Site icon Vistara News

GDP | ಏಪ್ರಿಲ್-ಜೂನ್‌ ಅವಧಿಯ ಜಿಡಿಪಿ ಬೆಳವಣಿಗೆ 13.5%ಕ್ಕೆ ಏರಿಕೆ

gdp growth

ನವ ದೆಹಲಿ: ಪ್ರಸಕ್ತ ಸಾಲಿನ ಏಪ್ರಿಲ್-ಜೂನ್‌ ಅವಧಿಯಲ್ಲಿ ಭಾರತದ ಜಿಡಿಪಿ ( ಒಟ್ಟಾರೆ ರಾಷ್ಟ್ರೀಯ ಉತ್ಪನ್ನ) ಬೆಳವಣಿಗೆ 13.5 %ಕ್ಕೆ ಏರಿಕೆಯಾಗಿದೆ. 2021 ರ ಏಪ್ರಿಲ್-ಜೂನ್‌ ಅವಧಿಗೆ ಹೋಲಿಸಿದರೆ ( 4.09% ) ಇದು ಹೆಚ್ಚಳವಾಗಿದೆ.

ರಷ್ಯಾ-ಉಕ್ರೇನ್‌ ಸಂಘರ್ಷ, ಬಿಸಿಗಾಳಿಯಿಂದ ಬೆಳೆ ಹಾನಿ, ಸರಕುಗಳ ದರ ಏರಿಕೆ, ಹಣದುಬ್ಬರ ಇತ್ಯಾದಿ ಸವಾಲುಗಳ ನಡುವೆಯೂ ತ್ರೈಮಾಸಿಕ ಜಿಡಿಪಿ 13.5% ಕ್ಕೆ ಏರಿಕೆಯಾಗಿದೆ.

ಕಳೆದ 70 ವರ್ಷಗಳ ಅವಧಿಯಲ್ಲಿ ಭಾರತದ ಜಿಡಿಪಿ 2.7 ಲಕ್ಷ ಕೋಟಿ ರೂ.ಗಳಿಂದ 150 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

ಆರ್ಥಿಕತೆಯ ಹಲವಾರು ವಲಯಗಳಲ್ಲಿ ಈ ಅವಧಿಯಲ್ಲಿ ಸುಧಾರಣೆ ಕಂಡು ಬಂದಿದೆ. ಕಡಿಮೆ ಬೇಸ್‌ ಎಫೆಕ್ಟ್‌ ಮತ್ತು ಆರ್ಥಿಕ ಚಟುವಟಿಕೆಗಳ ಚೇತರಿಕೆ ಸಕಾರಾತ್ಮಕ ಪ್ರಭಾವ ಬೀರಿದೆ. ಕಡಿಮೆ ಮಟ್ಟದ ಬೇಸ್‌ ಎಫೆಕ್ಟ್‌ ಎಂದರೆ ಹೋಲಿಕೆ ಮಾಡಲು ಬಳಸುವ ಮೂಲ ವರ್ಷದಲ್ಲಿನ ಅಲ್ಪ ಬೆಳವಣಿಗೆ.

ಕೋವಿಡ್‌ ಲಸಿಕೆಗಳ ವ್ಯಾಪಕ ವಿತರಣೆ, ಪೆಟ್ರೋಲ್-ಡೀಸೆಲ್‌ ಮೇಲಿನ ಅಬಕಾರಿ ಸುಂಕ ಕಡಿತ, ಬಂಡವಾಳ ಹೂಡಿಕೆಯ ಚೇತರಿಕೆ ಆರ್ಥಿಕ ಬೆಳವಣಿಗೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಹೀಗಿದ್ದರೂ, ಜುಲೈನಲ್ಲಿ ಮೂಲಸೌಕರ್ಯ ವಲಯದ ಬೆಳವಣಿಗೆ 4.5%ಕ್ಕೆ ಇಳಿಕೆಯಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಕಳೆದ 6 ತಿಂಗಳಿನಲ್ಲಿಯೇ ಇದು ಕನಿಷ್ಠ ಮಟ್ಟವಾಗಿದೆ.

Keshava prasad B

2022-23ರ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿಯ ಮೌಲ್ಯ 36.85 ಲಕ್ಷ ಕೋಟಿ ರೂ. 2021-22ರ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ 32.46 ಲಕ್ಷ ಕೋಟಿ ರೂ.

Keshava prasad B

2022-23ರ ಏಪ್ರಿಲ್-ಜೂನ್‌ನಲ್ಲಿ ಖಾಸಗಿ ವಲಯದ ವೆಚ್ಚದಲ್ಲಿ 26% ಪ್ರಗತಿ ದಾಖಲು

Keshava prasad B

2022-23ರ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ಉತ್ಪಾದನಾ ಕ್ಷೇತ್ರದ ಬೆಳವಣಿಗೆ 4.8% ಬೆಳವಣಿಗೆ

Keshava prasad B

ಕಳೆದ ವರ್ಷದ ಅಲ್ಪ ಮಟ್ಟದ ಬೇಸ್‌ ಎಫೆಕ್ಟ್‌ ಮತ್ತು ಕೋವಿಡ್‌ ನಿರ್ಬಂಧ ತೆರವಿನ ಪರಿಣಾಮ ಆರ್ಥಿಕ ಚಟುವಟಿಕೆಗಳ ಚೇತರಿಕೆಯಿಂದ 2022-23ರ ಏಪ್ರಿಲ್-ಜೂನ್‌ ತ್ರೈಮಾಸಿಕ ಜಿಡಿಪಿಯ ಪ್ರಗತಿ.

Keshava prasad B

2022-23ರ ಮೊದಲ ತ್ರೈಮಾಸಿಕದಲ್ಲಿ, ಅಂದರೆ ಈ ವರ್ಷ ಏಪ್ರಿಲ್-ಜೂನ್‌ ಅವಧಿಯಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ 4.5% ದಾಖಲಾಗಿದೆ.

Exit mobile version