Gold Rate Today: 59 ಸಾವಿರ ಗಡಿ ದಾಟಿದ ಚಿನ್ನ; ಬೆಳ್ಳಿ ಕೆಜಿಗೆ 400 ರೂ.ಇಳಿಕೆ Vistara News

ವಾಣಿಜ್ಯ

Gold Rate Today: 59 ಸಾವಿರ ಗಡಿ ದಾಟಿದ ಚಿನ್ನ; ಬೆಳ್ಳಿ ಕೆಜಿಗೆ 400 ರೂ.ಇಳಿಕೆ

Silver Rate Today: ಬೆಂಗಳೂರಲ್ಲಿ ಬೆಳ್ಳಿ ಬೆಲೆ ಇಳಿಕೆಯಾಗಿದೆ. 1 ಗ್ರಾಂ.ಗೆ 70.25ರೂ., 8 ಗ್ರಾಂ.ಗೆ 562 ರೂ., 10 ಗ್ರಾಂ.ಗೆ 702.50 ರೂ., 100 ಗ್ರಾಂ.ಗೆ 7025ರೂಪಾಯಿ ಇದೆ.

VISTARANEWS.COM


on

Gold
Follow us on
Koo

ಬಹು ಸರಕು ವಿನಿಮಯ ಕೇಂದ್ರ (MCX)ದಲ್ಲಿ ಚಿನ್ನದ ದರಲ್ಲಿ ಇಂದು (Gold Rate Today) ಯಾವುದೇ ಬದಲಾವಣೆಯೂ ಆಗಿಲ್ಲ. ಜೂ.23ರಂದು ಕ್ಲೋಸಿಂಗ್​ ವ್ಯಾಪಾರದ ಹೊತ್ತಿಗೆ 24 ಕ್ಯಾರೆಟ್​​ನ, 10 ಗ್ರಾಂ ಚಿನ್ನದ ಬೆಲೆ (Gold Rate)58,300 ರೂಪಾಯಿ ಇತ್ತು. ಇಂದು ಕೂಡ ಅದೇ ಬೆಲೆಯನ್ನು ತೋರಿಸುತ್ತಿದೆ. ಅದೇ ಗುಡ್​ರಿಟರ್ನ್ಸ್​​ ಪ್ರಕಾರ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. 24 ಕ್ಯಾರೆಟ್​ನ 10 ಗ್ರಾಂ ಬಂಗಾರದ ದರ 160 ರೂ. ಹೆಚ್ಚಿದೆ. ಜೂ.23ರಂದು 59,020 ರೂ. ಇತ್ತು. ಅದು ಇಂದು 59,180 ರೂ.ಗೆ ಏರಿಕೆಯಾಗಿದೆ. ಹಾಗೇ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ ಇಂದು 150 ರೂ. ಹೆಚ್ಚಿದೆ. ನಿನ್ನೆ 54,100ರೂ.ಇತ್ತು. ಅದಿಂದು 54, 250 ರೂ.ಗೆ ಏರಿಕೆಯಾಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆ (Silver Rate Today)ಕೆಜಿಗೆ 400 ರೂ.ಕಡಿಮೆಯಾಗಿದೆ. ನಿನ್ನೆ 71, 100ರೂ.ಇದ್ದಿದ್ದು, ಇಂದು 71,500 ರೂ.ಆಗಿದೆ.

ಬೆಂಗಳೂರಿನಲ್ಲೂ ಕೂಡ 24 ಕ್ಯಾರೆಟ್​ ಚಿನ್ನದ ಬೆಲೆ 59 ಸಾವಿರದ ಗಡಿ ದಾಟಿದೆ. ಇಲ್ಲಿ 24 ಕ್ಯಾರೆಟ್​ನ 1 ಗ್ರಾಂ. ಚಿನ್ನಕ್ಕೆ 5,918 ರೂ.ಇದೆ. 8 ಗ್ರಾಂ.ಗೆ 47,344 ರೂಪಾಯಿ, 10 ಗ್ರಾಂ.ಗೆ 59,180 ರೂ., 100 ಗ್ರಾಂ.ಗೆ 5,91,800 ರೂ.ಆಗಿದೆ. ಹಾಗೇ, 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ 5,425 ರೂ., 8 ಗ್ರಾಂ.ಗೆ 43,400 ರೂ., 10 ಗ್ರಾಂ.ಗೆ 54,250ರೂ., 100 ಗ್ರಾಂ.ಗೆ 5,42, 500 ರೂಪಾಯಿ ಆಗಿದೆ. ಹಾಗೇ, ಬೆಂಗಳೂರಲ್ಲಿ ಬೆಳ್ಳಿ ಬೆಲೆ ಇಳಿಕೆಯಾಗಿದೆ. 1 ಗ್ರಾಂ.ಗೆ 70.25ರೂ., 8 ಗ್ರಾಂ.ಗೆ 562 ರೂ., 10 ಗ್ರಾಂ.ಗೆ 702.50 ರೂ., 100 ಗ್ರಾಂ.ಗೆ 7025ರೂ., 1ಕೆಜಿಗೆ 70,250 ರೂಪಾಯಿ ಆಗಿದೆ.

ಇದನ್ನೂ ಓದಿ: Gold Rate Today: ಚಿನ್ನ ಕೊಳ್ಳೋರಿಗೆ ಖುಷಿ, ಬೆಳ್ಳಿ ದುಬಾರಿ; ಬೆಂಗಳೂರಲ್ಲಿ ಎಷ್ಟಿದೆ ದರ?

