Site icon Vistara News

Gautam Adani: ಮಕ್ಕಳು ಜಗತ್ತಿನ ಅತಿ ದೊಡ್ಡ ಸಂಪತ್ತು ಎಂದ ಅದಾನಿ!

ಲಂಡನ್‌: ಉದ್ಯಮಿ ಗೌತಮ್ ಅದಾನಿ (Gautam Adani) ಅವರು ಮಂಗಳವಾರ ತಮ್ಮ ಮೊಮ್ಮಗಳೊಂದಿಗಿನ ಚಿತ್ರವನ್ನು ಟ್ವಿಟರ್ ಎಕ್ಸ್ ನಲ್ಲಿ (x) ಹಂಚಿಕೊಂಡಿದ್ದಾರೆ.

ಅದಾನಿ ಗ್ರೂಪ್‌ನ ಅಧ್ಯಕ್ಷ (Adani Group chairman) ಗೌತಮ್ ಅದಾನಿ ಅವರ ಮಗ ಕರಣ್ ಅದಾನಿ ( Karan Adani) ಮತ್ತು ಸೊಸೆ ಪರಿಧಿಯ (Paridhi) ಮಗಳಾಗಿರುವ ಕಾವೇರಿಯೊಂದಿಗಿನ (Kaveri) ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದು ಸಾಕಷ್ಟು ವೈರಲ್ ಆಗಿದೆ.

ಲಂಡನ್‌ನ (london) ಸೈನ್ಸ್ ಮ್ಯೂಸಿಯಂನಲ್ಲಿರುವ (Science Museum) ಹೊಸ ಅದಾನಿ ಗ್ರೀನ್ ಎನರ್ಜಿ ಗ್ಯಾಲರಿಯಲ್ಲಿ (Adani Green Energy Gallery) ತೆಗೆದ ಈ ಚಿತ್ರದಲ್ಲಿ ಅವರು ತಮ್ಮ ಮೊಮ್ಮಗಳನ್ನು ತೋಳುಗಳಿಂದ ಎತ್ತಿ ಹಿಡಿದು ನಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅದಾನಿ ಅವರ ಪತ್ನಿ ಮತ್ತು ಕಾವೇರಿಯ ತಂದೆ, ತಾಯಿ ಕೂಡ ಜೊತೆಯಲ್ಲಿದ್ದರು.

ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ಮೊಮ್ಮಗಳು ನನ್ನ ಜೀವನದ ಬಹುದೊಡ್ಡ ಒತ್ತಡ ನಿವಾರಕಳು ಎಂದು ಹೇಳಿದ್ದಾರೆ.

ಇದನ್ನು ಓದಿ: SBI Shares : ಅಜ್ಜ ಹೂಡಿಕೆ ಮಾಡಿದ್ದು 500, ಮೊಮ್ಮಗನಿಗೆ ಸಿಕ್ಕಿದ್ದು 3.75 ಲಕ್ಷ ರೂಪಾಯಿ; ಇದುವೇ ಷೇರು ಪೇಟೆ ಮ್ಯಾಜಿಕ್​!

ಕುಟುಂಬವೇ ನನ್ನ ಶಕ್ತಿ

ನಾನು ನನ್ನ ಮೊಮ್ಮಕ್ಕಳೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ, ಅವರು ನನ್ನ ದೊಡ್ಡ ಒತ್ತಡ ನಿವಾರಕರಾಗಿದ್ದಾರೆ. ನನಗೆ ಕೇವಲ ಎರಡು ಪ್ರಪಂಚಗಳಿವೆ. ಕೆಲಸ ಮತ್ತು ಕುಟುಂಬ. ಕುಟುಂಬವು ನನ್ನ ಶಕ್ತಿಯ ದೊಡ್ಡ ಮೂಲವಾಗಿದೆ ಎಂದು ಅವರು ಹೇಳಿದರು.

ಲಂಡನ್ ಪ್ರವಾಸದಲ್ಲಿರುವ ಅದಾನಿ ಕುಟುಂಬವು ನವೀಕರಿಸಬಹುದಾದ ಶಕ್ತಿಯ ಸವಾಲುಗಳು ಮತ್ತು ಅವಕಾಶಗಳ ವಿವರಿಸುವ ‘ಎನರ್ಜಿ ರೆವಲ್ಯೂಷನ್: ದಿ ಅದಾನಿ ಗ್ರೀನ್ ಎನರ್ಜಿ ಗ್ಯಾಲರಿ’ ಶೀರ್ಷಿಕೆಯ ಪ್ರದರ್ಶನವನ್ನು ಲಂಡನ್ ಮ್ಯೂಸಿಯಂ ನಲ್ಲಿ ಮಾರ್ಚ್ 26ರಂದು ಅನಾವರಣಗೊಳಿಸಿದರು.

ಏಷ್ಯಾದ ಶ್ರೀಮಂತ ವ್ಯಕ್ತಿ

ಅದಾನಿ ಗ್ರೂಪ್‌ ನ ಚೇರ್ಮನ್‌ ಗೌತಮ್‌ ಅದಾನಿ ಅವರು ಭಾರತದಲ್ಲೇ ಅತಿ ಶ್ರೀಮಂತ ವ್ಯಕ್ತಿ (Richest Person) ಮಾತ್ರವಲ್ಲ ಏಷ್ಯಾದಲ್ಲೇ ನಂಬರ್‌ 1 ಶ್ರೀಮಂತ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಇತ್ತೀಚೆಗೆ ಹಿಂಡನ್‌ಬರ್ಗ್‌ ವರದಿ ಪ್ರಕರಣಕ್ಕೆ ಸಂಬಂಧಿಸಿ ಗೌತಮ್‌ ಅದಾನಿ ಕಂಪೆನಿ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕೇಸ್‌ ಅನ್ನು ಎಸ್‌ಐಟಿಗೆ ವಹಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ಬಳಿಕ ಅದಾನಿ ಗ್ರೂಪ್‌ ಷೇರುಗಳ ಮೌಲ್ಯವು ಏಕಾಏಕಿ ಜಾಸ್ತಿಯಾಗಿದ್ದರಿಂದ ಗೌತಮ್‌ ಅದಾನಿಯವರ ಒಟ್ಟು ಆಸ್ತಿಯ ಮೌಲ್ಯ ದಿಢೀರನೆ ಹೆಚ್ಚಳವಾಯಿತು. ಹೀಗಾಗಿ ಅವರು ದೇಶದ ಅಗ್ರ ಶ್ರೀಮಂತರೆನಿಸಿದ್ದಾರೆ.
ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ ಪ್ರಕಾರ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (RIL) ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರನ್ನು ಹಿಂದಿಕ್ಕಿ ಗೌತಮ್‌ ಅದಾನಿ ಅವರು ದೇಶದ ನಂಬರ್‌ 1 ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.

ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಗೌತಮ್‌ ಅದಾನಿ 12 ಹಾಗೂ ಮುಕೇಶ್‌ ಅಂಬಾನಿ 13ನೇ ಸ್ಥಾನದಲ್ಲಿದ್ದಾರೆ. ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಟೆಸ್ಲಾ ಕಂಪನಿ ಸಿಇಒ ಎಲಾನ್‌ ಮಸ್ಕ್‌ ಅವರು ಅಗ್ರಸ್ಥಾನದಲ್ಲಿದ್ದಾರೆ.

Exit mobile version