ಜುಲೈ 1ರಿಂದ ಕ್ರಿಪ್ಟೊ, ವರ್ಚುವಲ್ ಆಸ್ತಿಗಳ ವರ್ಗಾವಣೆಗೆ 1% ಟಿಡಿಎಸ್‌ ಜಾರಿ - Vistara News

ವಾಣಿಜ್ಯ

ಜುಲೈ 1ರಿಂದ ಕ್ರಿಪ್ಟೊ, ವರ್ಚುವಲ್ ಆಸ್ತಿಗಳ ವರ್ಗಾವಣೆಗೆ 1% ಟಿಡಿಎಸ್‌ ಜಾರಿ

ನೀವು ಬಿಟ್‌ ಕಾಯಿನ್‌ ಇತ್ಯಾದಿಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ಜುಲೈ 1ರಿಂದ ವರ್ಚುವಲ್‌ ಆಸ್ತಿಗಳ ವರ್ಗಾವಣೆಯಲ್ಲಿ ಶೇ.1ರ ಟಿಡಿಎಸ್‌ ಕಡಿತ ಆಗುವುದರ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.

VISTARANEWS.COM


on

crypto
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಬುಧವಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ೨೦೨೨ರ ಜುಲೈ ೧ ರಿಂದ ಕ್ರಿಪ್ಟೊ ಕರೆನ್ಸಿಗಳು ಹಾಗೂ ವರ್ಚುವಲ್‌ ಆಸ್ತಿಗಳ ವರ್ಗಾವಣೆಯ (virtual digital assets-VDA) ಮೇಲೆ ೧% ಟಿಡಿಎಸ್‌ ಅನ್ವಯವಾಗಲಿದೆ.

ಹೊಸ ಕಾನೂನಿನ ಪ್ರಕಾರ, ವರ್ಚುವಲ್‌ ಆಸ್ತಿಯ ಖರೀದಿದಾರರು ಅದಕ್ಕೆ ನೀಡುವ ಹಣದಲ್ಲಿ ೧% ಅನ್ನು ಟಿಡಿಎಸ್‌ ಆಗಿ ಮಾರಾಟಗಾರರಿಗೆ ಕೊಡಬೇಕಾಗುತ್ತದೆ. ಹಣ ಪಾವತಿಸುವ ವೇಳೆ ಟಿಡಿಎಸ್‌ ಕಡಿತವಾಗುತ್ತದೆ.

ಒಂದು ವೇಳೆ ಖರೀದಿದಾರರ ಪ್ಯಾನ್‌ ವಿವರ ಲಭಿಸದಿದ್ದರೆ, ವರ್ಚುವಲ್‌ ಡಿಜಿಟಲ್‌ ಅಸೆಟ್ಸ್‌ ಮೇಲಿನ ತೆರಿಗೆ ೨೦%ಕ್ಕೆ ಏರಿಕೆಯಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಜನಪ್ರಿಯವಾಗುತ್ತಿದೆ ʼಈಗ ಖರೀದಿಸಿ, ನಂತರ ಪಾವತಿಸಿʼ ಆಯ್ಕೆ: ಏನಿದು ಬಿಎನ್‌ಪಿಎಲ್‌? ಬಳಕೆ ಹೇಗೆ? ಇಲ್ಲಿದೆ ವಿವರ

Money Guide: ಯಾವುದೇ ಒಂದು ವಸ್ತು ಖರೀದಿಸಲು ತಕ್ಷಣಕ್ಕೆ ನಿಮ್ಮ ಬಳಿ ಹಣ ಇಲ್ಲದಿದ್ದರೆ ಹೆಸರೇ ಹೇಳುವಂತೆ ಈಗ ಖರೀದಿಸಿ ನಂತರ ಪಾವತಿಸಬಹುದು ಆಯ್ಕೆಯನ್ನು ಬಳಸಿಕೊಳ್ಳಬಹುದು. ಇ-ಕಾಮರ್ಸ್ ತಾಣಗಳು ಈ ವಿಧಾನದ ಮೂಲಕ ಗ್ರಾಹಕರಿಗೆ ವಸ್ತುಗಳ ಖರೀದಿಗೆ ಬಡ್ಡಿರಹಿತ ಕಿರು ಅವಧಿಯ ಸಾಲಗಳನ್ನು ಒದಗಿಸುತ್ತಿವೆ. ಅಂದರೆ ನೀವು ವಸ್ತು ಖರೀದಿಸಿದ ಬಳಿಕ ಹಂತ ಹಂತವಾಗಿ ಕಂತುಗಳಲ್ಲಿ ದುಡ್ಡು ಪಾವತಿಸದರಾಯ್ತು. ಅಂದರೆ ಈ ಸಾಲ ಬಳಸಿಕೊಂಡು ಗ್ರಾಹಕರು ವಸ್ತುಗಳನ್ನು ಖರೀದಿಸಿ, ಆ ಬಳಿಕ ಬಡ್ಡಿರಹಿತ ಇಎಂಐಗಳ ಮೂಲಕ ಪಾವತಿ ಮಾಡಬಹುದು.

