ನವ ದೆಹಲಿ: ಗುಜರಾತ್‌ನ ಸೂರತ್‌ನಲ್ಲಿರುವ ಎಬಿಜಿ ಶಿಪ್‌ಯಾರ್ಡ್ ಲಿಮಿಟೆಡ್‌ನ (ABG Shipyard) ಮಾಜಿ ಅಧ್ಯಕ್ಷ ರಿಶಿ ಕಮಲೇಶ್ ಅಗ್ರವಾಲ್ ಅವರನ್ನು 22,000 ಕೋಟಿ ರೂ.ಗಳ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ಸಿಬಿಐ ಬಂಧಿಸಿದೆ.
ಸಿಬಿಐ ರಿಶಿ ಕಮಲೇಶ್ ಅಗ್ರವಾಲ್ ಅವರನ್ನು ಕ್ರಿಮಿನಲ್ ಸಂಚು, ವಂಚನೆ, ಅಧಿಕಾರದ ದುರ್ಬಳಕೆಯ ಆರೋಪಗಳನ್ನು ದಾಖಲಿಸಲಾಗಿದೆ.
ಏನಿದು ಬ್ಯಾಂಕ್ ಸಾಲ ವಂಚನೆ ಹಗರಣ?
ಸಿಬಿಐ ಪ್ರಕಾರ ಎಬಿಜಿ ಶಿಪ್‌ಯಾರ್ಡ್ 2001ರಿಂದ ಎಸ್‌ಬಿಐ ಜತೆ ಹಣಕಾಸು ವ್ಯವಹಾರ ಹೊಂದಿತ್ತು. 2005-2012ರ ಅವಧಿಯಲ್ಲಿ ಎಸ್‌ಬಿಐ, ಐಸಿಐಸಿಐ ಸೇರಿದಂತೆ 28 ಬ್ಯಾಂಕ್‌ಗಳ ಒಕ್ಕೂಟದಿಂದ ಭಾರಿ ಪ್ರಮಾಣದಲ್ಲಿ ಸಾಲ ಪಡೆದಿತ್ತು. ವಿಧಿ ವಿಜ್ಞಾನ ಆಡಿಟ್ ಪ್ರಕಾರ 2012-೨೦೧೭ರ ಅವಧಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆದಿತ್ತು. 2019 ಏಪ್ರಿಲ್ ಮತ್ತು 2020 ಮಾರ್ಚ್ ಅವಧಿಯಲ್ಲಿ ಹಲವು ಬ್ಯಾಂಕ್‌ಗಳು ಎಬಿಜಿ ಶಿಪ್‌ಯಾರ್ಡ್ ಖಾತೆಯನ್ನು ಎನ್‌ಪಿಎ ಎಂದು ಘೋಷಿಸಿತ್ತು. ಒಟ್ಟು 22,842 ಕೋಟಿ ರೂ.ಗಳ ಹಗರಣ ಇದಾಗಿದೆ. ಸಿಬಿಐ ಪ್ರಕಾರ, ಎಬಿಜಿ ಶಿಪ್ ಯಾರ್ಡ್ ಬ್ಯಾಂಕ್ ಸಾಲದಿಂದ ಪಡೆದ ಹಣವನ್ನು ತನ್ನ ಅಧೀನ ಕಂಪನಿಗಳಲ್ಲಿ ಹಾಗೂ ವಿದೇಶಗಳಲ್ಲಿನ ತನ್ನ ಸಂಸ್ಥೆಗಳಿಗೆ ವರ್ಗಾಯಿಸಿತ್ತು. ವೈಯಕ್ತಿಕ ಉದ್ದೇಶಗಳಿಗೆ ಸಾಲದ ದುರ್ಬಳಕೆಯಾಗಿತ್ತು.