ವಿಶ್ವಸಂಸ್ಥೆ: ಜಾಗತಿಕ ಆರ್ಥಿಕತೆಯ ಬೆಳವಣಿಗೆ 2023ರಲ್ಲಿ 3.0%ರಿಂದ 1.9%ಕ್ಕೆ ಕುಸಿತಕ್ಕೀಡಾಗಿದೆ ಎಂದು ವಿಶ್ವಸಂಸ್ಥೆಯ ಇತ್ತೀಚಿನ ವರದಿ ತಿಳಿಸಿದೆ. ಇದು ಇತ್ತೀಚಿನ ದಶಕಗಳಲ್ಲಿಯೇ ಕನಿಷ್ಠ ಮಟ್ಟವಾಗಿದೆ. (Global economy) ಜಾಗತಿಕ ಆರ್ಥಿಕತೆ 2024 ರಲ್ಲಿ 2.7%ಕ್ಕೆ ಪ್ರಗತಿ ಸಾಧಿಸಲಿದೆ ಎಂದು ಕ್ಸಿನ್‌ಹುವಾ ನ್ಯೂಸ್ ಏಜೆನ್ಸಿ ತಿಳಿಸಿದೆ.
ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಅನಿಶ್ಚಿತತೆಯ ಪರಿಣಾಮ ಜಾಗತಿಕ ಆರ್ಥಿಕತೆ ಬಿಕ್ಕಟ್ಟು ಎದುರಿಸುತ್ತಿದೆ. ಕೋವಿಡ್-19 ಸವಾಲು ಕೂಡ ಪ್ರತಿಕೂಲ ಪ್ರಭಾವ ಬೀರಿದೆ. 2023ರಲ್ಲಿ ಆರ್ಥಿಕ ಹಿಂಜರಿತದ ಅಪಾಯವೂ ಕಾದಿದೆ ಎಂದು ವರದಿ ತಿಳಿಸಿದೆ.
ಅಮೆರಿಕ, ಯುರೋಪ್ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಏಕಾನಮಿ ದುರ್ಬಲವಾಗಿದೆ ಎಂದು ವರದಿ ಎಚ್ಚರಿಸಿದೆ.