ನವ ದೆಹಲಿ: ಭಾರತದ ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ (Gautam Adani) ಈಗ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ ಎಂದು ಫೋರ್ಬ್ಸ್ ನಿಯತಕಾಲಿಕೆ ಘೋಷಿಸಿದೆ.
ಅಮೆಜಾನ್ ಮುಖ್ಯಸ್ಥ ಜೆಫ್ ಬಿಜೋಸ್ ಮತ್ತು ಫ್ರಾನ್ಸ್‌ನ ಉದ್ಯಮಿ ಬೆನಾರ್ಡ್ ಅರ್ನಲ್ಟ್ ಅವರನ್ನು ಹಿಂದಿಕ್ಕಿರುವ ಗೌತಮ್ ಅದಾನಿ ಅವರು, ಇದೀಗ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್ ವರದಿ ಪ್ರಕಟಿಸಿದೆ.
ಗೌತಮ್ ಅದಾನಿ ಅವರ ಸಂಪತ್ತು 155.7 ಶತಕೋಟಿ ಡಾಲರ್ ( ಅಂದಾಜು 12.30 ಲಕ್ಷ ಕೋಟಿ ರೂ.) ಎಂದು ಫೋರ್ಬ್ಸ್ ವರದಿ ತಿಳಿಸಿದೆ. ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅದಾನಿ ಪಾತ್ರರಾಗಿದ್ದಾರೆ.
ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ ಪಟ್ಟಿಯಲ್ಲಿ ಗೌತಮ್ ಅದಾನಿ ಎರಡನೇ ಸ್ಥಾನ ಗಳಿಸಿದ್ದಾರೆ. ಮೊದಲ ಸ್ಥಾನದಲ್ಲಿ ಅಮೆರಿಕದ ಎಲಾನ್ ಮಸ್ಕ್ ಇದ್ದಾರೆ. ಮಸ್ಕ್ ಸಂಪತ್ತು 273.5 ಶತಕೋಟಿ ಡಾಲರ್ (ಅಂದಾಜು 21.60 ಲಕ್ಷ ಕೋಟಿ ರೂ.) ಆಗಿದೆ.
ಅದಾನಿ ಸಮೂಹದ ಕಂಪನಿಗಳ ಷೇರು ದರ ಏರಿಕೆಯ ಪರಿಣಾಮ ಶುಕ್ರವಾರ ಒಂದೇ ದಿನ ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ 3.64% ಹೆಚ್ಚಳವಾಗಿತ್ತು. (43,450 ಕೋಟಿ ರೂ.)
ವಿಶ್ವದ ಟಾಪ್ 3 ಶ್ರೀಮಂತರು
ಎಲಾನ್ ಮಸ್ಕ್ | 273 ಶತಕೋಟಿ ಡಾಲರ್ – 21.60 ಲಕ್ಷ ಕೋಟಿ ರೂ. |
ಗೌತಮ್ ಅದಾನಿ | 155.7 ಶತಕೋಟಿ ಡಾಲರ್- 12.30 ಲಕ್ಷ ಕೋಟಿ ರೂ. |
ಬರ್ನಾರ್ಡ್ ಅರ್ನಾಲ್ಟ್ | 155 ಶತಕೋಟಿ ಡಾಲರ್- 12.24 ಲಕ್ಷ ಕೋಟಿ ರೂ. |
ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ ಗುರುವಾರ 20.11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಅದರಲ್ಲೂ ನಾಲ್ಕು ಕಂಪನಿಗಳ ಮೌಲ್ಯ ಈ ವರ್ಷ ಇಮ್ಮಡಿಗೂ ಹೆಚ್ಚು ಏರಿಕೆಯಾಗಿದೆ.
ಫೋರ್ಬ್ಸ್ ಪಟ್ಟಿಯಲ್ಲಿರುವ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಬಿಲ್ ಗೇಟ್ಸ್, ವಾರೆನ್ ಬಫೆಟ್, ಮುಕೇಶ್ ಅಂಬಾನಿ, ಲಾರ್ರಿ ಪೇಜ್, ಸರ್ಗಿ ಬ್ರಿನ್ ಇದ್ದಾರೆ.
ಇದನ್ನೂ ಓದಿ: Adani Enterprises | ಷೇರು ಪೇಟೆಯಲ್ಲಿ ನಿಫ್ಟಿ 50 ಲೀಗ್‌ಗೆ ಸೇರ್ಪಡೆಯಾದ ಅದಾನಿ ಎಂಟರ್‌ಪ್ರೈಸಸ್