Site icon Vistara News

Forbes World Billionaires List: ವಿಶ್ವದ ಶ್ರೀಮಂತ ಮಹಿಳೆಯರು; ಭಾರತದ ಸಾವಿತ್ರಿ ಜಿಂದಾಲ್‌ಗೆ ಎಷ್ಟನೇ ಸ್ಥಾನ?

Forbes World Billionaires List

ಫೋರ್ಬ್ಸ್‌ನ ವಿಶ್ವ ಬಿಲಿಯನೇರ್‌ಗಳ ಪಟ್ಟಿಯಲ್ಲಿ (Forbes World Billionaires List) ಅತ್ಯಂತ ಸಣ್ಣ ಪಾಲನ್ನು ಮಹಿಳೆಯರು (womens) ಪಡೆದಿದ್ದಾರೆ. ಈ ವರ್ಷ 2,781 ಬಿಲಿಯನೇರ್‌ಗಳಲ್ಲಿ (Billionaires) 369 ಅಂದರೆ ಶೇ. 13.3ರಷ್ಟು ಮಹಿಳೆಯರು ಬಿಲಿಯನೇರ್ ಗಳಾಗಿ (Women Billionaires) ಗುರುತಿಸಿಕೊಂಡಿದ್ದಾರೆ. 2023 ರಲ್ಲಿ 337 ರಿಂದ ಮಹಿಳೆಯರು ಈ ಪಟ್ಟಿಯಲ್ಲಿದ್ದರು. ಇವರ ಒಟ್ಟು ಆಸ್ತಿ ಮೌಲ್ಯ ಸುಮಾರು 1.8 ಲಕ್ಷ ಕೋಟಿ ಡಾಲರ್.. ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು 240 ಶತಕೋಟಿ ಡಾಲರ್ ಹೆಚ್ಚಾಗಿದೆ.

ಸತತ ನಾಲ್ಕನೇ ವರ್ಷ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎಂದು ಲೋರಿಯಲ್ ಉತ್ತರಾಧಿಕಾರಿ ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ (Françoise Bettencourt Meyers) ಸ್ಥಾನ ಪಡೆದಿದ್ದಾರೆ. ಆಕೆಯ ಸಂಪತ್ತು ಕಳೆದ 12 ತಿಂಗಳುಗಳಲ್ಲಿ 19 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಆಕೆಯ ನಿವ್ವಳ ಮೌಲ್ಯ 99.5 ಶತಕೋಟಿ ಡಾಲರ್ ಆಗಿದೆ. 100 ಶತಕೋಟಿ ಡಾಲರ್ ಕ್ಲಬ್‌ನ ಪ್ರವೇಶಸಿದ ಮೊದಲ ಮಹಿಳೆ ಎಂಬ ಖ್ಯಾತಿ ಇವರದಾಗಿದೆ.

ಎರಡು ದಶಕಗಳಿಗೂ ಹೆಚ್ಚು ಕಾಲ ಬೆಟೆನ್‌ಕೋರ್ಟ್ ನಂ. 1 ಸ್ಥಾನದಲ್ಲಿದ್ದಾರೆ. 2006 ರಿಂದ 2017 ರವರೆಗೆ ಆರು ವರ್ಷಗಳ ಕಾಲ ಪ್ರಶಸ್ತಿಯನ್ನು ಹೊಂದಿದ್ದ ಅವರ ತಾಯಿ ಲಿಲಿಯಾನ್ ಬೆಟೆನ್‌ಕೋರ್ಟ್ ಅವರ ಮರಣದ ಎರಡು ವರ್ಷಗಳ ಅನಂತರ 2019 ರಲ್ಲಿ ಬೆಟೆನ್‌ಕೋರ್ಟ್ ಮೇಯರ್ಸ್ ಮೊದಲ ಸ್ಥಾನವನ್ನು ಪಡೆದರು.