VISTARANEWS.COM


on

Money Guide
Koo

ಬೆಂಗಳೂರು: ಬಿಎನ್‌ಪಿಎಲ್‌ (BNPL) ಬಗ್ಗೆ ನಿಮಗೆ ಗೊತ್ತೆ? ಬಿಎಸ್‌ಎಸ್‌ಎಲ್‌ ಗೊತ್ತು. ಇದೇನಿದು ಬಿಎನ್‌ಪಿಎಲ್‌ ಎಂದು ಎಂದು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ʼಈಗ ಖರೀದಿಸಿ, ನಂತರ ಪಾವತಿಸಿʼ (Buy Now, Pay Later)ಯ ಸಂಕ್ಷಿಪ್ತ ರೂಪವೇ ಬಿಎನ್‌ಪಿಎಲ್‌. ಯಾವುದೇ ಒಂದು ವಸ್ತು ಖರೀದಿಸಲು ತಕ್ಷಣಕ್ಕೆ ನಿಮ್ಮ ಬಳಿ ಹಣ ಇಲ್ಲದಿದ್ದರೆ ಹೆಸರೇ ಹೇಳುವಂತೆ ಈಗ ಖರೀದಿಸಿ ನಂತರ ಪಾವತಿಸಬಹುದು ಆಯ್ಕೆಯನ್ನು ಬಳಸಿಕೊಳ್ಳಬಹುದು. ಇ-ಕಾಮರ್ಸ್ ತಾಣಗಳು ಈ ವಿಧಾನದ ಮೂಲಕ ಗ್ರಾಹಕರಿಗೆ ವಸ್ತುಗಳ ಖರೀದಿಗೆ ಬಡ್ಡಿರಹಿತ ಕಿರು ಅವಧಿಯ ಸಾಲಗಳನ್ನು ಒದಗಿಸುತ್ತಿವೆ. ಅಂದರೆ ನೀವು ವಸ್ತು ಖರೀದಿಸಿದ ಬಳಿಕ ಹಂತ ಹಂತವಾಗಿ ಕಂತುಗಳಲ್ಲಿ ದುಡ್ಡು ಪಾವತಿಸದರಾಯ್ತು. ಅಂದರೆ ಈ ಸಾಲ ಬಳಸಿಕೊಂಡು ಗ್ರಾಹಕರು ವಸ್ತುಗಳನ್ನು ಖರೀದಿಸಿ, ಆ ಬಳಿಕ ಬಡ್ಡಿರಹಿತ ಇಎಂಐಗಳ ಮೂಲಕ ಪಾವತಿ ಮಾಡಬಹುದು. ಸದ್ಯ ಇದು ಭಾರತೀಯ ಮಧ್ಯಮ ವರ್ಗದ ಜನರ ನೆಚ್ಚಿನ ಆಯ್ಕೆ ಎನಿಸಿಕೊಂಡಿದೆ. ಈ ಬಗೆಗಿನ ವಿವರ ಇಲ್ಲಿದೆ (Money Guide).

ಗಮನ ಸೆಳೆಯುತ್ತಿದೆ

ಈ ಬಿಎನ್‌ಪಿಎಲ್‌ ಸಾಂಪ್ರದಾಯಿಕ ಕ್ರೆಡಿಟ್ ಕಾರ್ಡ್‌ ಮತ್ತು ಸಾಲಗಳಿಗೆ ಪರ್ಯಾಯವಾಗಿ ಗುರುತಿಸಿಕೊಂಡಿದೆ. ಬಡ್ಡಿ ಪಾವತಿಸಬೇಕಾಗಿಲ್ಲ ಎನ್ನುವ ಅಂಶವೇ ಈ ಪಾವತಿ ವಿಧಾನದ ಬಹುದೊಡ್ಡ ಪ್ಲಸ್‌ ಪಾಯಿಂಟ್‌. ಅಲ್ಲದೆ ಬಿಎನ್‌ಪಿಎಲ್ ಸೇವೆ ಸಾಮಾನ್ಯವಾಗಿ ತ್ವರಿತ ಮತ್ತು ಸುಲಭವಾಗಿ ಮಂಜೂರಾಗುತ್ತದೆ. ಇದಕ್ಕೆ ಕನಿಷ್ಠ ಕ್ರೆಡಿಟ್ ಚೆಕ್ ಗಳ ಅಗತ್ಯವಿರುತ್ತದೆ. ಆದರೆ ಗಮನಿಸಿ ಬಿಎನ್‌ಪಿಎಲ್ ತಿಂಗಳ ಮರುಪಾವತಿಯನ್ನು ಮಿಸ್ ಮಾಡಿದರೆ ಅದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಸೂಕ್ತ ಸಮಯದಲ್ಲಿ ಮರು ಪಾವತಿಗೆ ಗಮನ ಹರಿಸಿ. ಅಲ್ಲದೆ ಕ್ರೆಡಿಟ್‌ ಕಾರ್ಡ್‌ಗೆ ಹೋಲಿಸಿದರೆ ಬಿಎನ್‌ಪಿಎಲ್‌ ಕಾರ್ಡ್‌ಗಳಿಗೆ ಆರಂಭದಲ್ಲಿ ಅಲ್ಪ ಮೊತ್ತವಷ್ಟೇ ಲಭಿಸುತ್ತದೆ.

ಗಮನಿಸಬೇಕಾದ ಅಂಶ

ಬಿಎನ್‌ಪಿಎಲ್‌ ಕಾರ್ಡ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ.

  • ಬಜೆಟ್ ಮುಖ್ಯ: ಬಿಎನ್‌ಪಿಎಲ್ ಮೇಲ್ನೋಟಕ್ಕೆ ಅನುಕೂಲಕವೆಂದು ತೋರಬಹುದು. ಆದರೆ ನಿಮ್ಮ ಸಾಲ ಹೆಚ್ಚಾಗಲು ಇದು ಕಾರಣವಾಗಬಹುದು. ಬಿಎನ್‌ಪಿಎಲ್‌ ಕಾರ್ಡ್‌ ಪಡೆಯುವ ಮುನ್ನ ಅಸ್ತಿತ್ವದಲ್ಲಿರುವ ಸಾಲ ಮತ್ತು ಬಾಧ್ಯತೆಗಳನ್ನು ಪರಿಗಣಿಸಿ.
  • ಷರತ್ತುಗಳನ್ನು ಗಮನಿಸಿ: ಬಡ್ಡಿ-ಮುಕ್ತ ಎಂದು ಜಾಹೀರಾತು ನೀಡಲಾಗಿದ್ದರೂ ಪಾವತಿಯ ವಿಳಂಬಕ್ಕೆ ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ. ಈ ದಂಡಗಳು ಮತ್ತು ಯಾವುದೇ ಪೂರ್ವಪಾವತಿ ನಿರ್ಬಂಧಗಳನ್ನು ಅರ್ಥ ಮಾಡಿಕೊಳ್ಳಲು ನಿಯಮಗಳು ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಓದಿ.
  • ಸಿಬಿಲ್‌ ಸ್ಕೋರ್‌ ಮೇಲೆ ಪರಿಣಾಮ: ವಿಳಂಬ ಪಾವತಿ ನಿಮ್ಮ ಸಿಬಿಲ್‌ ಸ್ಕೋರ್‌ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಿ.
  • ಎಲ್ಲ ಶುಲ್ಕಗಳನ್ನು ಅರ್ಥ ಮಾಡಿಕೊಳ್ಳಿ: ಕೆಲವು ಬಿಎನ್‌ಪಿಎಲ್‌ ಸೇವೆಗಳು ಸಂಸ್ಕರಣಾ ಶುಲ್ಕಗಳನ್ನು ಹೊಂದಿರುತ್ತವೆ. ಇದರಲ್ಲಿ ಒಳಗೊಂಡಿರುವ ಎಲ್ಲ ವೆಚ್ಚಗಳನ್ನು ಅರ್ಥಮಾಡಿಕೊಳ್ಳಿ. ವಿಳಂಬ ಪಾವತಿ ಶುಲ್ಕಗಳು, ಸಂಸ್ಕರಣಾ ಶುಲ್ಕಗಳು ಅಥವಾ ದಂಡಗಳಂತಹ ಗುಪ್ತ ಶುಲ್ಕಗಳನ್ನು ಗಮನಿಸಿ.
  • ಸೀಮಿತ ಬಳಕೆ: ಬಿಎನ್‌ಪಿಎಲ್ ಎಲ್ಲೆಡೆ ಇಲ್ಲದಿರಬಹುದು. ಕ್ರೆಡಿಟ್ ಕಾರ್ಡ್‌ಗಳಿಗಿಂತ ಭಿನ್ನವಾಗಿ, ಬಿಎನ್‌ಪಿಎಲ್ ಕಾರ್ಡ್‌ ಅನ್ನು ನಿರ್ದಿಷ್ಟ ವ್ಯಾಪಾರಿಗಳು ಅಥವಾ ಪ್ಲಾಟ್‌ಫಾರ್ಮ್‌ಗಳು ಮಾತ್ರವೇ ಬಳಸುತ್ತವೆ. ನಿಮ್ಮ ನೆಚ್ಚಿನ ಅಂಗಡಿಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಬಿಎನ್‌ಪಿಎಲ್ ಆಯ್ಕೆಯನ್ನು ಸ್ವೀಕರಿಸುತ್ತವೆಯೇ ಎಂದು ಪರಿಶೀಲಿಸಿ. ಅಲ್ಲದೆ ಇದು ವಿದೇಶದಲ್ಲಿ ಉಪಯೋಗಕ್ಕೆ ಬರುವುದಿಲ್ಲ.