ಭಾರತದಲ್ಲಿ ಚಿನ್ನ ಹೂಡಿಕೆ, ಸಂಪ್ರದಾಯದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿದೆ. ಇಲ್ಲಿ ಮದುವೆ, ಗೃಹಪ್ರವೇಶದಿಂದ ಹಿಡಿದು ಯಾವುದೇ ಶುಭ ಸಮಾರಂಭದಲ್ಲಿ ಬಂಗಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಇದ್ದೇ ಇದೆ. ಬೇಡಿಕೆ ಮತ್ತು ಪೂರೈಕೆ, ಜಾಗತಿಕ ಆರ್ಥಿಕ ಸ್ಥಿತಿಗತಿ ಮತ್ತಿತರ ಅಂಶಗಳ ಆಧಾರದ ಮೇಲೆ ಬಂಗಾರದ ಬೆಲೆಯಲ್ಲಿ ಏರಿಳಿತವಾಗುತ್ತದೆ.

ಸಾಮಾನ್ಯವಾಗಿ 22 ಕ್ಯಾರೆಟ್​ ಚಿನ್ನಕ್ಕೂ, 24 ಕ್ಯಾರೆಟ್​ ಚಿನ್ನಕ್ಕೂ ದರದಲ್ಲಿ ವ್ಯತ್ಯಾಸ ಇರುತ್ತದೆ. 22 ಕ್ಯಾರೆಟ್​ ಚಿನ್ನಕ್ಕೆ ಸ್ವಲ್ಪ ಕಡಿಮೆ ಬೆಲೆ ಇದ್ದರೆ, 24 ಕ್ಯಾರೆಟ್​ ಬಂಗಾರಕ್ಕೆ ಬೆಲೆ ಹೆಚ್ಚಿರುತ್ತದೆ. ಆದರೆ 22 ಕ್ಯಾರೆಟ್​ಗೂ, 24 ಕ್ಯಾರೆಟ್​ಗೂ ನಡುವಿನ ವ್ಯತ್ಯಾಸದ ಅರಿವು ಅನೇಕ ಗ್ರಾಹಕರಿಗೆ ಇರುವುದಿಲ್ಲ. ಇದು ಮತ್ತೇನಲ್ಲ, 22 ಕ್ಯಾರೆಟ್​ ಎಂದರೆ ಅದರಲ್ಲಿ ಶೇ.91ರಷ್ಟು ಶುದ್ಧ ಚಿನ್ನ ಇದ್ದರೆ, 24 ಕ್ಯಾರೆಟ್​ನಲ್ಲಿ ಶೇ.99.9ರಷ್ಟು ಶುದ್ಧ ಚಿನ್ನ ಇರುತ್ತದೆ. 22 ಕ್ಯಾರೆಟ್​ ಚಿನ್ನದ ಆಭರಣಗಳಲ್ಲಿ ಇನ್ನುಳಿದ ಶೇ.9ರಷ್ಟು ಭಾಗ ತಾಮ್ರ, ಬೆಳ್ಳಿ, ಸತುವಿನ ಅಂಶ ಇರುತ್ತದೆ. 24 ಕ್ಯಾರೆಟ್​​ನ ಚಿನ್ನವನ್ನು ಅಪರಂಜಿ ಎಂದೂ ಕರೆಯಲಾಗುತ್ತದೆ, ಇದನ್ನು ಆಭರಣಗಳಲ್ಲಿ ಬಳಕೆ ಮಾಡುವುದಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ದೇಶ

Money Guide: ಸಣ್ಣ ಉಳಿತಾಯದಿಂದ ದೊಡ್ಡ ಮೊತ್ತ! ಯಾವ ಸ್ಕೀಮ್‌ನಲ್ಲಿ ಬಡ್ಡಿ ಜಾಸ್ತಿ?

Money Guide: ಪಿಪಿಎಫ್, ಎಫ್‌ಡಿ, ಪೋಸ್ಟ್ ಆಫೀಸ್ ಠೇವಣಿಗಳ ನಡುವೆ ಹೆಚ್ಚು ಲಾಭ ತಂದು ಕೊಡುವ ಉಳಿತಾಯ ಯೋಜನೆಗಳಾವವು?

VISTARANEWS.COM


on

Small Saving
Koo

ಣ ಉಳಿತಾಯವೊಂದು ಕಲೆಗಾರಿಕೆ. ಈ ಕಲೆಯನ್ನು ಬಲ್ಲವರು ಹಣಕಾಸಿನ ಬಿಕ್ಕಟ್ಟು (Finance Crisis) ಎದುರಿಸುವುದು ಕಡಿಮೆ. ದುಡಿಮೆಯ ಜತೆಗೆ ಉಳಿತಾಯವನ್ನು ಮಾಡಿದರೆ(Saving with Income), ಮುಂದೊಂದು ದಿನ ಆ ಹಣ ನಮ್ಮ ನೆರವಿ ಬಂದೇ ಬರುತ್ತದೆ. ಇದಕ್ಕಾಗಿಯೇ ಬ್ಯಾಂಕುಗಳು(Banks), ಅಂಚೆ ಕಚೇರಿಗಳು (Post Office Savings) ಸೇರಿದಂತೆ ಅನೇಕ ಸಂಸ್ಥೆಗಳ ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿರುತ್ತವೆ. ನಮಗೆ ಈ ಉಳಿತಾಯಗಳ ಬಗ್ಗೆ ಮಾಹಿತಿ ಇದ್ದರೆ, ಚಿಕ್ಕ ಮೊತ್ತವಾದರೂ ಸರಿ ಉಳಿತಾಯಕ್ಕೆ ಮುಂದಾಗಬೇಕು. ಹನಿ ಹನಿ ಗೂಡಿದರೆ ಹಳ್ಳ ಎನ್ನುವ ಹಾಗೆ, ಚಿಕ್ಕ ಮೊತ್ತವೇ ಮುಂದೊಂದು ದಿನ ದೊಡ್ಡ ಮೊತ್ತವಾಗಿ ಪರಿವರ್ತನೆಯಾಗುತ್ತದೆ. ಹಾಗಾಗಿ, ಸಣ್ಣ ಉಳಿತಾಯ ಯೋಜನೆಗಳು (Small Savings Schemes) ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡುತ್ತವೆ(Money Guide).

