Site icon Vistara News

ಕೇರಳದಲ್ಲಿ ಓಣಂ ಲಾಟರಿಯ ಮೊದಲ ಬಹುಮಾನ ಮೊತ್ತ 25 ಕೋಟಿ ರೂ.ಗೆ ಏರಿಕೆ

lottery

ತಿರುವನಂತಪುರಂ: ಕೇರಳ ರಾಜ್ಯ ಸರ್ಕಾರ ನಡೆಸುತ್ತಿರುವ ಓಣಂ ಬಂಪರ್‌ ಲಾಟರಿಯ ಮೊದಲ ಬಹುಮಾನದ ಮೊತ್ತವನ್ನು ಬರೋಬ್ಬರಿ ೨೫ ಕೋಟಿ ರೂ.ಗೆ ಈ ವರ್ಷ ಏರಿಸಲಾಗಿದೆ. ಕಳೆದ ವರ್ಷ ಬಂಪರ್‌ ಬಹುಮಾನ ೧೨ ಕೋಟಿ ರೂ. ಆಗಿತ್ತು. ಈ ಬಂಪರ್‌ ಲಾಟರಿಯ ಮೂಲಕ ೪೦ ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಪ್ರಸಿದ್ಧ ಓಣಂ ಹಬ್ಬದ ಪ್ರಯುಕ್ತ ಇದು ನಡೆಯಲಿದೆ.

ಬಂಪರ್‌ ಬಹುಮಾನದ ಮೊತ್ತವನ್ನು ೨೫ ಕೋಟಿ, ೨೮ ಕೋಟಿ ರೂ. ಅಥವಾ ೫೦ ಕೋಟಿ ರೂ.ಗೆ ಏರಿಸಲು ಕೇರಳ ರಾಜ್ಯ ಲಾಟರಿ ನಿರ್ದೇಶನಾಲಯವು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಈ ಪೈಕಿ ೨೫ ಕೋಟಿ ರೂ. ಬಹುಮಾನ ನಿಗದಿಪಡಿಸಲು ಅನುಮೋದನೆ ಲಭಿಸಿದೆ. ಪ್ರತಿ ಟಿಕೆಟ್‌ನ ದರ ೫೦೦ ರೂ. ಆಗಿದೆ. ಎರಡನೇ ಬಹುಮಾನ ೫ ಕೋಟಿ ರೂ. ಹಾಗೂ ೧೦ ಟಿಕೆಟ್‌ಗಳಿಗೆ ಮೂರನೇ ಬಹುಮಾನವಾಗಿ ತಲಾ ೧ ಕೋಟಿ ರೂ. ಸಿಗಲಿದೆ. ಈ ವರ್ಷ ೯೦ ಲಕ್ಷ ಲಾಟರಿ ಟಿಕೆಟ್‌ಗಳನ್ನು ಸರ್ಕಾರ ಮುದ್ರಿಸಲಿದೆ.

ಕಳೆದ ವರ್ಷ ಟಿಕೆಟ್‌ ದರ ೩೦೦ ರೂ. ಆಗಿತ್ತು. ಆಗ ೫೪ ಲಕ್ಷ ಟಿಕೆಟ್‌ಗಳನ್ನು ಮುದ್ರಿಸಲಾಗಿತ್ತು. ಬಹುಮಾನದ ಮೊತ್ತ ಏರಿಸಿರುವುದರಿಂದ ಹೆಚ್ಚು ಆದಾಯ ಗಳಿಸುವ ನಿರೀಕ್ಷೆ ಸರ್ಕಾರಕ್ಕಿದ್ದರೆ, ಟಿಕೆಟ್‌ ದರ ಜಾಸ್ತಿಯಾಗಿರುವುದರಿಂದ ಮಾರಾಟ ಕಡಿಮೆಯಾಗುವ ಆತಂಕ ಏಜೆಂಟರಲ್ಲಿದೆ.

ಬಂಪರ್‌ ಲಾಟರಿ ವಿಜೇತರಿಗೆ ಕೈಗೆ ಸಿಗುವುದೆಷ್ಟು?

ಬಂಪರ್‌ ಬಹುಮಾನ ೨೫ ಕೋಟಿ ರೂ. ಆದರೂ, ೧೦% ಏಜೆನ್ಸಿ ಕಮೀಶನ್‌ ಮತ್ತು ೩೦% ತೆರಿಗೆ ಕಳೆದ ಬಳಿಕ ೧೫.೭೫ ಕೋಟಿ ರೂ.ಗಳು ವಿಜೇತರ ಪಾಲಾಗಲಿದೆ.

ಕೇರಳ ಸರ್ಕಾರ ಓಣಂ ಹಬ್ಬದ ಸಂದರ್ಭ ನಡೆಸುವ ಲಾಟರಿ ಯಶಸ್ವಿಯಾದರೆ, ಕ್ರಿಸ್‌ಮಸ್‌ ಮತ್ತು ಹೊಸ ವರ್ಷ ಸಂದರ್ಭ ಲಾಟರಿಯ ಮೊದಲ ಬಹುಮಾನವನ್ನು ೨೫ ಕೋಟಿ ರೂ.ಗೆ ಏರಿಸಲು ಪರಿಶೀಲಿಸಲಿದೆ.

ಕೇರಳದಲ್ಲಿ ಲಾಟರಿ ಬಹುಮಾನದ ಇತಿಹಾಸ

Exit mobile version