ಮುಂಬಯಿ: ಜಾರಿ ನಿರ್ದೇಶನಾಲಯವು ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ನ (NSE) ಮಾಜಿ ಎಂ.ಡಿ ಹಾಗೂ ಸಿಇಒ ರವಿ ನಾರಾಯಣ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ರಾತ್ರಿ ಬಂಧಿಸಿದೆ.
ಜಾರಿ ನಿರ್ದೇಶನಾಲಯವು ಎನ್‌ಎಸ್‌ಇನಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಈಗಾಗಲೇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣನ್ ಮತ್ತು ಮಾಜಿ ಅಧಿಕಾರಿ ಆನಂದ್ ಸುಬ್ರಮಣಿಯನ್, ಮುಂಬಯಿನ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಅವರನ್ನು ಬಂಧಿಸಿದೆ. ಇದರೊಂದಿಗೆ ಇ.ಡಿ ತನಿಖೆ ಮತ್ತಷ್ಟು ವ್ಯಾಪಕವಾದಂತಾಗಿದೆ.
ಎನ್‌ಎಸ್‌ಇನಲ್ಲಿ ನಡೆದಿರುವ ಕೋ-ಲೊಕೇಶನ್ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ. ಟೆಲಿಫೋನ್ ಕದ್ದಾಲಿಕೆ ನಡೆಸಿದ ಆರೋಪವೂ ರವಿ ನಾರಾಯಣ್ ಅವರ ಮೇಲೆ ಇದೆ. ಎನ್‌ಎಸ್‌ಇ ಆಡಳಿತ ವರ್ಗ ಮತ್ತು ಕೆಲ ಷೇರು ಬ್ರೋಕರ್‌ಗಳ ನಡುವೆ ಎನ್‌ಎಸ್‌ಇ ಕಚೇರಿಯಲ್ಲಿಯೇ ನಡೆದ ಅಕ್ರಮ ವ್ಯವಹಾರಗಳು ಕೋ-ಲೊಕೇಶನ್ ಹಗರಣವಾಗಿದೆ. ರವಿ ನಾರಾಯಣ್ 1994ರಿಂದ 2013 ತನಕ ಎನ್‌ಎಸ್‌ಇಯ ಎಂ.ಡಿ ಮತ್ತು ಸಿಇಒ ಆಗಿದ್ದರು.