ಪ್ರಮುಖ ಬ್ರ್ಯಾಂಡ್‌ಗಳು

ಭಾರತದಲ್ಲಿ ಲೇಜಿ ಪೇ, ಸಿಂಪ್ಲ, ಅಮೆಜಾನ್ ಪೇ ಲೇಟರ್, ಫ್ಲಿಪ್ ಕಾರ್ಟ್ ಪೇ ಲೇಟರ್ ಹಾಗೂ ಝೆಸ್ಟ್ ಮನಿ ಪ್ರಮುಖ ಬಿಎನ್‌ಪಿಎಲ್ ಬ್ರ್ಯಾಂಡ್ ಎನಿಸಿಕೊಂಡಿವೆ. ಈ ಎಲ್ಲ ಬ್ರ್ಯಾಂಡ್‌ಗಳು ಕಾರ್ಯವೈಖರಿ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಇರುತ್ತದೆ. ನಿರ್ದಿಷ್ಟ ಇ-ಕಾಮರ್ಸ್ ತಾಣದಿಂದ ಖರೀದಿಸುವಾಗ ನೀವು ‘Buy now, pay later’ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಒಟ್ಟು ಮೊತ್ತದಲ್ಲಿ ಸಣ್ಣ ಮೊತ್ತವನ್ನು ಆರಂಭದಲ್ಲಿ ಡೌನ್ ಪೇಮೆಂಟ್ ಮಾಡಬೇಕು. ಉಳಿದ ಮೊತ್ತವನ್ನು ಬಡ್ಡಿರಹಿತ ಇಎಂಐ ಮೂಲಕ ನಿರ್ದಿಷ್ಟ ಅವಧಿಯೊಳಗೆ ಪಾವತಿಸಬೇಕು.

ಯಾರು ಖರೀದಿಸಬಹುದು?

ಬಿಎನ್‌ಪಿಎಲ್‌ ಕಾರ್ಡ್‌ ಅನ್ನು ಖರೀದಿಸಲು ಬೇಕಾದ ಅರ್ಹತೆಗಳು: ಭಾರತದ ಟೈರ್ 1 ಅಥವಾ ಟೈರ್ 2 ನಗರದ ನಿವಾಸಿಯಾಗಿರಬೇಕು, ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, ವೇತನ ಪಡೆಯುತ್ತಿರಬೇಕು, ನಿಮ್ಮ ಬ್ಯಾಂಕ್ ಖಾತೆ ಹಾಗೂ ಇತರ ಕೆವೈಸಿ ದಾಖಲೆಗಳನ್ನು ಹೊಂದಿರಬೇಕು.

ಇದನ್ನೂ ಓದಿ: Money Guide: ಮನೆಯಲಿ ಇದ್ದರೆ ಚಿನ್ನ ಈ ನಿಯಮ ಅರಿತಿರುವುದು ಚೆನ್ನ: ಗೋಲ್ಡ್‌ ಟ್ಯಾಕ್ಸ್‌ ಏನು ಹೇಳುತ್ತದೆ?

Continue Reading

ಪ್ರಮುಖ ಸುದ್ದಿ

Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Equity Market: ಕಳೆದ 6 ತಿಂಗಳಲ್ಲಿ ಬಾಂಬ್‌ ಸ್ಟಾಕ್‌ ಎಕ್ಸ್‌ಚೇಂಜ್‌ (BSE) ಪಟ್ಟಿಯಲ್ಲಿರುವ ಕಂಪನಿಗಳು 1 ಲಕ್ಷ ಕೋಟಿ ಡಾಲರ್‌ ಗಳಿಸಿವೆ ಎಂಬುದಾಗಿ ತಿಳಿದುಬಂದಿದೆ. ಇದರೊಂದಿಗೆ ಭಾರತದ ಈಕ್ವಿಟಿ ಮಾರುಕಟ್ಟೆಯ ಮೌಲ್ಯವು 5 ಲಕ್ಷ ಕೋಟಿ ಡಾಲರ್‌ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ. ಜೂನ್‌ 4ರ ಬಳಿಕ ದೇಶದ ಷೇರು ಮಾರುಕಟ್ಟೆಯನ್ನು ನಿಯಂತ್ರಿಸುವುದು ಕಷ್ಟ ಎಂಬುದಾಗಿ ಮೋದಿ ಹೇಳಿರುವ ಬೆನ್ನಲ್ಲೇ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಇದು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Equity Market
Koo