ಎಷ್ಟು ಬಡ್ಡಿ ದರ ಇದೆ?

ಸದ್ಯ ದೇಶದಲ್ಲಿ ಬಡ್ಡಿದರಗಳು ಅತ್ಯಧಿಕ ದರದಲ್ಲಿ ಚಾಲ್ತಿಯಲ್ಲಿರುವಾಗಲೂ, ಸ್ಥಿರ-ಆದಾಯ ಸಾಧನಗಳು ಆಕರ್ಷಕ ಹೂಡಿಕೆಯ ಮಾರ್ಗಗಳಾಗಿವೆ. ಇವುಗಳಲ್ಲಿ ಬ್ಯಾಂಕ್ ಸ್ಥಿರ ಠೇವಣಿಗಳು, ಪಿಪಿಎಫ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು, ಅಂಚೆ ಕಚೇರಿ ಠೇವಣಿಗಳು ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಸೇರಿವೆ. ಬಡ್ಡಿದರಗಳ ವಿಷಯಕ್ಕೆ ಬಂದಾಗ, ಹಿರಿಯ ನಾಗರಿಕರ ಉಳಿತಾಯ ಯೋಜನೆಯು ವಾರ್ಷಿಕವಾಗಿ ಶೇ.8.2, ಬ್ಯಾಂಕ್ ಎಫ್‌ಡಿಗಳು ಶೇ.7.75ರವರೆಗೆ ಬಡ್ಡಿಯನ್ನು ನೀಡುತ್ತವೆ. ಆದರೆ, ಅಂಚೆಕಚೇರಿ ಉಳಿತಾಯ ಠೇವಣಿಗಳು 7.5 ಶೇಕಡಾ ವಾರ್ಷಿಕ ಬಡ್ಡಿ ದರವನ್ನು ನೀಡುತ್ತಿವೆ. ಇನ್ನೂ ಪಿಎಫ್‌ಎಫ್‌ನಲ್ಲಿ ವಾರ್ಷಿಕ ಶೇ.7.1ರಷ್ಟು ಬಡ್ಡಿ ಇರುತ್ತದೆ ಎಂಬುದನ್ನು ಮರೆಯಬಾರದು.

ಎಚ್‌ಡಿಎಫ್‌ಸಿ, ಎಸ್‌ಬಿಐನಂಥ ಬೃಹತ್ ಬ್ಯಾಂಕುಗಳು ತಮ್ಮ ಎಫ್‌ಡಿಗಳ ಮೇಲೆ ಆಕರ್ಷಕ ಬಡ್ಡಿಯನ್ನು ಒದಗಿಸುತ್ತಿವೆ. ಠೇವಣಿಯ ಅವಧಿ ಮತ್ತು ಮೊತ್ತದ ಅನುಸಾರ ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.7.75ವರೆಗೂ ಬಡ್ಡಿ ನೀಡುತ್ತದೆ. ಎಸ್‌ಬಿಐ ಕೂಡ ಎಫ್‌ಡಿಗಳ ಮೇಲೆ ಶೇ.7.50ವರೆಗೂ ಲಾಭ ನೀಡಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಹಿಂದೆ ಬಿದ್ದಿಲ್ಲ ಅದು ವಾರ್ಷಿಕ 7.75 ಪ್ರತಿಶತ ಬಡ್ಡಿಯನ್ನು ನೀಡುವುದಾಗಿ ಹೇಳಿದೆ.

ಯಾವವು ಸಣ್ಣ ಉಳಿತಾಯ ಯೋಜನೆಗಳು?

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ಬಗ್ಗೆ ಮಾತನಾಡುವುದಾದರೆ, ಶೇ.4ರಿಂದ ಶೇ.8.2ವರೆಗೂ ಇದೆ. ಅಂಚೆ ಕಚೇರಿ ಸೇವಿಂಗ್ ಠೇವಣಿಗೆಳ ಮೇಲೆ ಗ್ರಾಹಕರಿಗೆ ಶೇ.4 ರಿಂದ ಹಾಗೂ ಹಿರಿಯ ನಾಗರಿಕರ ಸೇವಿಂಗ್ಸ್ ಸ್ಕೀಮ್ ಮೇಲೆ ಶೇ.8ರವರೆಗೂ ಬಡ್ಡಿ ದೊರೆಯುತ್ತದೆ.

ಸಣ್ಣ ಉಳಿತಾಯ ಯೋಜನೆಗಳೆಂದರೇನು?

ಸಣ್ಣ ಉಳಿತಾಯ ಯೋಜನೆಗಳು ಸಾರ್ವಜನಿಕರನ್ನು ನಿಯಮಿತವಾಗಿ ಉಳಿಸಲು ಪ್ರೋತ್ಸಾಹಿಸಲು ಸರ್ಕಾರದಿಂದ ನಿರ್ವಹಿಸಲಾಗುವ ಉಳಿತಾಯ ಸಾಧನಗಳಾಗಿವೆ. ಸಣ್ಣ ಉಳಿತಾಯ ಯೋಜನೆಗಳು ಮೂರು ವಿಭಾಗಗಳನ್ನು ಹೊಂದಿವೆ – ಉಳಿತಾಯ ಠೇವಣಿಗಳು, ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಮಾಸಿಕ ಆದಾಯ ಯೋಜನೆಗಳು.

ಈ ಸಣ್ಣ ಉಳಿತಾಯ ಯೋಜನೆಗಳು 1ರಿಂದ 3 ವರ್ಷದವರೆಗಿನ ಠೇವಣಿಗಳು ಮತ್ತು 5 ವರ್ಷದವರೆಗಿನ ಮರುಕಳಿಸುವ ಠೇವಣಿಗಳನ್ನು ಒಳಗೊಂಡಿರುತ್ತವೆ. ಜತೆಗೆ, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್, ಕಿಸಾನ್ ವಿಕಾಸ್ ಪತ್ರಗಳಂತ ಸರ್ಟಿಫಿಕೇಟ್‌ಗಳೂ ಇರತ್ತವೆ.

ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆ, ಹಿರಿಯ ನಾಕರಿಕ ಉಳಿತಾಯ ಯೋಜನೆ ಇತ್ಯಾದಿಗಳು ಸಾಮಾಜಿಗ ಭದ್ರತಾ ಯೋಜನೆಗಳ ಅಡಿಯಲ್ಲಿ ಬರುತ್ತವೆ. ಇನ್ನು, ಮಾಸಿಗ ಆದಾಯ ಯೋಜನೆಯಲ್ಲಿ ಮಾಸಿಕ ಆದಾಯ ಖಾತೆ ಸೇರ್ಪಡೆಯಾಗುತ್ತದೆ.

ಈ ಸುದ್ದಿಯನ್ನೂ ಓದಿ: Money Guide: ಇದು ಖುಷಿಯ ಸುದ್ದಿ… ಐದು ವರ್ಷದ ಆರ್‌ಡಿ ಖಾತೆ ಬಡ್ಡಿ ದರ ಶೇ.6.7ಕ್ಕೆ ಹೆಚ್ಚಳ!

ಯಾವ ಪ್ಲ್ಯಾನ್‌ನಲ್ಲಿ ಎಷ್ಟು ಬಡ್ಡಿ?

-1 ವರ್ಷದ ಅಂಚೆ ಕಚೇರಿ ಠೇವಣಿ; ಶೇ.6.9
-2 ವರ್ಷದ ಅಂಚೆ ಕಚೇರಿ ಠೇವಣಿ; ಶೇ.7.0
-3 ವರ್ಷದ ಅಂಚೆ ಕಚೇರಿ ಠೇವಣಿ; ಶೇ.7
-5 ವರ್ಷದ ಅಂಚೆ ಕಚೇರಿ ಠೇವಣಿ; ಶೇ.7.5
-5 ವರ್ಷದ ಆರ್‌ಡಿ ಖಾತೆ; ಶೇ.6.7
-ರಾಷ್ಟ್ರೀಯ ಸೇವಿಂಗ್ ಸರ್ಟಿಫಿಕೇಟ್; ಶೇ.6.5
-ಕಿಸಾನ್ ವಿಕಾಸ್ ಪತ್ರ; 7.5(115 ತಿಂಗಳಿಗೆ ಮೆಚ್ಯೂರ್ ಆಗುತ್ತದೆ)
-ಪಿಪಿಎಫ್;ಶೇ.7.1
-ಸುಕನ್ಯಾ ಸಮೃದ್ಧಿ ಖಾತೆ; ಶೇ.8
-ಹಿರಿಯ ನಾಗರಿಕರ ಸೇವಿಂಗ್; 8
-ಮಾಸಿಕ ಆದಾಯ ಖಾತೆ; ಶೇ.7.4

Continue Reading

ದೇಶ

India’s GDP: ಈ ವರ್ಷ ಭಾರತದ ಜಿಡಿಪಿ ಬೆಳವಣಿಗೆ 6.3%: ವಿಶ್ವ ಬ್ಯಾಂಕ್‌ ಅಂದಾಜು

ಜಾಗತಿಕ ಸನ್ನಿವೇಶಗಳ ಸವಾಲಿನ ನಡುವೆ ಭಾರತ ಹಣಕಾಸಿನ ಸ್ಥಿತಿಸ್ಥಾಪಕತ್ವ ಕಾಪಾಡಿಕೊಂಡಿದೆ ಎಂದಿರುವ ಬ್ಯಾಂಕ್‌, 2023-24ರ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಹಿಂದಿನ ಶೇಕಡಾ 6.6ರಿಂದ ತನ್ನ ಏಪ್ರಿಲ್ ವರದಿಯಲ್ಲಿ ಶೇಕಡಾ 6.3ಕ್ಕೆ ಕಡಿತಗೊಳಿಸಿದೆ.

VISTARANEWS.COM


on

gdp
Koo

ಹೊಸದಿಲ್ಲಿ: 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ (India’s GDP growth) ದರವನ್ನು ವಿಶ್ವ ಬ್ಯಾಂಕ್ (World bank) ಶೇಕಡಾ 6.3ರಲ್ಲಿ ಉಳಿಸಿಕೊಂಡಿದೆ.

ಜಾಗತಿಕ ಸನ್ನಿವೇಶಗಳ ಸವಾಲಿನ ನಡುವೆ ಭಾರತ ಹಣಕಾಸಿನ ಸ್ಥಿತಿಸ್ಥಾಪಕತ್ವ ಕಾಪಾಡಿಕೊಂಡಿದೆ ಎಂದಿರುವ ಬ್ಯಾಂಕ್‌, 2023-24ರ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಹಿಂದಿನ ಶೇಕಡಾ 6.6ರಿಂದ ತನ್ನ ಏಪ್ರಿಲ್ ವರದಿಯಲ್ಲಿ ಶೇಕಡಾ 6.3ಕ್ಕೆ ಕಡಿತಗೊಳಿಸಿದೆ.

