ನವ ದೆಹಲಿ: ಕೇಂದ್ರ ಸರ್ಕಾರ ಸ್ಥಳೀಯ ಉತ್ಪದನೆಯನ್ನು ಉತ್ತೇಜಿಸುವ ಸಲುವಾಗಿ 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆಮದು ಸುಂಕವನ್ನು ಹೆಚ್ಚಿಸಿದೆ. ಕೆಲವು ವಸ್ತುಗಳ ಸುಂಕವನ್ನು ಕಡಿತಗೊಳಿಸಲಾಗಿದ್ದು, ಅವುಗಳ ದರ ಇಳಿಕೆಯಾಗಲಿದೆ. ವಿವರ ಇಲ್ಲಿದೆ.
ಯಾವುದು ದುಬಾರಿ: (Price hike) ಎಲ್‌ಇಡಿ ಬಲ್ಬ್, ಸಿಗರೇಟ್, ಖಾಸಗಿ ಜೆಟ್, ಹೆಲಿಕಾಪ್ಟರ್, ಹೈ-ಎಂಡ್ ಎಲೆಕ್ಟ್ರಾನಿಕ್ ಉತ್ಪನ್ನಗಳು, ಪ್ಲಾಸ್ಟಿಕ್ ವಸ್ತುಗಳು, ಜ್ಯುವೆಲ್ಲರಿ, ಹೈ-ಗ್ಲಾಸ್ ಪೇಪರ್, ವಿಟಮಿನ್‌ಗಳು ದುಬಾರಿಯಾಗಲಿವೆ. 2023-24 ಸಾಲಿನ ಕೇಂದ್ರ ಬಜೆಟ್‌ನ ಪ್ರಸ್ತಾಪಗಳು ಏಪ್ರಿಲ್ 1ರಿಂದ ಜಾರಿಯಾಗುತ್ತವೆ.
ಟಾಟಾ ಮೋಟಾರ್ಸ್, ಹೋಂಡಾ ಕಾರ್ಸ್, ಹೀರೋಮೋಟೊಕಾರ್ಪ್ ಸೇರಿದಂತೆ ಆಟೊಮೊಬೈಲ್ ವಲಯದ ಕಂಪನಿಗಳು ಕಾರುಗಳ ದರಗಳನ್ನು ಏಪ್ರಿಲ್ 1 ರಿಂದ ಏರಿಸುತ್ತಿವೆ.
ಯಾವುದು ಅಗ್ಗ : ಮೊಬೈಲ್ ಫೋನ್, ಸ್ಮಾರ್ಟ್‌ಫೋನ್‌ನ ಬಿಡಿಭಾಗಗಳು, ಟಿ.ವಿ, ಆಟಿಕೆಗಳು, ಸೈಕಲ್, ಲಿಥಿಯಂ ಬ್ಯಾಟರಿ, ಎಲ್‌ಇಡಿ ಟಿವಿ, ಎಲೆಕ್ಟ್ರಿಕ್ ವಾಹನ, ಕ್ಯಾಮೆರಾ ಲೆನ್ಸ್ ಮೇಲಿನ ಸುಂಕ ಇಳಿಕೆಯ ಪರಿಣಾಮ ಇವುಗಳ ದರ ಇಳಿಕೆ ನಿರೀಕ್ಷಿಸಲಾಗಿದೆ.