ಬೆಂಗಳೂರು: ಸಾಲದ ಆ್ಯಪ್ ಮೂಲಕ ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣಗಳ ಬಗ್ಗೆ ಸಿಸಿಬಿ ಎಕನಾಮಿಕ್ಸ್ ವಿಂಗ್ ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ಈ ಸಂಬಂಧ 37 ಕೋಟಿ ರೂ.ಗಳನ್ನು ಮುಟ್ಟುಗೋಲು (Loan app) ಹಾಕಿಕೊಳ್ಳಲಾಗಿದೆ.
ಸಾಲದ ಆ್ಯಪ್ ಮೂಲಕ ವಂಚನೆಗೆ ಸಂಬಂಧಿಸಿ, ಅಂಥ ಕಂಪನಿಗಳ ಇಬ್ಬರು ನಿರ್ದೇಶಕರು, ಚಾರ್ಟೆಂಡ್ ಅಕೌಂಟೆಂಟ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಬೆಂಗಳೂರು ನಗರದಲ್ಲಿ 24 ಕೇಸ್‌ಗಳ ತನಿಖೆ ನಡೆಯುತ್ತಿದೆ.
ಸಿಸಿಬಿ ಎಕಾನಾಮಿಕ್ ವಿಂಗ್ ನಿಂದ ಲೋನ್ ಆ್ಯಪ್ ಕೇಸ್ ತನಿಖೆ ಚುರುಕಾಗಿದೆ. ಮಾರತಹಳ್ಳಿ , ಹೆಚ್.ಎಸ್.ಆರ್.ಲೇಔಟ್, ಬನಶಂಕರಿ ಸೇರಿದಂತೆ 24 ಠಾಣೆಗಳಲ್ಲಿ ದಾಖಲಾಗಿರುವ ಕೇಸ್‌ಗಳ ಬಗ್ಗೆ ತನಿಖೆ ಮುಂದುವರಿದಿದೆ. 2021 ರಿಂದ ಸಿಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಒಟ್ಟು 256 ಲೋನ್ ಆ್ಯಪ್ ಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಸಾಲದ ಸಂಸ್ಕರಣೆ, ಪುನಾರಚನೆ ಹೆಸರಿನಲ್ಲಿ ಖದೀಮರು ಗ್ರಾಹಕರನ್ನು ವಂಚಿಸುತ್ತಿದ್ದಾರೆ. ಚೀನಾ ಮೂಲದ ಲೋನ್ ಆ್ಯಪ್ ಮೂಲಕ ವಂಚನೆ ನಡೆಯುತ್ತಿದೆ ಎಂದು ತನಿಖೆಯ ವೇಳೆ ಗೊತ್ತಾಗಿದೆ.