ಮಂಗಳವಾರ ಬಿಡುಗಡೆಯಾದ ವಿಶ್ವಬ್ಯಾಂಕ್‌ನ ಇತ್ತೀಚಿನ ಇಂಡಿಯಾ ಡೆವಲಪ್‌ಮೆಂಟ್ ಅಪ್‌ಡೇಟ್ (ಐಡಿಯು) ಪ್ರಕಾರ, ಗಮನಾರ್ಹ ಜಾಗತಿಕ ಸವಾಲುಗಳ ಹೊರತಾಗಿಯೂ, ಭಾರತವು 2022-23ರಲ್ಲಿ 7.2 ಶೇ. ವೇಗದಲ್ಲಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಭಾರತದ ಬೆಳವಣಿಗೆ ದರವು G20 ದೇಶಗಳಲ್ಲಿ ಎರಡನೇ ಅತಿ ಹೆಚ್ಚು ಮತ್ತು ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳಿಗೆ ಸರಾಸರಿ ಎರಡು ಪಟ್ಟು ಹೆಚ್ಚಾಗಿದೆ. ಈ ಸ್ಥಿತಿಸ್ಥಾಪಕತ್ವವು ದೃಢವಾದ ಆಂತರಿಕ ಬೇಡಿಕೆ, ಬಲವಾದ ಸಾರ್ವಜನಿಕ ಮೂಲಸೌಕರ್ಯ ಹೂಡಿಕೆ ಮತ್ತು ದೃಢ ಆರ್ಥಿಕ ವಲಯದ ಆಧಾರ ಹೊಂದಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ಭಾರತದಲ್ಲಿ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ ಸಾಲ ಶೇಕಡಾ 15.8ರಷ್ಟು ಬೆಳೆದಿದೆ. ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದು ಶೇಕಡಾ 13.3 ಇತ್ತು. ಭಾರತದ ಸೇವಾ ವಲಯದ ಚಟುವಟಿಕೆಯು 7.4 ಶೇಕಡಾ ಬೆಳವಣಿಗೆಯೊಂದಿಗೆ ಪ್ರಬಲವಾಗಿ ಉಳಿಯುವ ನಿರೀಕ್ಷೆಯಿದೆ. ಹೂಡಿಕೆಯ ಬೆಳವಣಿಗೆಯು 8.9 ಶೇಕಡಾದಲ್ಲಿ ದೃಢವಾಗಿ ಉಳಿಯುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೆಚ್ಚಿನ ಜಾಗತಿಕ ಬಡ್ಡಿದರಗಳು, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ನಿಧಾನವಾದ ಜಾಗತಿಕ ಬೇಡಿಕೆಯಿಂದಾಗಿ ಜಾಗತಿಕ ಆರ್ಥಿಕ ಬೆಳವಣಿಗೆಯು ಮಧ್ಯಮ ಅವಧಿಯಲ್ಲಿ ನಿಧಾನಗೊಳ್ಳಲಿದೆ ಎಂದಿದೆ. ಇತ್ತೀಚಿನ ತಿಂಗಳುಗಳಲ್ಲಿ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾದ ಭಾರತದಲ್ಲಿನ ಪ್ರತಿಕೂಲ ಹವಾಮಾನದ ಬಗ್ಗೆ ವಿಶ್ವ ಬ್ಯಾಂಕ್ ವರದಿ ಉಲ್ಲೇಖಿಸಿದ್ದು, ಆಹಾರದ ಬೆಲೆಗಳು ಕಡಿಮೆಯಾಗುವುದರಿಂದ ಮತ್ತು ಸರ್ಕಾರದ ಕ್ರಮಗಳು ಪ್ರಮುಖ ಸರಕುಗಳ ಪೂರೈಕೆಯನ್ನು ಹೆಚ್ಚಿಸುವುದರಿಂದ ಬೆಲೆ ಏರಿಕೆ ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ ಎಂದಿದೆ.

ಗೋಧಿ ಮತ್ತು ಅಕ್ಕಿಯಂತಹ ಆಹಾರ ಪದಾರ್ಥಗಳ ಬೆಲೆಗಳ ಏರಿಕೆಯಿಂದಾಗಿ ಜುಲೈನಲ್ಲಿ ಭಾರತದಲ್ಲಿ ​​ಹಣದುಬ್ಬರ 7.8 ಶೇಕಡಾಕ್ಕೆ ಏರಿತು. ಆಗಸ್ಟ್‌ನಲ್ಲಿ 6.8 ಶೇಕಡಾಕ್ಕೆ ಇಳಿಯಿತು. ವಿಶ್ವಬ್ಯಾಂಕ್ 2023-24ರಲ್ಲಿ ವಿತ್ತೀಯ ಬಲವರ್ಧನೆ ಮುಂದುವರಿಯುತ್ತದೆ ಎಂದು ನಿರೀಕ್ಷಿಸಿದೆ. ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಜಿಡಿಪಿಯ 6.4 ಶೇಕಡಾದಿಂದ 5.9 ಶೇಕಡಾಕ್ಕೆ ಇಳಿಕೆಯಾಗಲಿದೆ ಎಂದಿದೆ. ಸಾರ್ವಜನಿಕ ಸಾಲವು ಜಿಡಿಪಿಯ ಶೇಕಡಾ 83ರಷ್ಟು ಸ್ಥಿರಗೊಳ್ಳುವ ನಿರೀಕ್ಷೆಯಿದೆ. ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇಕಡಾ 1.4ಕ್ಕೆ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: India’s GDP : ಭಾರತದ ಜಿಡಿಪಿ ಈಗ 3.75 ಲಕ್ಷ ಕೋಟಿ ಡಾಲರ್‌ಗೆ ಏರಿಕೆ, 2014ರಲ್ಲಿ ಎಷ್ಟಿತ್ತು?

Continue Reading

ದೇಶ

Monsoon Deficit 2023: ದೇಶದಲ್ಲಿ 5 ವರ್ಷದಲ್ಲೇ ಕನಿಷ್ಠ ಮಳೆ; ಶೀಘ್ರವೇ ಬೆಲೆ ಏರಿಕೆ ಗ್ಯಾರಂಟಿ!

Monsoon Deficit 2023: ದೇಶದಲ್ಲಿ ಕಳೆದ ಐದು ವರ್ಷದಲ್ಲಿಯೇ ಕನಿಷ್ಠ ಪ್ರಮಾಣದ ಮಳೆಯಾದ ಕಾರಣ ಶೀಘ್ರದಲ್ಲೇ ಆಹಾರ ಪದಾರ್ಥಗಳು, ಬೇಳೆ-ಕಾಳುಗಳ ಬೆಲೆ ಏರಿಕೆಯಾಗುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.

