ಬಹು ಸರಕು ವಿನಿಮಯ ಕೇಂದ್ರ (MCX)ದಲ್ಲಿ ಚಿನ್ನದ ದರಲ್ಲಿ ಇಂದು (Gold Rate Today) ಯಾವುದೇ ಬದಲಾವಣೆಯೂ ಆಗಿಲ್ಲ. ಜೂ.23ರಂದು ಕ್ಲೋಸಿಂಗ್ ವ್ಯಾಪಾರದ ಹೊತ್ತಿಗೆ 24 ಕ್ಯಾರೆಟ್ನ, 10 ಗ್ರಾಂ ಚಿನ್ನದ ಬೆಲೆ (Gold Rate)58,300 ರೂಪಾಯಿ ಇತ್ತು. ಇಂದು ಕೂಡ ಅದೇ ಬೆಲೆಯನ್ನು ತೋರಿಸುತ್ತಿದೆ. ಅದೇ ಗುಡ್ರಿಟರ್ನ್ಸ್ ಪ್ರಕಾರ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. 24 ಕ್ಯಾರೆಟ್ನ 10 ಗ್ರಾಂ ಬಂಗಾರದ ದರ 160 ರೂ. ಹೆಚ್ಚಿದೆ. ಜೂ.23ರಂದು 59,020 ರೂ. ಇತ್ತು. ಅದು ಇಂದು 59,180 ರೂ.ಗೆ ಏರಿಕೆಯಾಗಿದೆ. ಹಾಗೇ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ಇಂದು 150 ರೂ. ಹೆಚ್ಚಿದೆ. ನಿನ್ನೆ 54,100ರೂ.ಇತ್ತು. ಅದಿಂದು 54, 250 ರೂ.ಗೆ ಏರಿಕೆಯಾಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆ (Silver Rate Today)ಕೆಜಿಗೆ 400 ರೂ.ಕಡಿಮೆಯಾಗಿದೆ. ನಿನ್ನೆ 71, 100ರೂ.ಇದ್ದಿದ್ದು, ಇಂದು 71,500 ರೂ.ಆಗಿದೆ.
ಬೆಂಗಳೂರಿನಲ್ಲೂ ಕೂಡ 24 ಕ್ಯಾರೆಟ್ ಚಿನ್ನದ ಬೆಲೆ 59 ಸಾವಿರದ ಗಡಿ ದಾಟಿದೆ. ಇಲ್ಲಿ 24 ಕ್ಯಾರೆಟ್ನ 1 ಗ್ರಾಂ. ಚಿನ್ನಕ್ಕೆ 5,918 ರೂ.ಇದೆ. 8 ಗ್ರಾಂ.ಗೆ 47,344 ರೂಪಾಯಿ, 10 ಗ್ರಾಂ.ಗೆ 59,180 ರೂ., 100 ಗ್ರಾಂ.ಗೆ 5,91,800 ರೂ.ಆಗಿದೆ. ಹಾಗೇ, 22 ಕ್ಯಾರೆಟ್ನ 1 ಗ್ರಾಂ ಚಿನ್ನದ ದರ 5,425 ರೂ., 8 ಗ್ರಾಂ.ಗೆ 43,400 ರೂ., 10 ಗ್ರಾಂ.ಗೆ 54,250ರೂ., 100 ಗ್ರಾಂ.ಗೆ 5,42, 500 ರೂಪಾಯಿ ಆಗಿದೆ. ಹಾಗೇ, ಬೆಂಗಳೂರಲ್ಲಿ ಬೆಳ್ಳಿ ಬೆಲೆ ಇಳಿಕೆಯಾಗಿದೆ. 1 ಗ್ರಾಂ.ಗೆ 70.25ರೂ., 8 ಗ್ರಾಂ.ಗೆ 562 ರೂ., 10 ಗ್ರಾಂ.ಗೆ 702.50 ರೂ., 100 ಗ್ರಾಂ.ಗೆ 7025ರೂ., 1ಕೆಜಿಗೆ 70,250 ರೂಪಾಯಿ ಆಗಿದೆ.
