ನವ ದೆಹಲಿ: ಕೇಂದ್ರ ಸರ್ಕಾರ ಬುಧವಾರ ತೊಗರಿ, ಉದ್ದು ಮತ್ತು ಸಂಸ್ಕರಿತ ತಾಳೆ ಎಣ್ಣೆಯ ಸುಂಕ ರಹಿತ ಆಮದಿಗೆ 2024ರ ಮಾರ್ಚ್ 31ರ ತನಕ ಅನುಮೋದನೆ ನೀಡಿದೆ. ಈ ಸಂಬಂಧ ವಿದೇಶ ವ್ಯಾಪಾರ ನಿರ್ದೇಶನಾಲಯ ಅಧಿಸೂಚನೆ ಹೊರಡಿಸಿದೆ. (Free import) ಈ ಹಿಂದೆ 2022 ಡಿಸೆಂಬರ್ 31 ರ ಗಡುವು ನಿಗದಿಯಾಗಿತ್ತು.
ಭಾರತ ಕಳೆದ ಏಪ್ರಿಲ್ -ಅಕ್ಟೋಬರ್ ಅವಧಿಯಲ್ಲಿ 20 ಕೋಟಿ ಡಾಲರ್ (1,620 ಕೋಟಿ ರೂ.) ಮೌಲ್ಯದ ಉದ್ದು, 1571 ಕೋಟಿ ರೂ. ಮೌಲ್ಯದ ತೊಗರಿ ಬೇಳೆಯನ್ನು ಆಮದು ಮಾಡಿಕೊಂಡಿತ್ತು. ಹೀಗಿದ್ದರೂ, ಕೇರಳದ ಯಾವುದೇ ಬಂದರು ಮೂಲಕ ಸಂಸ್ಕರಿತ ತಾಳೆ ಎಣ್ಣೆ ಆಮದಿಗೆ ಅವಕಾಶ ಇಲ್ಲ.
ಭಾರತವು ಗೋಧಿ, ಅಕ್ಕಿ, ರಾಗಿ ಮೊದಲಾದ ಆಹಾರ ಧಾನ್ಯಗಳನ್ನು ಹೆಚ್ಚಾಗಿ ರಫ್ತು ಮಾಡುತ್ತದೆ.