VISTARANEWS.COM


on

Rain Deficit In India
ಸಾಂದರ್ಭಿಕ ಚಿತ್ರ.
Koo

ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಈ ಬಾರಿಯ ಮುಂಗಾರು ಮಳೆ ಪ್ರಮಾಣ (Monsoon Deficit 2023) ಗಣನೀಯವಾಗಿ ಕುಸಿದಿದೆ. ಇತ್ತೀಚಿನ ವರದಿಗಳ ಪ್ರಕಾರ, 2023ರಲ್ಲಿ ಮುಂಗಾರು ಮಳೆಯು ಕಳೆದ ಐದು ವರ್ಷದಲ್ಲಿಯೇ ಕನಿಷ್ಠ ಪ್ರಮಾಣ ಆಗಿರುವ ಕಾರಣ ಕೃಷಿಗೆ (Agriculture) ಭಾರಿ ಹೊಡೆತ ಬಿದ್ದಿದೆ ಎಂದು ತಿಳಿದುಬಂದಿದೆ. ಹಾಗಾಗಿ, ದೇಶದಲ್ಲಿ ಆಹಾರ ಕೊರತೆ, ಬೇಳೆ-ಕಾಳುಗಳು ಸೇರಿ ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ.

ಭಾರತವು 3 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯನ್ನು ಹೊಂದಿದ್ದು, ಇದಕ್ಕೆ ಕೃಷಿ ಪಾಲು ಹೆಚ್ಚಿದೆ. ಅದರಲ್ಲೂ, ಮುಂಗಾರು ಮಳೆಯು ದೇಶದ ಶೇ.70ರಷ್ಟು ಕೃಷಿ ಭೂಮಿಗೆ ನೀರು ಒದಗಿಸುತ್ತದೆ. ಮುಂಗಾರು ಮಳೆಯ ಮೇಲೆ ಭಾರತದ ಬಹುತೇಕ ಕೃಷಿಯು ಅವಲಂಬನೆಯಾಗಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯ ಕೊರತೆಯಾದ ಕಾರಣ ಕೃಷಿಗೆ ಭಾರಿ ಪೆಟ್ಟು ಬಿದ್ದಿದೆ ಎಂದು ವರದಿ ತಿಳಿಸಿದೆ. ಇದಕ್ಕೆ ಎಲ್‌ನಿನೋ (ಪೆಸಿಫಿಕ್‌ ಮಹಾಸಾಗರದಲ್ಲಿ ಉಷ್ಣಾಂಶ ಹೆಚ್ಚಾಗಿ, ಮಳೆಯ ಮಾರುತ ದಿಕ್ಕು ಬದಲಿಸುವುದು) ಪರಿಣಾಮ ಪ್ರಮುಖ ಕಾರಣ ಎಂದೇ ಹೇಳಲಾಗುತ್ತಿದೆ.

ಯಾವ ತಿಂಗಳಲ್ಲಿ ಎಷ್ಟು ಕೊರತೆ?

ಮುಂಗಾರು ಮಳೆ ಅವಧಿಯಾದ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ದೇಶದಲ್ಲಿ ಶೇ.94ರಷ್ಟು ಮಳೆಯಾಗಿದೆ. ಇದು ವಾಡಿಕೆಯ ಮಳೆಗಿಂತ ಶೇ.4ರಷ್ಟು ಕಡಿಮೆಯಾಗಿದೆ. ಅದರಲ್ಲೂ ಬಿತ್ತನೆ ಮಾಡಬೇಕಾದ ಜೂನ್‌ನಲ್ಲಿ ಶೇ.9ರಷ್ಟು, ಜುಲೈನಲ್ಲಿ ಶೇ.13ರಷ್ಟು, ಆಗಸ್ಟ್‌ನಲ್ಲಿ ಶೇ.36ರಷ್ಟು ಹಾಗೂ ಸೆಪ್ಟೆಂಬರ್‌ನಲ್ಲಿ ಶೇ.13ರಷ್ಟು ಮುಂಗಾರು ಮಳೆ ಕೊರತೆಯಾಗಿದೆ. ಇದು ದೇಶದ ಕೃಷಿಯ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ಇದನ್ನೂ ಓದಿ: karnataka weather forecast : ಕರಾವಳಿಯಲ್ಲಿ ಪ್ರಬಲವಾದ ಮುಂಗಾರು; ಬಿರುಗಾಳಿ ಸಾಥ್‌

ಮಳೆ ಕೊರತೆಯಿಂದಾಗಿ ಸಕ್ಕರೆ, ಕಾಳುಗಳು, ಅಕ್ಕಿ ಹಾಗೂ ತರಕಾರಿ ಸೇರಿ ಹಲವು ಆಹಾರ ಪದಾರ್ಥಗಳ ಉತ್ಪಾದನೆ ಕುಂಠಿತವಾಗಿದೆ. ಇದರಿಂದಾಗಿ ಇವುಗಳ ಬೆಲೆಯು ಈಗಾಗಲೇ ಏರಿಕೆಯಾಗಿದೆ. ಭಾರತವು ಅಕ್ಕಿ, ಗೋಧಿ ಹಾಗೂ ಸಕ್ಕರೆ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನ ಪಡೆದಿದೆ. ಹೀಗಿದ್ದರೂ ಇವುಗಳ ರಫ್ತಿನ ಮೇಲೆ ಅಧಿಕ ಸುಂಕ ವಿಧಿಸುವ ಮೂಲಕ ದೇಶದಲ್ಲಿ ಆಹಾರ ಕೊರತೆ ಉಂಟಾಗದಂತೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ. ಇಷ್ಟಾದರೂ ಮುಂದಿನ ದಿನಗಳಲ್ಲಿ ಬೆಲೆಯೇರಿಕೆ ತಪ್ಪಿದ್ದಲ್ಲ ಎಂದು ತಜ್ಞರು ತಿಳಿಸಿದ್ದಾರೆ.

