Site icon Vistara News

GDP Growth | ಭಾರತದ ಜಿಡಿಪಿ 6.9%ಕ್ಕೆ ಏರಿಕೆ : ವಿಶ್ವಬ್ಯಾಂಕ್‌ ಮುನ್ನೋಟ

GDP

ನವ ದೆಹಲಿ: ವಿಶ್ವಬ್ಯಾಂಕ್‌ ಭಾರತದ ಆರ್ಥಿಕ ಮುನ್ನೋಟವನ್ನು 2022-23ರ ಸಾಲಿಗೆ (GDP Growth) 6.9%ಕ್ಕೆ ಪರಿಷ್ಕರಿಸಿದೆ. ಜಾಗತಿಕ ಆರ್ಥಿಕತೆಯ ಮಂದಗತಿಯ ಹೊರತಾಗಿಯೂ, ಜಿಡಿಪಿ ಮುನ್ನೋಟವನ್ನು 6.5%ರಿಂದ 6.9%ಕ್ಕೆ ಪರಿಷ್ಕರಿಸಿದೆ.

ಜಾಗತಿಕ ಆರ್ಥಿಕತೆಯ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕತೆ ಚೇತರಿಸುತ್ತಿದೆ ಎಂದು ವಿಶ್ವಬ್ಯಾಂಕ್‌ ತಿಳಿಸಿದೆ. ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ಆರ್ಥಿಕ ಚಟುವಟಿಕೆಗಳು ಚೇತರಿಸಿವೆ ಎಂದಿದೆ. 2021-22ರಲ್ಲಿ ಜಿಡಿಪಿ 8.7%ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. 2022-23ರ ಜುಲೈ-ಸೆಪ್ಟೆಂಬರ್‌ನಲ್ಲಿ 6.3% ರಷ್ಟು ವಿಸ್ತರಿಸಿತ್ತು.

ಭಾರತ ಸರ್ಕಾರ 2022-23ರಲ್ಲಿ ವಿತ್ತೀಯ ಕೊರತೆಯ ಗುರಿಯನ್ನು (ಜಿಡಿಪಿಯ 6.4%) ಮುಟ್ಟಬಹುದು ಎಂದು ವಿಶ್ವಬ್ಯಾಂಕ್‌ ತಿಳಿಸಿದೆ.

Exit mobile version