ಮುಂಬೈ: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶ ಪ್ರಕಟವಾಗುವ ಜೂನ್‌ 4ರ ಬಳಿಕ ಭಾರತದ ಷೇರು ಮಾರುಕಟ್ಟೆಯನ್ನು ಹಿಡಿಯಲು ಆಗುವುದಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಜೂನ್‌ 4ರ ಬಳಿಕ ಹೂಡಿಕೆದಾರರಿಗೆ ಭಾರಿ ಲಾಭವಾಗಲಿದೆ ಎಂಬುದಾಗಿ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಕಳೆದ 6 ತಿಂಗಳಲ್ಲಿ ಬಾಂಬ್‌ ಸ್ಟಾಕ್‌ ಎಕ್ಸ್‌ಚೇಂಜ್‌ (BSE) ಪಟ್ಟಿಯಲ್ಲಿರುವ ಕಂಪನಿಗಳು 1 ಲಕ್ಷ ಕೋಟಿ ಡಾಲರ್‌ ಗಳಿಸಿವೆ ಎಂಬುದಾಗಿ ತಿಳಿದುಬಂದಿದೆ. ಇದರೊಂದಿಗೆ ಭಾರತದ ಈಕ್ವಿಟಿ ಮಾರುಕಟ್ಟೆಯ ಮೌಲ್ಯವು 5 ಲಕ್ಷ ಕೋಟಿ ಡಾಲರ್‌ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ.

ಹೌದು, 2023ರ ನವೆಂಬರ್‌ನಲ್ಲಿ ಬಿಎಸ್‌ಇ ಒಟ್ಟು ಮಾರುಕಟ್ಟೆ ಮೊತ್ತವು 4 ಲಕ್ಷ ಕೋಟಿ ಡಾಲರ್‌ ಇತ್ತು. ಬಿಎಸ್‌ಇನಲ್ಲಿ ಲಿಸ್ಟ್‌ ಆಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳವು ಕಳೆದ 6 ತಿಂಗಳಲ್ಲಿಯೇ 1 ಲಕ್ಷ ಕೋಟಿ ಡಾಲರ್‌ ಜಾಸ್ತಿಯಾಗಿದೆ. ಬಿಎಸ್‌ಇ ಲಿಸ್ಟ್‌ ಆಗಿರುವ ಕಂಪನಿಯಗಳ ಮಾರುಕಟ್ಟೆ ಬಂಡವಾಳವು 2007ರ ಮೇ ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ತಲುಪಿತ್ತು. ಇದಾದ ಒಂದು ದಶಕದ ಬಳಿಕ ಅಂದರೆ, 2017ರ ಜುಲೈನಲ್ಲಿ 2 ಲಕ್ಷ ಕೋಟಿ ಡಾಲರ್‌ ತಲುಪಿತ್ತು. ಇನ್ನು 2021ರ ಮೇ ತಿಂಗಳಲ್ಲಿ 4 ಲಕ್ಷ ಕೋಟಿ ಡಾಲರ್‌ ಆಗಿತ್ತು. ಈಗ ಆರೇ ತಿಂಗಳಲ್ಲಿ ಮಾರುಕಟ್ಟೆ ಬಂಡವಾಳವು 1 ಲಕ್ಷ ಕೋಟಿ ಡಾಲರ್‌ ಜಾಸ್ತಿಯಾಗಿದೆ.

ಇದರೊಂದಿಗೆ ಮಾರುಕಟ್ಟೆ ಬಂಡವಾಳ ಮೌಲ್ಯವು 5 ಲಕ್ಷ ಕೋಟಿ ಡಾಲರ್‌ ತಲುಪಿರುವುದು ಐತಿಹಾಸಿಕ ಎಂದೇ ಹೇಳಲಾಗುತ್ತಿದೆ. ಇದರಿಂದ ಹೂಡಿಕೆದಾರರ ವಿಶ್ವಾಸವೂ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ. 5 ಲಕ್ಷ ಕೋಟಿ ಡಾಲರ್‌ ಎಂದರೆ ಭಾರತದ 414.75 ಲಕ್ಷ ಕೋಟಿ ರೂ. ಆಗಿದೆ. ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿಯೇ ಮೊದಲ ಬಾರಿಗೆ ಇಷ್ಟೊಂದು ವೇಗದಲ್ಲಿ ಮಾರುಕಟ್ಟೆಯ ಬಂಡವಾಳವು ಏರಿಕೆಯಾಗಿದೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ನಿರೀಕ್ಷಿಸಲಾಗಿದೆ.

ಸದ್ಯ, ನಿಫ್ಟಿಯು ತನ್ನ ಗರಿಷ್ಠ ಪಾಯಿಂಟ್‌ಗಳಿಗಿಂತ 250 ಪಾಯಿಂಟ್‌ ಹಿಂದಿದೆ. ಆದರೂ, ಸಣ್ಣ ಹಾಗೂ ಮಧ್ಯಮ ಶ್ರೇಣಿಯ ಹೂಡಿಕೆಯು ಹೆಚ್ಚಾಗಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರತದ ಷೇರುಪೇಟೆಯು ಮಹತ್ವದ ಸ್ಥಾನ ಪಡೆದಿದೆ. ಹಾಂಕಾಂಗ್‌, ಜಪಾನ್‌, ಚೀನಾ ಹಾಗೂ ಅಮೆರಿಕದ ನಂತರ ಭಾರತದ ಷೇರುಪೇಟೆಯು ಬೃಹತ್‌ ಷೇರು ಮಾರುಕಟ್ಟೆ ಎನಿಸಿದೆ. 2027ರ ವೇಳೆಗೆ ಭಾರತವು ವಿಶ್ವದಲ್ಲೇ ಮೂರನೇ ಬೃಹತ್‌ ಆರ್ಥಿಕತೆ ರಾಷ್ಟ್ರ ಎಂಬ ಖ್ಯಾತಿ ಗಳಿಸುವ ವಿಶ್ವಾಸ ಹೊಂದಿದೆ. 2030ರ ವೇಳೆಗೆ ಮಾರುಕಟ್ಟೆ ಬಂಡವಾಳವು 10 ಲಕ್ಷ ಡಾಲರ್‌ ತಲುಪಬೇಕು ಎಂಬ ಗುರಿ ಇದೆ. ಇದರ ದಿಸೆಯಲ್ಲಿ ಈಕ್ವಿಟಿ ಮೌಲ್ಯವು ಗಣನೀಯವಾಗಿ ಏರಿಕೆಯಾಗಿರುವುದು ಸಕಾರಾತ್ಮಕ ಸಂಗತಿಯಾಗಿದೆ.

