ನವ ದೆಹಲಿ: ವಾಲ್ ಮಾರ್ಟ್ ಒಡೆತನದ ಇ-ಕಾಮರ್ಸ್ ದಿಗ್ಗಜ ಫ್ಲಿಪ್ ಕಾರ್ಟ್ ತನ್ನ 25,000 ಮಾಜಿ ಮತ್ತು ಹಾಲಿ ಉದ್ಯೋಗಿಗಳಿಗೆ 5670 ಕೋಟಿ ರೂ. ನಗದು ಮೊತ್ತವನ್ನು ವಿತರಿಸಲಿದೆ (Flipkart employees) ಎಂದು ಮೂಲಗಳು ತಿಳಿಸಿವೆ.
ಫ್ಲಿಪ್ ಕಾರ್ಟ್, ಮೈಂತ್ರಾ ಮತ್ತು ಫೋನ್ ಪೇಯ ಉದ್ಯೋಗಿಗಳಿಗೆ ಈ ನಗದು ಸಿಗಲಿದೆ. ಎಂಪ್ಲಾಯಿ ಸ್ಟಾಕ್ ಆಪ್ಷನ್ ತೆಗೆದುಕೊಂಡ ಉದ್ಯೋಗಿಗಳಿಗೆ ದೊರೆಯಲಿದೆ. ಫ್ಲಿಪ್ ಕಾರ್ಟ್‌ನ ಟಾಪ್ 20 ಉದ್ಯೋಗಿಗಳಿಗೆ ಹೆಚ್ಚಿನ ಮೌಲ್ಯ ಸಿಗಲಿದೆ.
ಫ್ಲಿಪ್ ಕಾರ್ಟ್ ಮತ್ತು ಫೋನ್ ಪೇಯನ್ನು ಪ್ರತ್ಯೇಕಗೊಳಿಸುವ ಪ್ರಕ್ರಿಯೆಯ ಭಾಗವಾಗಿ ವಾಲ್ ಮಾರ್ಟ್ ಈ ನಗದು ವಿತರಣೆಯನ್ನು ಕೈಗೊಂಡಿದೆ. ಫ್ಲಿಪ್‌ಕಾರ್ಟ್‌ನ ಇಎಸ್‌ಒಪಿಯನ್ನು (Employee stock option plans) ಹೊಂದಿರುವವರಿಗೆ ನಗದು ವಿತರಣೆಯನ್ನು ಫ್ಲಿಪ್ ಕಾರ್ಟ್ ಮಾಡಲಿದೆ ಎಂದು ಕಂಪನಿಯ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ತಿಳಿಸಿದ್ದಾರೆ.