Site icon Vistara News

Rupee @83 | ಡಾಲರ್‌ ಎದುರು ರೂಪಾಯಿ ಮೌಲ್ಯ ಮೊದಲ ಬಾರಿಗೆ 83ಕ್ಕೆ ಕುಸಿತ

rupee fall

ನವ ದೆಹಲಿ: ಡಾಲರ್‌ ಎದುರು ರೂಪಾಯಿ ಮೌಲ್ಯ ಬುಧವಾರ ಮೊಟ್ಟ ಮೊದಲ ಬಾರಿಗೆ 83 ಕ್ಕೆ ಕುಸಿಯಿತು. (Rupee @83) ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಪ್ರಾಬಲ್ಯ ಇದಕ್ಕೆ ಪ್ರಮುಖ ಕಾರಣವಾಗಿದೆ.

ರೂಪಾಯಿ ಮೌಲ್ಯ ಕುಸಿತವನ್ನು ತಡೆಯಲು ಮಧ್ಯಪ್ರವೇಶಿಸುತ್ತಿರುವ ಆರ್‌ಬಿಐ 82.40ರ ಮಟ್ಟದಿಂದ ಹಿಂದೆ ಸರಿದ ಬಳಿಕ, ಡಾಲರ್‌ ಖರೀದಿಯ ಭರಾಟೆ ವೃದ್ಧಿಸಿತು. ಇದು ರೂಪಾಯಿ 83ಕ್ಕೆ ಕುಸಿಯುವಂತೆ ಮಾಡಿತು.

ಆರ್‌ಬಿಐ ಈ ಹಿಂದೆ 82.40ರ ಮಟ್ಟದಲ್ಲಿ ಮಧ್ಯಪ್ರವೇಶಿಸಿ, ಮುಂದಿನ ಹಂತದ ಕುಸಿತವನ್ನು ತಡೆಯುತ್ತಿತ್ತು. ಮಾರುಕಟ್ಟೆಯಿಂದ ಆರ್‌ಬಿಐ ನಿರ್ಗಮಿಸಿದ ಬೆನ್ನಲ್ಲೇ ರೂಪಾಯಿ ಮೌಲ್ಯ ಕುಸಿಯಿತು.

ಭಾರತಕ್ಕೆ ಆಮದು ದುಬಾರಿ: ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಭಾರತಕ್ಕೆ ಆಮದು ವೆಚ್ಚ ದುಬಾರಿಯಾಗುತ್ತದೆ. ರಫ್ತುದಾರರಿಗೆ ಡಾಲರ್‌ ರೂಪದಲ್ಲಿನ ಆದಾಯವನ್ನು ರೂಪಾಯಿಗೆ ಪರಿವರ್ತಿಸಿದಾಗ ಲಾಭವಾಗುತ್ತದೆ. ಕಚ್ಚಾ ತೈಲ, ಬಂಗಾರ, ಕೈಗಾರಿಕಾ ಕಚ್ಚಾ ವಸ್ತುಗಳ ಆಮದು ವೆಚ್ಚ ಹೆಚ್ಚಳವಾಗಲಿದೆ.

ಇದನ್ನೂ ಓದಿ : Rupee @81 | ಡಾಲರ್‌ ಎದುರು ಮೊದಲ ಬಾರಿಗೆ ರೂಪಾಯಿ 81ಕ್ಕೆ ಕುಸಿತ, ಪರಿಣಾಮವೇನು?

Exit mobile version