ಇದನ್ನೂ ಓದಿ: LIC: ಎಲ್‌ಐಸಿಗೆ ಬಿಗ್‌ ರಿಲೀಫ್‌; ಸಾರ್ವಜನಿಕರ ಷೇರು ಪಾಲು ಶೇ. 10ಕ್ಕೆ ಹೆಚ್ಚಿಸಲು 3 ವರ್ಷ ಹೆಚ್ಚುವರಿ ಕಾಲಾವಕಾಶ

Continue Reading

ಮನಿ-ಗೈಡ್

Money Guide: ಉಮಂಗ್ ಆ್ಯಪ್‌ ಮೂಲಕ ಪಿಎಫ್‌ ಮೊತ್ತ ಹೀಗೆ ವಿತ್‌ಡ್ರಾ ಮಾಡಬಹುದು

Money Guide: ನೌಕರರ ಭವಿಷ್ಯ ನಿಧಿ ಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ನೌಕರರ ಉಳಿತಾಯ ಮನೋಭಾವವನ್ನು ಉತ್ತೇಜಿಸಲಾಗುತ್ತದೆ. ಪ್ರತಿ ತಿಂಗಳು ತಮ್ಮ ಮೂಲ ವೇತನದ ಶೇ. 12ರಷ್ಟು ಕೊಡುಗೆ ನೀಡುವ ಉದ್ಯೋಗಿಗಳಿಗೆ ಈ ಯೋಜನೆಯು ಶೇ. 8.15 ಬಡ್ಡಿದರವನ್ನು ನೀಡುತ್ತದೆ. ಉದ್ಯೋಗಿಗಳು ನಿವೃತ್ತರಾದ ನಂತರ ತಮ್ಮ ಪಿಎಫ್‌ ಖಾತೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಅದಕ್ಕಾಗಿ ನೀವು ಉಮಾಂಗ್ ಆ್ಯಪ್‌ ಬಳಸಬಹುದು. ಉಮಾಂಗ್ ಆ್ಯಪ್‌ ಬಳಕೆಯ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಪಿಎಫ್ (PF) ಎಂದೂ ಕರೆಯಲ್ಪಡುವ ನೌಕರರ ಭವಿಷ್ಯ ನಿಧಿ (Employees Provident Fund-EPFಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ನೌಕರರ ಉಳಿತಾಯ ಮನೋಭಾವವನ್ನು ಉತ್ತೇಜಿಸಲಾಗುತ್ತದೆ. ಪ್ರತಿ ತಿಂಗಳು ತಮ್ಮ ಮೂಲ ವೇತನದ ಶೇ. 12ರಷ್ಟು ಕೊಡುಗೆ ನೀಡುವ ಉದ್ಯೋಗಿಗಳಿಗೆ ಈ ಯೋಜನೆಯು ಶೇ. 8.15 ಬಡ್ಡಿದರವನ್ನು ನೀಡುತ್ತದೆ. ಉದ್ಯೋಗಿಗಳು ನಿವೃತ್ತರಾದ ನಂತರ ತಮ್ಮ ಪಿಎಫ್‌ ಖಾತೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಅದಾಗ್ಯೂ ಅನಾರೋಗ್ಯದಂತಹ ತುರ್ತು ಸಂದರ್ಭಗಳಲ್ಲಿ ಪಿಎಫ್ ಅಕೌಂಟ್‌ನಿಂದ ಒಂದಷ್ಟು ದುಡ್ಡು ಹಿಂಪಡೆಯಬಹುದು. ಹೀಗ ಹಣ ಹಿಂಪಡೆಯುವುದು ಈಗ ಸುಲಭ. ಕೂತಲ್ಲಿಯೇ, ಮೊಬೈಲ್‌ ಮೂಲಕವೇ ಅಪ್ಲೈ ಮಾಡಬಹುದು. ಆ ಕುರಿತಾದ ವಿವರ ಇಲ್ಲಿದೆ (Money Guide).

ಇ-ನಾಮಿನೇಷನ್‌ ಮಾಡಿಕೊಂಡಿರುವ ಪಿಎಫ್‌ ಸದಸ್ಯರು ತಮ್ಮ ಖಾತೆಯಿಂದ ಒಂದಷ್ಟು ಮೊತ್ತ, ಅಡ್ವಾನ್ಸ್‌ ಮತ್ತು ಪೆನ್ಶನ್‌ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಇಪಿಎಫ್‌ಒ ವೆಬ್‌ಸೈಟ್‌ ಅಥವಾ ಉಮಾಂಗ್ ಆ್ಯಪ್‌ ಬಳಸಬಹುದು. ಅದರಲ್ಲಿಯೂ ಉಮಂಗ್ ಆ್ಯಪ್‌ ಅನ್ನು ಹೆಚ್ಚು ಅನುಕೂಲ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಇದರ ಬಳಕೆಗೆ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಹಣ ವಿತ್‌ಡ್ರಾ ಮಾತ್ರವಲ್ಲ ಉಮಾಂಗ್ ಆ್ಯಪ್‌ ಮೂಲಕ ಬ್ಯಾಲೆನ್ಸ್‌ ಕೂಡ ಚೆಕ್‌ ಮಾಡಬಹುದು ಎನ್ನುವುದು ವಿಶೇಷ.

