ನವ ದೆಹಲಿ: ವಿಶ್ವ ಆರ್ಥಿಕತೆಯ ಮಂದಗತಿಯ ನಡುವೆ ಭಾರತದ ಸಿರಿವಂತರ ಸಂಪತ್ತು ವೃದ್ಧಿಸುತ್ತಿದೆ. 2022ರ ಫೋರ್ಬ್ಸ್ 100 ಭಾರತೀಯ ಸಿರಿವಂತರ ಪಟ್ಟಿ ಬಿಡುಗಡೆಯಾಗಿದೆ. (Forbes rich list) ಇವರ ಒಟ್ಟು ಸಂಪತ್ತು 800 ಶತಕೋಟಿ ಡಾಲರ್‌ಗೆ (64 ಲಕ್ಷ ಕೋಟಿ ರೂ.) ಏರಿಕೆಯಾಗಿದೆ.
ಟಾಪ್ 10 ಶ್ರೀಮಂತ ಭಾರತೀಯರ ಸಂಪತ್ತು 385 ಶತಕೋಟಿ ಡಾಲರ್‌ಗೆ (31 ಲಕ್ಷ ಕೋಟಿ ರೂ.) ವೃದ್ಧಿಸಿದೆ. ಗೌತಮ್ ಅದಾನಿಯವರಿಗೆ ಮೂಲ ಸೌಕರ್ಯ ವಲಯದ ಉದ್ದಿಮೆಯಲ್ಲಿನ ಬೆಳವಣಿಗೆ ಅನುಕೂಲಕರವಾಗಿತ್ತು ಎಂದು ಫೋರ್ಬ್ಸ್ ತಿಳಿಸಿದೆ.
ಫೋರ್ಬ್ಸ್ ಪ್ರಕಾರ ಭಾರತದ ಟಾಪ್-10 ಶ್ರೀಮಂತರು: (ಕೋಟಿ ರೂ.ಗಳಲ್ಲಿ)
ಗೌತಮ್ ಅದಾನಿ: ೧೨,೧೧,೪೬೦
ಮುಕೇಶ್ ಅಂಬಾನಿ: 7,10,723
ರಾಧಾಕೃಷ್ಣ ಧಮಾನಿ : ೨,೨೨,೯೦೮
ಸೈರಸ್ ಪೂನಾವಾಲಾ: 1,73,642
ಶಿವ್ ನಡಾರ್: ೧,೭೨,೮೩೪
ಸಾವಿತ್ರಿ ಜಿಂದಾಲ್: 1,32,452
ದಿಲೀಪ್ ಸಾಂಘ್ವಿ : ೧,೨೫,೧೮೪
ಹಿಂದೂಜಾ ಬ್ರದರ್ಸ್: 1,22,761
ಕುಮಾರ್ ಬಿರ್ಲಾ: ೧,೨೧,೧೪೬
ಬಜಾಜ್ ಫ್ಯಾಮಿಲಿ: 1,17,915
ಈ ವರ್ಷ 9 ಹೊಸಬರು ಫೋರ್ಬ್ಸ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಫ್ಯಾಶನ್ ರಿಟೇಲರ್ ನೈಕಾದ ಮುಖ್ಯಸ್ಥೆ ಫಲ್ಗುಣಿ ನಾಯರ್, ಎತ್ನಿಕ್ ಗಾರ್ಮೆಂಟ್ಸ್ ಉದ್ಯಮಿ ರವಿ ಮೋದಿ, ಷೇರು ಹೂಡಿಕೆದಾರ ರಾಕೇಶ್ ಜುಂಜುನ್ ವಾಲಾರ ಪತ್ನಿ ರೇಖಾ ಜುಂಜುನ್‌ವಾಲಾ ಇದ್ದಾರೆ.