ಬೆಂಗಳೂರು: ಬೆಂಗಳೂರು ಮೂಲದ ಫಿನ್‌ಟೆಕ್ ಸ್ಟಾರ್ಟಪ್ ರುಪೀಕ್, 180 ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಿದೆ.
ಇದರೊಂದಿಗೆ ರುಪೀಕ್‌ನ ಸಿಬ್ಬಂದಿ ಬಲದಲ್ಲಿ 15% ಕಡಿತವಾದಂತಾಗಿದೆ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಸ್ಟಾರ್ಟಪ್ ವಿಷಾದ ವ್ಯಕ್ತಪಡಿಸಿದೆ. 1,200 ಉದ್ಯೋಗಿಗಳಿದ್ದ ರುಪೀಕ್‌ನಲ್ಲಿ 180 ಮಂದಿ ಕೆಲಸ ಕಳೆದುಕೊಂಡಿದ್ದಾರೆ.
ಕಂಪನಿಯ ಬೆಳವಣಿಗೆಗೆ ಸಹಕರಿಸಿದ ಎಲ್ಲ ಸಿಬ್ಬಂದಿಯ ನಿಸ್ವಾರ್ಥ ಸೇವೆಯನ್ನು ನಾವು ಗೌರವಿಸುತ್ತೇವೆ. ಆದರೆ ನಾವು ಈಗ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂದಿದೆ ಎಂದು ರುಪೀಕ್ ಹೇಳಿಕೆ ಬಿಡುಗಡೆಗೊಳಿಸಿದೆ. ಕಂಪನಿಯ ಸ್ಥಾಪಕ ಮತ್ತು ಸಿಇಒ ಸುಮಿತ್ ಮನಿಯರ್ ಸಿಬ್ಬಂದಿಗೆ ಇ-ಮೇಲ್ ಬರೆದಿದ್ದಾರೆ. ಈ ಸ್ಟಾರ್ಟಪ್ ಆನ್‌ಲೈನ್ ಮೂಲಕ ಚಿನ್ನದ ಸಾಲ ವಹಿವಾಟು ನಡೆಸುತ್ತಿದೆ.
ಆರ್ಥಿಕ ಸಂಕಷ್ಟ ಫಿನ್ ಟೆಕ್ ಸ್ಟಾಟರ್ಪ್ ಗಳನ್ನು ಹೆಚ್ಚಾಗಿ ಕಾಡುತ್ತಿದೆ. ಇದರ ಪರಿಣಾಮ ಉದ್ಯೋಗ ಕಡಿತ ಶುರುವಾಗಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.