Site icon Vistara News

ಜುಲೈ 1ರಿಂದ ಕ್ರಿಪ್ಟೊ, ವರ್ಚುವಲ್ ಆಸ್ತಿಗಳ ವರ್ಗಾವಣೆಗೆ 1% ಟಿಡಿಎಸ್‌ ಜಾರಿ

crypto

ನವದೆಹಲಿ: ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಬುಧವಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ೨೦೨೨ರ ಜುಲೈ ೧ ರಿಂದ ಕ್ರಿಪ್ಟೊ ಕರೆನ್ಸಿಗಳು ಹಾಗೂ ವರ್ಚುವಲ್‌ ಆಸ್ತಿಗಳ ವರ್ಗಾವಣೆಯ (virtual digital assets-VDA) ಮೇಲೆ ೧% ಟಿಡಿಎಸ್‌ ಅನ್ವಯವಾಗಲಿದೆ.

ಹೊಸ ಕಾನೂನಿನ ಪ್ರಕಾರ, ವರ್ಚುವಲ್‌ ಆಸ್ತಿಯ ಖರೀದಿದಾರರು ಅದಕ್ಕೆ ನೀಡುವ ಹಣದಲ್ಲಿ ೧% ಅನ್ನು ಟಿಡಿಎಸ್‌ ಆಗಿ ಮಾರಾಟಗಾರರಿಗೆ ಕೊಡಬೇಕಾಗುತ್ತದೆ. ಹಣ ಪಾವತಿಸುವ ವೇಳೆ ಟಿಡಿಎಸ್‌ ಕಡಿತವಾಗುತ್ತದೆ.

ಒಂದು ವೇಳೆ ಖರೀದಿದಾರರ ಪ್ಯಾನ್‌ ವಿವರ ಲಭಿಸದಿದ್ದರೆ, ವರ್ಚುವಲ್‌ ಡಿಜಿಟಲ್‌ ಅಸೆಟ್ಸ್‌ ಮೇಲಿನ ತೆರಿಗೆ ೨೦%ಕ್ಕೆ ಏರಿಕೆಯಾಗುತ್ತದೆ.

Exit mobile version