Site icon Vistara News

Go First airline : ಗೋ ಫಸ್ಟ್‌ ದಿವಾಳಿ ಅರ್ಜಿಗೆ ಎನ್‌ಸಿಎಲ್‌ಟಿ ಒಪ್ಪಿಗೆ

Go First airline NCLT approves Go First's bankruptcy petition

ನವ ದೆಹಲಿ: ದಿವಾಳಿ ಪ್ರಕ್ರಿಯೆ ಕೈಗೊಳ್ಳುವಂತೆ ಕೋರಿ ಗೋ ಫಸ್ಟ್‌ ಏರ್‌ಲೈನ್‌ ಸಲ್ಲಿಸಿದ್ದ ಅರ್ಜಿಯನ್ನು ಕಂಪನಿಗಳ ರಾಷ್ಟ್ರೀಯ ನ್ಯಾಯಾಧೀಕರಣ (National company law tribunal) ಪುರಸ್ಕರಿಸಿದೆ. ಹಾಗೂ ದಿವಾಳಿ ಪ್ರಕ್ರಿಯೆಯನ್ನು ನಡೆಸಲು ಅಭಿಲಾಷ್ ಲಾಲ್‌ ಅವರನ್ನು ವೃತ್ತಿಪರ ನಿರ್ವಾಹಕರಾಗಿ ನೇಮಿಸಿದೆ. ಗೋ ಫಸ್ಟ್‌ ಮೇ 19ರಿಂದ ತನ್ನ ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ.‌

ಉದ್ಯಮಿ ನುಸ್ಲಿ ವಾಡಿಯಾ ಒಡೆತನದ ವಾಡಿಯಾ ಗ್ರೂಪ್‌ನ ಭಾಗವಾಗಿರುವ ಗೋ ಫಸ್ಟ್‌ ಏರ್‌ಲೈನ್ಸ್‌ (Go First airlines) ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದ್ದು ದಿವಾಳಿಯಾಗಿದೆ. ಕಂಪನಿಗಳ ಕಾನೂನಿನ ರಾಷ್ಟ್ರೀಯ ನ್ಯಾಯಾಧೀಕರಣದಲ್ಲಿ ( National Company law tribunal -NCLT) ಗೋ ಫಸ್ಟ್‌ ಇತ್ತೀಚೆಗೆ ಸ್ವಯಂಪ್ರೇರಿತವಾಗಿ ದಿವಾಳಿ ಪ್ರಕ್ರಿಯೆ ನಡೆಸಲು (bankruptcy) ಕೋರಿ ಅರ್ಜಿ ಸಲ್ಲಿಸಿತ್ತು. ಸ್ವತಃ ಏರ್‌ಲೈನ್‌ ಸಿಇಒ ಕೌಶಿಕ್‌ ಖೋನಾ ಈ ವಿಷಯ ತಿಳಿಸಿದ್ದರು.

ತೈಲ ಮಾರುಕಟ್ಟೆ ಕಂಪನಿಗಳಿಗೆ ಕೊಡಬೇಕಿರುವ ಬಾಕಿಯನ್ನು ಗೋ ಫಸ್ಟ್‌ ಇನ್ನೂ ಪಾವತಿಸಿಲ್ಲ. ಹೀಗಾಗಿ ಗೋ ಫಸ್ಟ್‌ ಮೇ 3 ಮತ್ತು 4ರಂದು ತನ್ನ ಸುಮಾರು ಅರ್ಧದಷ್ಟು ವಿಮಾನಗಳ ಸಂಚಾರವನ್ನು ರದ್ದುಪಡಿಸಿತ್ತು. ಟಿಕೆಟ್‌ ಬುಕ್‌ ಮಾಡಿದವರಿಗೆ ಉಂಟಾಗಿರುವ ಅಡಚಣೆಗೆ ಏರ್‌ ಲೈನ್‌ ಕ್ಷಮೆ ಯಾಚಿಸಿತ್ತು. ಪ್ರಯಾಣಿಕರಿಗೆ ಟಿಕೆಟ್‌ ಹಣವನ್ನು ರಿಫಂಡ್‌ ಮಾಡುವುದಾಗಿ ತಿಳಿಸಿತ್ತು.

ಇದನ್ನೂ ಓದಿ :Go First airline : ಏರ್‌ ಟಿಕೆಟ್‌ ಮಾರಾಟ ನಿಲ್ಲಿಸುವಂತೆ ಗೋ ಫಸ್ಟ್‌ಗೆ ಡಿಜಿಸಿಎ ನೋಟಿಸ್‌ ಜಾರಿ

ಅಮೆರಿಕದ ಪ್ರಾಟ್‌ & ವಿಟ್ನೆಸ್‌ ಇಂಟರ್‌ ನ್ಯಾಶನಲ್‌ ಏರೋ ಎಂಜಿನ್‌ ಸಂಸ್ಥೆ ಪೂರೈಸಿದ್ದ ಎಂಜಿನ್‌ಗಳು ಆಗಾಗ್ಗೆ ವಿಫಲವಾಗುತ್ತಿತ್ತು. ಹೀಗಾಗಿ ದಿವಾಳಿಯಾಗುವ ಸ್ಥಿತಿ ಬಂದಿದೆ ಎಂದು ಏರ್‌ಲೈನ್‌ ಆರೋಪಿಸಿದೆ. ಮೇ 1ರಿಂದ 25 ವಿಮಾನಗಳ ಸಂಚಾರವನ್ನು ರದ್ದುಪಡಿಸಿತ್ತು. ಮೇ 3-4ರಂದು ತನ್ನೆಲ್ಲ ವಿಮಾನಗಳ ಸಂಚಾರವನ್ನು ರದ್ದುಪಡಿಸಿತ್ತು.

Exit mobile version