ಉಮಾಂಗ್ ಆ್ಯಪ್‌ ಬಳಕೆಯ ವಿಧಾನ

  • ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆ್ಯಪಲ್‌ ಆ್ಯಪ್‌ ಸ್ಟೋರ್‌ನಿಂದ ಉಮಂಗ್ ಆ್ಯಪ್‌ ಡೌನ್‌ಲೋಡ್‌ ಮಾಡಿ.
  • ಆ್ಯಪ್‌ ಓಪನ್‌ ಮಾಡಿ ಆಧಾರ್‌ ನಂಬರ್‌ ಮತ್ತು ಪಾಸ್‌ವರ್ಡ್‌ ಮೂಲಕ ಲಾಗಿನ್‌ ಆಗಿ.
  • ಲಾಗಿನ್‌ ಆದ ಬಳಿಕ ಸರ್ವಿಸ್‌ ಲಿಸ್ಟ್‌ನಲ್ಲಿನ EPFO ಆಯ್ಕೆ ಸೆಲೆಕ್ಟ್‌ ಮಾಡಿ.
  • ಈಗ ಪಿಎಫ್‌ ಬ್ಯಾಲನ್ಸ್‌, ನಾಮಿನೇಷನ್‌ ಅಥವಾ ಕೆವೈಸಿ ಅಪ್‌ಡೇಟ್‌ ಆಯ್ಕೆ ಕಾಣಿಸಿಕೊಳ್ಳಲಿದ್ದು, ನಿಮಗೆ ಅಗತ್ಯವಿರುವುದನ್ನು ಸೆಲೆಕ್ಟ್‌ ಮಾಡಿ.
  • ಬಳಿಕ ಸ್ಕ್ರೀನ್‌ನಲ್ಲಿ ಕಾಣಿಸುವ ಸ್ಟೆಪ್‌ ಫಾಲೋ ಮಾಡಿ.

ಹಣ ವಿತ್‌ಡ್ರಾ ಮಾಡುವ ವಿಧಾನ

  • ಉಮಂಗ್ ಆ್ಯಪ್‌ ಓಪನ್‌ ಮಾಡಿ ಆಧಾರ್‌ ನಂಬರ್‌, ಪಾಸ್‌ವರ್ಡ್‌ ನಮೂದಿಸಿ ಲಾಗಿನ್‌ ಆಗಿ.
  • ಸರ್ವಿಸ್‌ ಲಿಸ್ಟ್‌ನಲ್ಲಿನ EPFO ಆಯ್ಕೆ ಸೆಲೆಕ್ಟ್‌ ಮಾಡಿ.
  • Raise Claim ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
  • ಈಗ UAN ನಂಬರ್‌ ನಮೂದಿಸಿ. ಅದಾದ ಬಳಿಕ ನಿಮ್ಮ ಮೊಬೈಲ್‌ ನಂಬರ್‌ಗೆ ಬರುವ ಒಟಿಪಿಯನ್ನು ನಮೂದಿಸಿ.
  • ಯಾವ ರೀತಿಯ ವಿತ್‌ಡ್ರಾ ಅಗತ್ಯ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ
  • ಅಗತ್ಯ ಮಾಹಿತಿಗಳನ್ನು ತುಂಬಿ.

ಉಮಾಂಗ್ ಆ್ಯಪ್‌ ಮೂಲಕ ನೀವು ಪಡೆಯಬಹುದಾದ ಇತರ ಸೇವೆಗಳು

  • ಪಿಎಫ್‌ ಬ್ಯಾಲನ್ಸ್‌ ಪರಿಶೀಲನೆ
  • ಕೆವೈಸಿ ಮಾಹಿತಿಯ ಅಪ್‌ಡೇಟ್‌
  • ಪಾಸ್‌ಬುಕ್‌ ಪರಿಶೀಲನೆ
  • ಜೀವನ್‌ ಪ್ರಮಾಣ್‌ ಸರ್ಟಿಫಿಕೆಟ್‌ ಪಡೆಯಲು
  • ಪೆನ್ಶನ್‌ ಪೇಮೆಂಟ್‌ ಆರ್ಡರ್‌ (PPO) ಡೌನ್‌ಲೋಡ್‌ ಮಾಡಲು

ಇಪಿಎಫ್‌ ಖಾತೆಯ ವೈಶಿಷ್ಟ್ಯ

  • ಉದ್ಯೋಗಿಗಳ ಕೊಡುಗೆ ಸಾಮಾನ್ಯವಾಗಿ ಮೂಲ ವೇತನದ ಶೇ. 12ರಷ್ಟಿರುತ್ತದೆ.
  • ಉದ್ಯೋಗದಾತರ ಕೊಡುಗೆ ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ಕ್ಕೆ ಸಮನಾಗಿರುತ್ತದೆ. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಅವೆಂದರೆ- ಇಪಿಎಫ್ ಮತ್ತು ನೌಕರರ ಪಿಂಚಣಿ ಯೋಜನೆ(ಇಪಿಎಸ್).
  • ಹೀಗೆ ನಿಮ್ಮ ಮತ್ತು ಉದ್ಯೋಗದಾತರ ಕೊಡುಗೆಗಳೊಂದಿಗೆ ಪ್ರತಿ ತಿಂಗಳು ನಿವೃತ್ತಿಗಾಗಿ ಗಣನೀಯ ಮೊತ್ತವನ್ನು ಮೀಸಲಿಡಲಾಗುತ್ತದೆ. ಇದು ಭಾರತದಲ್ಲಿ ಕಡ್ಡಾಯ.

ಇದನ್ನೂ ಓದಿ: Money Guide: ಮೊಬೈಲ್‌ನಲ್ಲಿಯೇ ಪಿಎಫ್‌ ಮೊತ್ತ ಪರಿಶೀಲಿಸಬೇಕೆ?; ಜಸ್ಟ್‌ ಹೀಗೆ ಮಾಡಿ ಸಾಕು

Continue Reading

ದೇಶ

India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

India Skills: ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಸ್ಪರ್ಧಾ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಭಾನುವಾರ ದ್ವಾರಕಾದ ಯಶೋಭೂಮಿಯಲ್ಲಿ ನಡೆದಿದ್ದು, ಫ್ರಾನ್ಸ್‌ನ ಲಿಯಾನ್‌ನಲ್ಲಿ ಇದೇ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ವರ್ಲ್ಡ್ ಸ್ಕಿಲ್ಸ್‌ನಲ್ಲಿ 58 ವಿಜೇತರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಾಲ್ ಮತ್ತು ಫ್ಲೋರ್ ಟೈಲಿಂಗ್, ಬ್ರಿಕ್ಲೇಯಿಂಗ್, ಕಾರ್ಪೆಂಟ್ರಿ, ಫ್ಯಾಶನ್ ಟೆಕ್ನಾಲಜಿ, 3ಡಿ ಡಿಜಿಟಲ್ ಗೇಮ್ ಆರ್ಟ್, ಕ್ಲೌಡ್ ಕಂಪ್ಯೂಟಿಂಗ್, ಮೊಬೈಲ್ ಅಪ್ಲಿಕೇಶನ್‌ಗಳ ಅಭಿವೃದ್ಧಿ, ಸ್ವಾಯತ್ತ ಮೊಬೈಲ್ ರೊಬೋಟಿಕ್ಸ್, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸೇರಿದಂತೆ 61ಕ್ಕೂ ಅಧಿಕ ಕೌಶಲ್ಯಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 400ಕ್ಕೂ ಹೆಚ್ಚು ಉದ್ಯಮ ತಜ್ಞರು ಪಾಲ್ಗೊಂಡಿದ್ದರು.