ಇದನ್ನೂ ಓದಿ: Gold Rate Today: ಚಿನ್ನ ಕೊಳ್ಳೋರಿಗೆ ಖುಷಿ, ಬೆಳ್ಳಿ ದುಬಾರಿ; ಬೆಂಗಳೂರಲ್ಲಿ ಎಷ್ಟಿದೆ ದರ?
ಭಾರತದಲ್ಲಿ ಚಿನ್ನ ಹೂಡಿಕೆ, ಸಂಪ್ರದಾಯದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿದೆ. ಇಲ್ಲಿ ಮದುವೆ, ಗೃಹಪ್ರವೇಶದಿಂದ ಹಿಡಿದು ಯಾವುದೇ ಶುಭ ಸಮಾರಂಭದಲ್ಲಿ ಬಂಗಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಇದ್ದೇ ಇದೆ. ಬೇಡಿಕೆ ಮತ್ತು ಪೂರೈಕೆ, ಜಾಗತಿಕ ಆರ್ಥಿಕ ಸ್ಥಿತಿಗತಿ ಮತ್ತಿತರ ಅಂಶಗಳ ಆಧಾರದ ಮೇಲೆ ಬಂಗಾರದ ಬೆಲೆಯಲ್ಲಿ ಏರಿಳಿತವಾಗುತ್ತದೆ.
ಸಾಮಾನ್ಯವಾಗಿ 22 ಕ್ಯಾರೆಟ್ ಚಿನ್ನಕ್ಕೂ, 24 ಕ್ಯಾರೆಟ್ ಚಿನ್ನಕ್ಕೂ ದರದಲ್ಲಿ ವ್ಯತ್ಯಾಸ ಇರುತ್ತದೆ. 22 ಕ್ಯಾರೆಟ್ ಚಿನ್ನಕ್ಕೆ ಸ್ವಲ್ಪ ಕಡಿಮೆ ಬೆಲೆ ಇದ್ದರೆ, 24 ಕ್ಯಾರೆಟ್ ಬಂಗಾರಕ್ಕೆ ಬೆಲೆ ಹೆಚ್ಚಿರುತ್ತದೆ. ಆದರೆ 22 ಕ್ಯಾರೆಟ್ಗೂ, 24 ಕ್ಯಾರೆಟ್ಗೂ ನಡುವಿನ ವ್ಯತ್ಯಾಸದ ಅರಿವು ಅನೇಕ ಗ್ರಾಹಕರಿಗೆ ಇರುವುದಿಲ್ಲ. ಇದು ಮತ್ತೇನಲ್ಲ, 22 ಕ್ಯಾರೆಟ್ ಎಂದರೆ ಅದರಲ್ಲಿ ಶೇ.91ರಷ್ಟು ಶುದ್ಧ ಚಿನ್ನ ಇದ್ದರೆ, 24 ಕ್ಯಾರೆಟ್ನಲ್ಲಿ ಶೇ.99.9ರಷ್ಟು ಶುದ್ಧ ಚಿನ್ನ ಇರುತ್ತದೆ. 22 ಕ್ಯಾರೆಟ್ ಚಿನ್ನದ ಆಭರಣಗಳಲ್ಲಿ ಇನ್ನುಳಿದ ಶೇ.9ರಷ್ಟು ಭಾಗ ತಾಮ್ರ, ಬೆಳ್ಳಿ, ಸತುವಿನ ಅಂಶ ಇರುತ್ತದೆ. 24 ಕ್ಯಾರೆಟ್ನ ಚಿನ್ನವನ್ನು ಅಪರಂಜಿ ಎಂದೂ ಕರೆಯಲಾಗುತ್ತದೆ, ಇದನ್ನು ಆಭರಣಗಳಲ್ಲಿ ಬಳಕೆ ಮಾಡುವುದಿಲ್ಲ.