Continue Reading

ಆಟೋಮೊಬೈಲ್

Car Sales: ಆಟೊಮೊಬೈಲ್‌ ವಲಯ ಚೇತರಿಕೆ, ಸೆಪ್ಟೆಂಬರ್‌ನಲ್ಲಿ ಕಾರುಗಳ ಸಾರ್ವಕಾಲಿಕ ದಾಖಲೆ ಮಾರಾಟ

ಸೆಪ್ಟೆಂಬರ್ ತಿಂಗಳಿನಲ್ಲಿ ಕಾರುಗಳ ಮಾರಾಟ ದಾಖಲೆ ಬರೆದಿದೆ. ಮಾರಾಟವಾದ ಎಲ್ಲ ಕಂಪನಿಗಳ ಕಾರುಗಳ ಒಟ್ಟಾರೆ ಸಂಖ್ಯೆ 3,63,733.

VISTARANEWS.COM


on

Car Sales
Koo

ಹೊಸದಿಲ್ಲಿ: ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಕಾರುಗಳ ಮಾರಾಟ (Car Sales) ದಾಖಲೆ ಸಂಖ್ಯೆ ಮುಟ್ಟಿದ್ದು, ಆಟೊಮೊಬೈಲ್‌ ವಲಯದಲ್ಲಿ (Automobile industry) ಹರ್ಷ ಮೂಡಿಸಿದೆ. ಬಹುತೇಕ ಎಲ್ಲ ಕಂಪನಿಗಳ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.

ಭಾರತೀಯ ಪ್ರಯಾಣಿಕ ವಾಹನ (Passenger Vehicles) ಮಾರುಕಟ್ಟೆಯ ವಹಿವಾಟಿನಲ್ಲಿ ಸೆಪ್ಟೆಂಬರ್‌ನಲ್ಲಿ ಬಹಳಷ್ಟು ಹೆಚ್ಚಳ ಕಂಡುಬಂತು. ಕಳೆದ ಎರಡು ವರ್ಷಗಳಲ್ಲಿ ಆಟೊಮೊಬೈಲ್‌ ಕ್ಷೇತ್ರ ಕೋವಿಡ್‌ ಸಂದರ್ಭದ ಲಾಕ್‌ಡೌನ್‌ ಪರಿಣಾಮ ತತ್ತರಿಸಿತ್ತು. ನಂತರ ಸೆಮಿ ಕಂಡಕ್ಟರ್‌ಗಳ (Semi conductor) ಕೊರತೆ ಉಂಟಾಗಿತ್ತು. ಇದೀಗ ಆಟೊಮೊಬೈಲ್‌ ತಯಾರಿಕರಿಗೆ ಸಿಹಿ ಸುದ್ದಿ ಬಂದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕಾರುಗಳ ಮಾರಾಟ ದಾಖಲೆ ಬರೆದಿದೆ. ಮಾರಾಟವಾದ ಎಲ್ಲ ಕಂಪನಿಗಳ ಕಾರುಗಳ ಒಟ್ಟಾರೆ ಸಂಖ್ಯೆ 3,63,733. ಇದು ಮಾಸಿಕ ಮಾರಾಟದ ಸಾರ್ವಕಾಲಿಕ ದಾಖಲೆ. ಇನ್ನಷ್ಟು ಸಂತಸದ ಸಂಗತಿಯೆಂದರೆ ಬೇಡಿಕೆಯು ಏರುತ್ತಿದೆ ಮತ್ತು ಉತ್ಪಾದನಾ ನಿರ್ಬಂಧಗಳು ಈಗ ಮರೆಯಾಗುತ್ತಿವೆ.

ಮಾರುತಿ ಸುಜುಕಿಯನ್ನೇ (Maruti Suzuki) ತೆಗೆದುಕೊಂಡರೆ, ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಇದು 1,81,343 ಕಾರುಗಳನ್ನು ಮಾರಿದೆ. ಇದು ಹೊಸ ವೈಯಕ್ತಿಕ ದಾಖಲೆ. ಇದು ಒಂದು ತಿಂಗಳ ಇದುವರೆಗಿನ ಗರಿಷ್ಠ. ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಕಂಪನಿಯ ಒಟ್ಟು ಮಾರಾಟ 10 ಲಕ್ಷ ಯುನಿಟ್‌ಗಳನ್ನು ಮೀರಿದೆ.

“ಸೆಮಿಕಂಡಕ್ಟರ್ ಸಮಸ್ಯೆ ಕಡಿಮೆಯಾಗಿದೆ. ಬೇಡಿಕೆ ಹೆಚ್ಚುತ್ತಿದೆ. ನಮ್ಮ ಹೊಸ ಮಾಡೆಲ್‌ಗಳು, ವಿಶೇಷವಾಗಿ ವಿಟಾರಾ ಬ್ರೆಝಾ ಹೆಚ್ಚು ಬೇಡಿಕೆ ಹೊಂದಿದೆ” ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ. ಸದ್ಯ 40,000 ಬ್ರೆಝಾ, 23,000 ವಿಟಾರಾ ಬ್ರೆಝಾ, 20,000 ಫ್ರಾಂಕ್ಸ್‌, 10,000 ಜಿಮ್ಮಿ, 7,500 ಇನ್‌ವಿಕ್ಟೊಗಳಿಗೆ ಬೇಡಿಕೆ ಇದೆ.

ಇತರ ಕಂಪನಿಗಳಾದ ಹ್ಯುಂಡೈ, ಮಹಿಂದ್ರ, ಟೊಯೊಟಾ ಕೂಡ ದಾಖಲೆ ಮಾರಾಟ ಮಾಡಿವೆ. ಹ್ಯುಂಡೈ ಕಂಪನಿ 71,641 ಕಾರುಗಳನ್ನು ಮಾರಿದೆ. ಇದರಲ್ಲಿ ಕ್ರೆಟಾ, ವೆನ್ಯೂ, ಎಕ್ಸ್‌ಟರ್‌ ಸೇರಿವೆ.
ಮಹಿಂದ್ರದ ಎಸ್‌ಯುವಿಗಳು 41,267ರಷ್ಟು ಮಾರಾಟವಾಗಿವೆ.