VISTARANEWS.COM


on

India Skills National Competition 2024 Grand Finale 58 Winners to Represent India at World Skills
Koo

ಬೆಂಗಳೂರು: ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ (India Skills National Competition 2024) ಸ್ಪರ್ಧಾ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಭಾನುವಾರ ದ್ವಾರಕಾದ ಯಶೋಭೂಮಿಯಲ್ಲಿ ನಡೆದಿದ್ದು, ಫ್ರಾನ್ಸ್‌ನ ಲಿಯಾನ್‌ನಲ್ಲಿ ಇದೇ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ವರ್ಲ್ಡ್ ಸ್ಕಿಲ್ಸ್‌ನಲ್ಲಿ 58 ವಿಜೇತರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ನಾಲ್ಕು ದಿನಗಳ ಕಾಲ ನಡೆದ ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಸ್ಪರ್ಧೆಯಲ್ಲಿ ವಾಲ್ ಮತ್ತು ಫ್ಲೋರ್ ಟೈಲಿಂಗ್, ಬ್ರಿಕ್ಲೇಯಿಂಗ್, ಕಾರ್ಪೆಂಟ್ರಿ, ಫ್ಯಾಶನ್ ಟೆಕ್ನಾಲಜಿ, 3ಡಿ ಡಿಜಿಟಲ್ ಗೇಮ್ ಆರ್ಟ್, ಕ್ಲೌಡ್ ಕಂಪ್ಯೂಟಿಂಗ್, ಮೊಬೈಲ್ ಅಪ್ಲಿಕೇಶನ್‌ಗಳ ಅಭಿವೃದ್ಧಿ, ಸ್ವಾಯತ್ತ ಮೊಬೈಲ್ ರೊಬೊಟಿಕ್ಸ್, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸೇರಿದಂತೆ 61ಕ್ಕೂ ಅಧಿಕ ಕೌಶಲ್ಯಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 400ಕ್ಕೂ ಹೆಚ್ಚು ಉದ್ಯಮ ತಜ್ಞರು ಪಾಲ್ಗೊಂಡಿದ್ದರು.

ಇದನ್ನೂ ಓದಿ: 2nd PUC Result : ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಬಾಲಕಿಯರದೇ ಮೇಲುಗೈ

ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಡಿಶಾ ಅತಿ ಹೆಚ್ಚು ವಿಜೇತರನ್ನು ಹೊಂದಿದ್ದು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ನಂತರದ ಸ್ಥಾನದಲ್ಲಿವೆ. 17 ಚಿನ್ನ, 13 ಬೆಳ್ಳಿ, 9 ಕಂಚಿನ ಪದಕಗಳನ್ನು ಮತ್ತು 12 ಸ್ಪರ್ಧಾಳುಗಳು ಶ್ರೇಷ್ಠತಾ ಪ್ರಶಸ್ತಿ ಪಡೆಯುವುದರೊಂದಿಗೆ ಒಡಿಶಾ ಅತಿ ಹೆಚ್ಚು ವಿಜೇತರನ್ನು ಹೊಂದಿದೆ. ಕರ್ನಾಟಕ ರಾಜ್ಯವು 13 ಚಿನ್ನ, 12 ಬೆಳ್ಳಿ, 3 ಕಂಚಿನ ಪದಕ ಮತ್ತು 19 ಶ್ರೇಷ್ಠತಾ ಪ್ರಶಸ್ತಿ, ತಮಿಳುನಾಡು 6 ಚಿನ್ನ, 8 ಬೆಳ್ಳಿ, 9 ಕಂಚು ಮತ್ತು 17 ಸ್ಪರ್ಧಾಳುಗಳು ಶ್ರೇಷ್ಠತಾ ಪ್ರಶಸ್ತಿಯನ್ನು ಪಡೆದಿದ್ದಾರೆ.

ಮಹಾರಾಷ್ಟ್ರ 3 ಚಿನ್ನ, 5 ಬೆಳ್ಳಿ, 6 ಕಂಚಿನ ಪದಕ ಮತ್ತು 14 ಶ್ರೇಷ್ಠತಾ ಪ್ರಶಸ್ತಿ, ಉತ್ತರ ಪ್ರದೇಶ ರಾಜ್ಯವು 3 ಚಿನ್ನ, 3 ಬೆಳ್ಳಿ, 6 ಕಂಚಿನ ಪದಕಗಳು ಮತ್ತು 16 ಶ್ರೇಷ್ಠತಾ ಪ್ರಶಸ್ತಿ, ದೆಹಲಿ 5 ಚಿನ್ನ, 3 ಬೆಳ್ಳಿ, 2 ಕಂಚಿನ ಪದಕಗಳು ಮತ್ತು 10 ಶ್ರೇಷ್ಠತಾ ಪ್ರಶಸ್ತಿ, ರಾಜಸ್ಥಾನ ರಾಜ್ಯವು 2 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕಗಳು, ಮತ್ತು 9 ಶ್ರೇಷ್ಠತಾ ಪ್ರಶಸ್ತಿ, ಹರಿಯಾಣ 2 ಚಿನ್ನ, 3 ಬೆಳ್ಳಿ, 3 ಕಂಚಿನ ಪದಕಗಳು ಮತ್ತು 13 ಶ್ರೇಷ್ಠತಾ ಪ್ರಶಸ್ತಿ, ಮಧ್ಯಪ್ರದೇಶ 1 ಚಿನ್ನ, 2 ಬೆಳ್ಳಿ, 4 ಕಂಚು, ಮತ್ತು 11 ಶ್ರೇಷ್ಠತಾ ಪ್ರಶಸ್ತಿ, ಬಿಹಾರ ರಾಜ್ಯವು 3 ಚಿನ್ನ, 1 ಬೆಳ್ಳಿ, 3 ಕಂಚು ಮತ್ತು 6 ಸ್ಪರ್ಧಾಳುಗಳು ಶ್ರೇಷ್ಠತಾ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