ವಾಲ್‌ಮಾರ್ಟ್ ಸಂಸ್ಥಾಪಕ ಸ್ಯಾಮ್ ವಾಲ್ಟನ್ ಅವರ ಏಕೈಕ ಪುತ್ರಿ ಆಲಿಸ್ ವಾಲ್ಟನ್ ಎರಡನೆಯ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. 2018 ಮತ್ತು 2020 ರಲ್ಲಿ ಇವರು ಮೊದಲ ಸ್ಥಾನದಲ್ಲಿದ್ದರು.
ವಿಶ್ವದ 10 ಶ್ರೀಮಂತ ಮಹಿಳೆಯರಲ್ಲಿ ಒಂಬತ್ತು ಮಂದಿ ತಮ್ಮ ಆಸ್ತಿಯನ್ನು ತಂದೆ, ಗಂಡ ಅಥವಾ ತಾಯಿಯಿಂದ ಪಡೆದಿದ್ದಾರೆ. ವಿಚ್ಛೇದನದ ಬಳಿಕ ತಮ್ಮ ಅದೃಷ್ಟವನ್ನು ಬದಲಾಯಿಸಿಕೊಂಡ ಟಾಪ್ 10 ರಲ್ಲಿ ಸ್ಥಾನ ಪಡೆದಿರುವುದು ಮೆಕೆಂಜಿ ಸ್ಕಾಟ್ ಮಾತ್ರ.

35.6 ಶತಕೋಟಿ ಡಾಲರ್ ಮೌಲ್ಯದ ಜೆಫ್ ಬೆಜೋಸ್ ಅವರ ಮಾಜಿ ಪತ್ನಿ ಸ್ಕಾಟ್ ಅವರ ಮೌಲ್ಯ ಕಳೆದ ವರ್ಷದಿಂದ 11.2 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಇವರು ಇತ್ತೀಚೆಗೆ 300 ಕ್ಕೂ ಹೆಚ್ಚು ಲಾಭೋದ್ದೇಶವಿಲ್ಲದವರಿಗೆ 640 ದಶಲಕ್ಷ ಡಾಲರ್ ದೇಣಿಗೆ ನೀಡಿದ್ದಾರೆ. ಇವರು ಇಷ್ಟೊಂದು ದಾನ ಮಾಡುವುದಲ್ಲದೇ ಇದ್ದರೆ ಒಟ್ಟು 69 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿರುತ್ತಿದ್ದರು. ಈ ಬಾರಿ ಇವರು ಐದನೇ ಸ್ಥಾನದಲ್ಲಿದ್ದಾರೆ.

ಟಾಪ್ 10ರಲ್ಲಿ ಇರುವವವರು


ಅಬಿಗೈಲ್ ಜಾನ್ಸನ್

ಇವರ ನಿವ್ವಳ ಮೌಲ್ಯ 29 ಶತಕೋಟಿ ಡಾಲರ್. ವಯಸ್ಸು 62. ಫಿಡೆಲಿಟಿ ಇನ್ವೆಸ್ಟ್‌ಮೆಂಟ್ಸ್ ನಲ್ಲಿ ಸಿಇಒ ಸ್ಥಾನದಲ್ಲಿರುವ ಇವರು . ಅಮೆರಿಕದವರಾದ ಇವರು ಈ ವರ್ಷ ಟಾಪ್ 10ನೇ ಶ್ರೀಮಂತ ಮಹಿಳೆಯಾಗಿದ್ದಾರೆ. ತಂದೆಯ ಬಳಿಕ ಇವರಿಗೆ ಈ ಅಧಿಕಾರ ಸಿಕ್ಕಿತ್ತು.

ಗಿನಾ ರೈನ್ಹಾರ್ಟ್

ಇವರ ನಿವ್ವಳ ಮೌಲ್ಯ 30.8 ಶತಕೋಟಿ ಡಾಲರ್. ವಯಸ್ಸು 70. ಆಸ್ಟ್ರೇಲಿಯಾದವರಾದ ಇವರು ಆಸ್ಟ್ರೇಲಿಯನ್ ಮ್ಯಾಗ್ನೆಟ್ ಗಣಿಗಾರಿಕೆ ಮತ್ತು ಕೃಷಿ ಕಂಪನಿ ಹ್ಯಾನ್ಕಾಕ್ ಪ್ರಾಸ್ಪೆಕ್ಟಿಂಗ್ ಗ್ರೂಪ್ ಅಧ್ಯಕ್ಷರಾಗಿದ್ದಾರೆ. ತಂದೆಯ ಬಳಿಕ ಇವರಿಗೆ ಈ ಸ್ಥಾನ ಪ್ರಾಪ್ತವಾಗಿದೆ. ಇವರು ವಿಶ್ವದ 9ನೇ ಶ್ರೀಮಂತ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.

