ನವ ದೆಹಲಿ: ರೇಟಿಂಗ್ ಏಜೆನ್ಸಿ ಫಿಚ್, ಭಾರತದ ಪ್ರಸಕ್ತ (2022-23) ಸಾಲಿನ ಜಿಡಿಪಿ ಮುನ್ನೋಟವನ್ನು 7.8%ರಿಂದ 7%ಕ್ಕೆ ಇಳಿಸಿದೆ. ಫಿಚ್ (Fitch) ಬುಧವಾರ ತನ್ನ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.
2023-24ರಲ್ಲಿ ಜಿಡಿಪಿ 6.7%ಕ್ಕೆ ಇಳಿಕೆಯಾಗಲಿದೆ ಎಂದು ಫಿಚ್ ರೇಟಿಂಗ್ ಏಜೆನ್ಸಿ ಅಂದಾಜಿಸಿದೆ. ಈ ಹಿಂದೆ 7.4%ಕ್ಕೆ ಅಂದಾಜಿಸಿತ್ತು. ಹಣದುಬ್ಬರದ ಹೆಚ್ಚಳ, ಬಿಗಿಯಾದ ಹಣಕಾಸು ನೀತಿ, ಕಚ್ಚಾ ತೈಲ ದರದ ಉಬ್ಬರದ ಪರಿಣಾಮ ಜಿಡಿಪಿ ಮುನ್ನೋಟವನ್ನು ಕಡಿತಗೊಳಿಸಿರುವುದಾಗಿ ಫಿಚ್ ರೇಟಿಂಗ್ ತಿಳಿಸಿದೆ.
ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 413 ಅಂಕ ಕುಸಿಯಿತು. 59,334 ಅಂಕಗಳಿಗೆ ಸ್ಥಿರವಾಯಿತು. ನಿಫ್ಟಿ 126 ಅಂಕಗಳನ್ನು ಕಳೆದುಕೊಂಡು 17,877ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.