Site icon Vistara News

Gautam Adani : ವಿಶ್ವದ ಟಾಪ್‌ 10 ಬಿಲಿಯನೇರ್‌ ಪಟ್ಟಿಯಿಂದ ಹೊರ ಬಿದ್ದ ಗೌತಮ್‌ ಅದಾನಿ, ರ‍್ಯಾಂಕ್ 11ಕ್ಕೆ ಕುಸಿತ

Gautam Adani, who fell out of the world's top 10 billionaires list, fell to the 11th rank.

ನವ ದೆಹಲಿ: ವಿಶ್ವದ ಟಾಪ್‌ 10 ಶ್ರೀಮಂತರ ಪಟ್ಟಿಯಿಂದ ಬಿಲಿಯನೇರ್‌ಗಳ ಪಟ್ಟಿಯಿಂದ ಗೌತಮ್‌ ಅದಾನಿ (Gautam Adani) ಹೊರಬಿದ್ದಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 5 ಲಕ್ಷ ಕೋಟಿ ರೂ.ಗೂ ಹೆಚ್ಚು ಕುಸಿದ ಬಳಿಕ ಅದಾನಿಯವರ ನಿವ್ವಳ ಸಂಪತ್ತಿನಲ್ಲೂ ಇಳಿಕೆಯಾಗಿದೆ. ಇದರ ಪರಿಣಾಮ ಮೂರನೇ ಸ್ಥಾನದಲ್ಲಿದ್ದ ಅದಾನಿ ಈಗ 11ಕ್ಕೆ ಕುಸಿದಿದ್ದಾರೆ ಎಂದು ಬ್ಲೂಮ್‌ ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ ತಿಳಿಸಿದೆ.

ಬ್ಲೂಮ್‌ ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ ಪ್ರಕಾರ ಗೌತಮ್‌ ಅದಾನಿಯವರ ಈಗಿನ ಸಂಪತ್ತು 84.4 ಶತಕೋಟಿ ಡಾಲರ್‌ (6.83 ಲಕ್ಷ ಕೋಟಿ ರೂ.) 500 ಮಂದಿ ಸಿರಿವಂತರ ಪಟ್ಟಿಯಲ್ಲಿ 2023ರಲ್ಲಿ ಅತಿ ಹೆಚ್ಚು ನಷ್ಟಕ್ಕೀಡಾದ ಉದ್ಯಮಿ ಅದಾನಿ ಆಗಿದ್ದಾರೆ. ಹೀಗಿದ್ದರೂ ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿಗಿಂತ (12) ಅದಾನಿ ಮುಂದಿದ್ದಾರೆ.

Exit mobile version