ಮಿರಿಯಮ್ ಅಡೆಲ್ಸನ್ ಮತ್ತು ಕುಟುಂಬ

ಎಂಟನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 32 ಶತಕೋಟಿ ಡಾಲರ್. ವಯಸ್ಸು 78. ಅಡೆಲ್ಸನ್ ಮತ್ತು ಅವರ ಕುಟುಂಬವು ವಿಶ್ವದ ಅತಿದೊಡ್ಡ ಕ್ಯಾಸಿನೊ ನಿರ್ವಾಹಕರಲ್ಲಿ ಒಂದಾದ ಲಾಸ್ ವೇಗಾಸ್ ಸ್ಯಾಂಡ್ಸ್‌ನ ಅರ್ಧಕ್ಕಿಂತ ಹೆಚ್ಚು ಮಾಲೀಕತ್ವವನ್ನು ಹೊಂದಿದೆ. ಪತಿಯ ಮರಣದ ಬಳಿಕ ಮಿರಿಯಮ್ ಪಾಲನ್ನು ಪಡೆದರು.

ರಾಫೆಲಾ ಅಪೊಂಟೆ-ಡಯಮಂಟ್

ಏಳನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 33.1 ಶತಕೋಟಿ ಡಾಲರ್. ವಯಸ್ಸು 79. ಸ್ವಿಟ್ಜರ್ಲೆಂಡ್ ನವರಾದ ಇವರು ಎಂಎಸ್ ಸಿ ಯ ಸಹಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಪತಿಯಿಂದ ಶೇ. 50ರಷ್ಟು ಪಾಲು ಪಡೆದರು. ಎಂಎಸ್ ಸಿಯ ಕಂಪನಿಯಲ್ಲಿ ರಾಫೆಲಾ ವಿಶ್ವದ ಅತಿದೊಡ್ಡ ಹಡಗುಗಳನ್ನು ಅಲಂಕರಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ.


ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ

ಆರನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 33.5 ಶತಕೋಟಿ ಡಾಲರ್. ವಯಸ್ಸು 74. ಉಕ್ಕು ಉದ್ಯಮದಲ್ಲಿರುವ ಇವರು ಭಾರತದ ಪೌರತ್ವವನ್ನು ಪಡೆದಿದ್ದಾರೆ. ಜಿಂದಾಲ್ ಗ್ರೂಪ್‌ನ ಅಧ್ಯಕ್ಷೆರಾಗಿರುವ ಈ ಇವರು ಓಂ ಪ್ರಕಾಶ್ ಜಿಂದಾಲ್ ಅವರ ಪತ್ನಿ. ಭಾರತದ ಅತ್ಯಂತ ಶ್ರೀಮಂತ ಮಹಿಳೆ. ಜಿಂದಾಲ್ ಗ್ರೂಪ್ ಉಕ್ಕು, ವಿದ್ಯುತ್, ಸಿಮೆಂಟ್ ಮತ್ತು ಮೂಲಸೌಕರ್ಯ ಒದಗಿಸುವ ಕಾರ್ಯದಲ್ಲಿ ಸಕ್ರಿಯವಾಗಿದೆ.

ಮ್ಯಾಕೆಂಜಿ ಸ್ಕಾಟ್

ಐದನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 35.6 ಶತಕೋಟಿ ಡಾಲರ್. ವಯಸ್ಸು 53. ಯು.ಎಸ್. ನವರಾದ ಇವರು 2019 ರಲ್ಲಿ ಜೆಫ್ ಬೆಜೋಸ್ ಅವರ ವಿಚ್ಛೇದನದ ಬಳಿಕ ಅಮೆಜಾನ್‌ ನಲ್ಲಿ ಶೇ. 4ರಷ್ಟು ಪಾಲನ್ನು ಪಡೆದರು.

