್ಟೊ ಆಸ್ತಿಗಳ ಮೇಲೆ 30% ತೆರಿಗೆಯನ್ನು ವಿಧಿಸಲಾಗುತ್ತಿದೆ. ಏಪ್ರಿಲ್‌ 1ರಿಂದ ಇದು ಅನ್ವಯವಾಗಿದೆ. ವರ್ಷಕ್ಕೆ 10,000ರೂ.ಗಿಂತ ಹೆಚ್ಚಿನ ಮೌಲ್ಯದ ವರ್ಚುವಲ್‌ ಆಸ್ತಿಗಳ ವರ್ಗಾವಣೆಗೆ 1% ಟಿಡಿಎಸ್‌ ಅನ್ವಯವಾಗುತ್ತದೆ. ಇದು ಜುಲೈ 1ರಿಂದ ಅನ್ವಯವಾಗುತ್ತಿದೆ.

Exit mobile version