ಉನ್ನಾವೊ: ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್, (Flipkart) ಉತ್ತರಪ್ರದೇಶದ ಉನ್ನಾವೊದಲ್ಲಿ ತನ್ನ ಅತಿ ದೊಡ್ಡ ದಾಸ್ತಾನು ಕೇಂದ್ರಕ್ಕೆ ಚಾಲನೆ ನೀಡಿದೆ.
ಈ ಘಟಕವು 1.3 ಲಕ್ಷ ಚದರ ಅಡಿ ಪ್ರದೇಶದಲ್ಲಿ ಹರಡಿದ್ದು, 28 ಲಕ್ಷ ಯುನಿಟ್ ಸಾಮರ್ಥ್ಯವನ್ನು ಹೊಂದಿದೆ. 1,000 ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ. ರಾಜ್ಯದ 300 ಪಿನ್‌ಕೊಡ್‌ಗಳಲ್ಲಿ ದಿನಸಿ ಸೇವೆಯನ್ನು ಒದಗಿಸಲಿದೆ.
ಉತ್ತರಪ್ರದೇಶದ ಕೈಗಾರಿಕಾ ಮತ್ತು ರಫ್ತು ಇಲಾಖೆಯ ಸಚಿವ ನಂದ್ ಗೋಪಾಲ್ ಅವರು ಈ ಕೇಂದ್ರವನ್ನು ಉದ್ಘಾಟಿಸಿದರು. ಲಖನೌ, ಕಾನ್ಪುರ ಮೊದಲಾದ ಆಯಕಟ್ಟಿನ ಸ್ಥಳಗಳಿಗೆ ಇಲ್ಲಿಂದ ಸಂಪರ್ಕ ವ್ಯವಸ್ಥೆಯೂ ಉತ್ತಮವಾಗಿದೆ. 100 ಕೆಟಗರಿಗಳಲ್ಲಿ ವಿಸ್ತೃತ ದಿನಸಿ ವಸ್ತುಗಳನ್ನು ಈ ಕೇಂದ್ರ ಪೂರೈಸಲಿದೆ.
ಫ್ಲಿಪ್‌ಕಾರ್ಟ್‌ಗೆ ಉತ್ತರಪ್ರದೇಶ ಮುಖ್ಯವಾದ ಮಾರುಕಟ್ಟೆಯಾಗಿದೆ. ಆನ್‌ಲೈನ್ ದಿನಸಿ ವ್ಯಾಪಾರಕ್ಕೆ ಬೇಡಿಕೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿಯ ಜತೆಗೆ ರೈತರಿಗೆ ಕೂಡ ಅವರ ಆದಾಯ ವೃದ್ಧಿಗೆ ಸಹಕಾರವಾಗಲಿದೆ ಎಂದು ಕಂಪನಿಯ ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥ ರಜನೀಶ್ ಕುಮಾರ್ ತಿಳಿಸಿದ್ದಾರೆ.