47 ಕೌಶಲ್ಯ ಸ್ಪರ್ಧೆಗಳನ್ನು ಆನ್‌ಸೈಟ್‌ನಲ್ಲಿ ನಡೆಸಿದರೆ, ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಮೂಲಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಆಫ್‌ಸೈಟ್‌ನಲ್ಲಿ 14 ಕೌಶಲ್ಯ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧಾ ಕಾರ್ಯಕ್ರಮದಲ್ಲಿ 86 ಸ್ಪರ್ಧಿಗಳೊಂದಿಗೆ ತಮಿಳುನಾಡು ಗರಿಷ್ಠ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ, ನಂತರ ಒಡಿಶಾ (64), ಕರ್ನಾಟಕ (61), ಪಂಜಾಬ್ (53), ಮತ್ತು ಹರಿಯಾಣದಿಂದ 47 ಸ್ಪರ್ಧಿಗಳು ಭಾಗವಹಿಸಿದ್ದರು.

ಈ ವೇಳೆ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಮಾತನಾಡಿ, ಸ್ಪರ್ಧೆಯ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಯು ನಿಖರವಾಗಿತ್ತು ಮಾತ್ರವಲ್ಲದೆ ಭಾಗವಹಿಸುವವರು, ಮಾರ್ಗದರ್ಶಕರು, ಉದ್ಯಮದ ವೃತ್ತಿಪರರು, ಸಾರ್ವಜನಿಕರಿಂದ ಹೆಚ್ಚಿನ ಮೆಚ್ಚುಗೆ ಗಳಿಸಿದ್ದಾರೆ. ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಅಭೂತಪೂರ್ವ ಯಶಸ್ಸನ್ನು ಕಂಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Rameshwaram Cafe Blast: ಬೆಂಗಳೂರಿನ 4 ಕಡೆ ಸೇರಿ ದೇಶಾದ್ಯಂತ ಎನ್‌ಐಎ ದಾಳಿ

ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ, ಖ್ಯಾತ ನಿರ್ಮಾಪಕ, ಪದ್ಮಶ್ರೀ ಪುರಸ್ಕೃತ ರಮೇಶ್ ಸಿಪ್ಪಿ, ವೃತ್ತಿಪರ ಶಿಕ್ಷಣ ಮತ್ತು ತರಬೇತಿ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಡಾ. ನಿರ್ಮಲಜೀತ್ ಸಿಂಗ್ ಕಲ್ಸಿ ವೇದ್ ಮಣಿ ತಿವಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading
Advertisement
LPL 2024
ಪ್ರಮುಖ ಸುದ್ದಿ5 mins ago

LPL 2024 : ಫ್ರಾಂಚೈಸಿ ಮಾಲೀಕನಿಂದಲೇ ಮ್ಯಾಚ್​ ಫಿಕ್ಸಿಂಗ್; ಬಂಧನ

CM's Bengaluru City Rounds
ಪ್ರಮುಖ ಸುದ್ದಿ25 mins ago

CM’s Bengaluru City Rounds: ರಸ್ತೆಗಳ ದುರಸ್ತಿಗೆ ಶಾಶ್ವತ ನಿರ್ವಹಣಾ ವ್ಯವಸ್ಥೆ ರೂಪಿಸಲು ಸಿಎಂ ಸೂಚನೆ

Back button saree blouse
ಫ್ಯಾಷನ್26 mins ago

Back Button Saree Blouse: ಮತ್ತೆ ಬಂದಿದೆ ರೆಟ್ರೊ ಸ್ಟೈಲ್‌ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌!

Calcutta High Court
ಪ್ರಮುಖ ಸುದ್ದಿ39 mins ago

Other Backward Classes: 2011ರ ನಂತರ ನೀಡಿದ್ದ ಒಬಿಸಿ ಪ್ರಮಾಣಪತ್ರಗಳನ್ನು ರದ್ದು ಮಾಡಿದ ಕೋಲ್ಕೊತಾ ಹೈಕೋರ್ಟ್​​

Bomb Threat
ಪ್ರಮುಖ ಸುದ್ದಿ57 mins ago

Bomb Threat : ಗೃಹ ಸಚಿವಾಲಯಕ್ಕೆ ಬಾಂಬ್ ಬೆದರಿಕೆ; ದೆಹಲಿಯಲ್ಲಿ ಆತಂಕ

ಕರ್ನಾಟಕ1 hour ago

CM’s Bengaluru City Rounds: ರಾಜಕಾಲುವೆ ಒತ್ತುವರಿ ಯಾರೇ ಮಾಡಿದ್ರೂ ಮುಲಾಜಿಲ್ಲದೆ ತೆರವು: ಸಿಎಂ ಎಚ್ಚರಿಕೆ

IPL 2024
ಕ್ರಿಕೆಟ್1 hour ago

IPL 2024 : ಅಮ್ಮನನ್ನು ಆಸ್ಪತ್ರೆಯಲ್ಲಿ ಮಲಗಿಸಿ ಕೆಕೆಆರ್​ ಪರ ಕ್ವಾಲಿಫೈಯರ್ ಆಡಿದ ಆಫ್ಘನ್​ ಕ್ರಿಕೆಟಿಗ

Star Cricket Theam Fashion
ಫ್ಯಾಷನ್1 hour ago

Star Cricket Theme Fashion: ಕ್ರಿಕೆಟ್‌ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್‌!

Harish Poonja Govt responsible for disaster if MLA Harish Poonja is arrested says BY Vijayendra
ರಾಜಕೀಯ1 hour ago

Harish Poonja: ಶಾಸಕ ಹರೀಶ್‌ ಪೂಂಜಾರನ್ನು ಬಂಧಿಸಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ: ಗುಡುಗಿದ ವಿಜಯೇಂದ್ರ

Virat kohli
ಕ್ರೀಡೆ2 hours ago

IPL 2024 : ಕೊಹ್ಲಿಯನ್ನು ಹೊಗಳಿ ಆರ್​​ಸಿಬಿಗೆ ವಿದಾಯ ಹೇಳಿದ ವಿಜಯ್​ ಮಲ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ12 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ6 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