Site icon Vistara News

Price rise soon : ಆಹಾರ, ಹಾಲಿನ ಉತ್ಪನ್ನ, ಮದ್ಯ, ಫ್ರಿಡ್ಜ್‌, ಏಸಿ ದರ ಶೀಘ್ರ 3-10% ದುಬಾರಿ, ಬೆಲೆ ಏರಿಕೆಗೆ ರೆಡಿಯಾಗಿ

FMCG

#image_title

ನವ ದೆಹಲಿ: ಶೀಘ್ರದಲ್ಲಿಯೇ ದಿನ ನಿತ್ಯ ಬಳಕೆಯ ಹಲವಾರು ಪ್ಯಾಕೇಜ್ಡ್‌ ಆಹಾರ ಉತ್ಪನ್ನಗಳ ದರಗಳು ಏರಿಕೆಯಾಗಲಿದೆ. ಹಾಲಿನ ಉತ್ಪನ್ನಗಳು, ಮದ್ಯ, ರೆಫ್ರಿಜರೇಟರ್‌, ಆಮದಾಗುವ ಜವಳಿ ಉತ್ಪನ್ನಗಳು, ಏಸಿ ದರಗಳು 3-10% ತನಕ ಹೆಚ್ಚಳವಾಗಲಿದೆ. ಉತ್ಪಾದನಾ ವೆಚ್ಚದಲ್ಲಿ (Price rise soon) ಉಂಟಾಗಿರುವ ಏರಿಕೆಯನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಲಿರುವುದು ಇದಕ್ಕೆ ಕಾರಣ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿರುವುದು ಕೂಡ ಆಮದು ದುಬಾರಿಯಾಗಲು ಕಾರಣವಾಗಿದೆ.

ಎಫ್‌ಎಂಸಿಜಿ ವಲಯದ ಪ್ರಮುಖ ಕಂಪನಿಗಳ ಅಧಿಕಾರಿಗಳು ದರ ಏರಿಕೆಯನ್ನು ಖಚಿತಪಡಿಸಿದ್ದಾರೆ. ಅವರ ಪ್ರಕಾರ ಮುಂದಿನ 1-2 ತಿಂಗಳುಗಳಲ್ಲಿ ದರ ಏರಿಕೆಯಾಗಲಿದೆ. ಹೀಗಿದ್ದರೂ, ಹಣದುಬ್ಬರಕ್ಕೆ ಹೋಲಿಸಿದರೆ ಇದು ಅಲ್ಪ ಪ್ರಮಾಣದ ಏರಿಕೆಯಾಗಲಿದೆ ಎಂದಿದ್ದಾರೆ.

ಮುಂಬರುವ ಅಕ್ಟೋಬರ್‌ ತನಕ ಹಾಲಿನ ಉತ್ಪನ್ನಗಳ ದರಗಳು ಏರುಗತಿಯಲ್ಲಿ ಇರುವ ಸಾಧ್ಯತೆ ಇದೆ ಎಂದು ಮದರ್‌ ಡೇರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೀಶ್‌ ಬಂದೀಶ್‌ ತಿಳಿಸಿದ್ದಾರೆ. ಬೇಡಿಕೆ ಮತ್ತು ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಾಸವೇ ಇದಕ್ಕೆ ಕಾರಣ ಎಂದಿದ್ದಾರೆ.

ಸಣ್ಣ ಪ್ಯಾಕೇಟ್‌ಗಳಿಗೆ ಬದಲಾವಣೆ:

ಹಣದುಬ್ಬರ ಹೆಚ್ಚಳದ ಪರಿಣಾಮ ಸಿದ್ಧಪಡಿಸಿದ ಉತ್ಪನ್ನಗಳ ಮಾರಾಟ ಮಾಡುವ ಕಂಪನಿಗಳು ಸಣ್ಣ ಪ್ಯಾಕೇಟ್‌ಗಳಿಗೆ ಮೊರೆ ಹೋಗಿವೆ. ಸೋಪು, ಟೂತ್‌ಪೇಸ್ಟ್‌, ಕಾಫಿ, ಚಹಾ, ತಂಪು ಪಾನೀಯ, ಡಿಟರ್ಜೆಂಟ್‌ ಹೀಗೆ ನಿತ್ಯ ಬಳಕೆಯ ಎಲ್ಲ ಉತ್ಪನ್ನಗಳು ಇದೀಗ ಸಣ್ಣ ಪ್ಯಾಕೇಟ್‌ಗಳಲ್ಲಿ ಮಾರಾಟವಾಗುತ್ತಿವೆ. ಅವುಗಳಿಗೆ ಬೇಡಿಕೆಯೂ ಹೆಚ್ಚು ಎಂಬುದನ್ನು ಕಂಪನಿಗಳು ಕಂಡುಕೊಂಡಿವೆ. ಕಂಪನಿಗಳಿಗೆ 20-25% ಆದಾಯವನ್ನು ಈ ಸಣ್ಣ ಪ್ಯಾಕೇಟ್‌ಗಳಲ್ಲಿನ ಮಾರಾಟವೇ ಕೊಡುತ್ತಿದೆ. ಸಣ್ಣ ಪ್ಯಾಕೇಟ್‌ಗಳಲ್ಲಿ 1 ರೂ, 5 ರೂ, 10 ರೂ, 20 ರೂ.ಗಳ ಮೌಲ್ಯದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

Exit mobile version