ಜಾಕ್ವೆಲಿನ್ ಮಾರ್ಸ್

ನಾಲ್ಕನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 38.5 ಶತಕೋಟಿ ಡಾಲರ್. ವಯಸ್ಸು: 84. ಯುಎಸ್ ನವರಾದ ಇವರು ಕ್ಯಾಂಡಿ, ಸಾಕುಪ್ರಾಣಿಗಳ ಆಹಾರದಿಂದ ಆದಾಯ ಗಳಿಸುತ್ತಿದ್ದಾರೆ.
Mars Inc ನ ಉತ್ತರಾಧಿಕಾರಿ ಜಾಕ್ವೆಲಿನ್ ಮಾರ್ಸ್ ತನ್ನ ಸಹೋದರ ಜಾನ್ ಮಾರ್ಸ್ ಮತ್ತು ಇನ್ನೋರ್ವ ದಿವಂಗತ ಸಹೋದರ ಫಾರೆಸ್ಟ್ ಜೂನಿಯರ್ ಅವರ ನಾಲ್ಕು ಹೆಣ್ಣುಮಕ್ಕಳೊಂದಿಗೆ ಈ ಉದ್ಯಮ ನಡೆಸುತ್ತಿದ್ದಾರೆ. ಇವರ ಕಂಪೆನಿಯು M&Ms, Snickers, Ben’s Original ಮತ್ತು Pedigree ನಂತಹ ಸಾಂಪ್ರದಾಯಿಕ ಬ್ರ್ಯಾಂಡ್‌ಗಳನ್ನು ಹೊಂದಿದೆ. ಇದನ್ನು ಆಕೆಯ ಅಜ್ಜ ಫ್ರಾಂಕ್ ಸಿ. ಮಾರ್ಸ್ ಸ್ಥಾಪಿಸಿದ್ದರು.

ಜೂಲಿಯಾ ಕೋಚ್ ಮತ್ತು ಕುಟುಂಬ

ಮೂರನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 64.3 ಶತಕೋಟಿ ಡಾಲರ್. ವಯಸ್ಸು: 61. ಅಮೆರಿಕದವರಾದ ಇವರು ಎರಡನೇ ಸ್ಥಾನದಿಂದ ಮೂರನೇ ಸ್ಥಾನ ಕ್ಕೆ ಇಳಿದಿದ್ದಾರೆ. ಜೂಲಿಯಾ ತನ್ನ ಮೂವರು ಮಕ್ಕಳೊಂದಿಗೆ ಕೋಚ್ ಇಂಡಸ್ಟ್ರೀಸ್‌ನಲ್ಲಿ ಶೇ. 42ರಷ್ಟು ಪಾಲನ್ನು ಹೊಂದಿದ್ದಾರೆ. ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನ ಟ್ರಸ್ಟಿಯಾಗಿರುವ ಇವರು ತೈಲ ಸಂಸ್ಕರಣೆ ಮತ್ತು ಪೇಪರ್ ಟವೆಲ್‌ಗಳವರೆಗಿನ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Forbes India: ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಖ್ಯಾತ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ

ಆಲಿಸ್ ವಾಲ್ಟನ್

ಎರಡನೇ ಸ್ಥಾನದಲ್ಲಿರುವ ಇವರ ನಿವ್ವಳ ಮೌಲ್ಯ 72.3 ಶತಕೋಟಿ ಡಾಲರ್. ವಯಸ್ಸು 74. ಅಮೆರಿಕದವರಾದ ಇವರು ವಾಲ್‌ಮಾರ್ಟ್‌ನ ಉದ್ಯಮದಲ್ಲಿದ್ದಾರೆ. ಅಮೆರಿಕದ ಅತ್ಯಂತ ಶ್ರೀಮಂತ ಮಹಿಳೆ ಎಂದು ಗುರುತಿಸಿಕೊಂಡಿರುವ ಇವರು ವಾಲ್ಮಾರ್ಟ್ ಸಂಸ್ಥಾಪಕ ಸ್ಯಾಮ್ ವಾಲ್ಟನ್ ಅವರ ಏಕೈಕ ಪುತ್ರಿ.


ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ ಮತ್ತು ಕುಟುಂಬ

ಫೋರ್ಬ್ ಪಟ್ಟಿಯಲ್ಲಿ ಮೊದಲನೇ ಸ್ಥಾನ ಗಳಿಸಿರುವ ಇವರ ನಿವ್ವಳ ಮೌಲ್ಯ 99.5 ಶತಕೋಟಿ ಡಾಲರ್. ವಯಸ್ಸು 70. ಫ್ರಾನ್ಸ್ ನವರಾದ ಇವರು ಲೋರಿಯಲ್ ಸಂಸ್ಥಾಪಕರ ಮೊಮ್ಮಗಳು. ಸತತ ನಾಲ್ಕನೇ ವರ್ಷ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

Exit mobile version