ಹೆಚ್ಚಿನ ಕಾರುಗಳ ಮಾರಾಟ ಆಗಿರುವುದು ಎಸ್‌ಯುವಿಗಳ ವಿಭಾಗದಲ್ಲಿ. ಸಣ್ಣ ಕಾರುಗಳ ಮಾರಾಟ ಸ್ವಲ್ಪ ಕಡಿಮೆ ಇದೆ. ಮಾರುತಿಯನ್ನು ಸಣ್ಣ ಮತ್ತು ಕೈಗೆಟುಕುವ ಕಾರುಗಳ ಚಾಂಪಿಯನ್ ಎಂದು ದೀರ್ಘಕಾಲದಿಂದ ಪರಿಗಣಿಸಲಾಗಿದೆ. ಮಾರಾಟದಲ್ಲೂ ಅದು ನಿಜವಾಗಿದೆ. ಅದರ ಆಲ್ಟೊ ಮತ್ತು ಎಸ್-ಪ್ರೆಸ್ಸೊ ಮಾದರಿಗಳು 2022ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ಸೆಪ್ಟೆಂಬರ್‌ನಲ್ಲಿ 65 ಪ್ರತಿಶತದಷ್ಟು ಕುಸಿದಿವೆ. ಅಂದರೆ ಇಲ್ಲೂ ಎಸ್‌ಯುವಿಗಳದೇ ಪ್ರಾಬಲ್ಯ.

ಹೆಚ್ಚು ಹೆಚ್ಚು ಭಾರತೀಯರು ಸಮೂಹ- ಮಾರುಕಟ್ಟೆ ವಿಭಾಗದಲ್ಲಿ ಹೆಚ್ಚು ಪ್ರೀಮಿಯಂ ವಾಹನಗಳನ್ನು ಖರೀದಿಸುತ್ತಿದ್ದರೂ ಸಹ, ತಯಾರಕರು ಇನ್ನಷ್ಟು ಹೆಚ್ಚಿನ ವ್ಯಾಪಾರವನ್ನು ಅಕ್ಟೋಬರ್‌ನಲ್ಲಿ ನಿರೀಕ್ಷಿಸುತ್ತಿದ್ದಾರೆ. ಸಾಕಷ್ಟು ಹಬ್ಬಗಳು ಹಾಗೂ ಫೆಸ್ಟಿವ್‌ ಆಫರ್‌ಗಳು ಈ ಮಾಸದಲ್ಲಿವೆ.

ಇದನ್ನೂ ಓದಿ: Car sales up | ಆಗಸ್ಟ್‌ನಲ್ಲಿ ಕಾರುಗಳ ಬಂಪರ್‌ ಮಾರಾಟ, 30% ಹೆಚ್ಚಳ

Continue Reading
Advertisement
Hospital
ಪ್ರಮುಖ ಸುದ್ದಿ29 mins ago

ವಿಸ್ತಾರ ಸಂಪಾದಕೀಯ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿನ ಸರಣಿ ಸಾವು ಆಘಾತಕರ

dina bhavishya
ಪ್ರಮುಖ ಸುದ್ದಿ1 hour ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

Sphoorti Salu
ಸುವಚನ1 hour ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Vivek Ramaswamy offering rs 80 lakh to nanny Says media report
ಪ್ರಮುಖ ಸುದ್ದಿ6 hours ago

ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

MLC TA Sharavana
ಬೆಂಗಳೂರು7 hours ago

TA Sharavana: ಅನಾಮಿಕರಾಗಿದ್ದ ಜಮೀರ್‌ಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್: ಟಿ.ಎ.ಶರವಣ

Justin Trudeau
ದೇಶ7 hours ago

India Canada Row: ಥಂಡಾ ಹೊಡೆದ ಕೆನಡಾ ಪಿಎಂ! ಭಾರತದೊಂದಿಗೆ ಇನ್ನು ಜಗಳ ಮಾಡಲ್ಲ ಎಂದ ಟ್ರೂಡೋ

Netherlands cricket team
ಕ್ರಿಕೆಟ್7 hours ago

ICC World Cup 2023 : ವಿಶ್ವ ಕಪ್​ನಲ್ಲಿ ಆಡಲಿರುವ ನೆದರ್ಲ್ಯಾಂಡ್ಸ್​​ ತಂಡದ ಬಲವೇನು? ದೌರ್ಬಲ್ಯವೇನು?

Modi and KTR
ದೇಶ7 hours ago

ಎನ್‌ಡಿಎಗೆ ಸೇರಿಸಿಕೊಳ್ಳಿ ಎಂದಿದ್ದ ಕೆಸಿಆರ್; ಮೋದಿ! ಬಿಜೆಪಿ ಜತೆ ಹೋಗಲು ನಮಗೇನು ಹುಚ್ಚು ನಾಯಿ ಕಚ್ಚಿದೆಯಾ; ಕೆಟಿಆರ್

Child dies
ಕರ್ನಾಟಕ8 hours ago

Anekal News: ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು

MB Patil visits america
ಕರ್ನಾಟಕ8 hours ago

MB Patil : ಬೆಂಗಳೂರಿನಲ್ಲಿ 800 ಕೋಟಿ ರೂ. ಹೂಡಲು ಕ್ರಿಪ್ಟನ್ ಸೊಲ್ಯೂಷನ್ಸ್ ಒಲವು: ಎಂ.ಬಿ. ಪಾಟೀಲ್

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Karnataka bandh Majestic
ಕರ್ನಾಟಕ1 week ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

kpsc recruitment 2023 pdo recruitment 2023
ಉದ್ಯೋಗ3 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ10 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

dina bhavishya
ಪ್ರಮುಖ ಸುದ್ದಿ1 hour ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ

The maintenance train finally lifted Metro services as usual
ಕರ್ನಾಟಕ15 hours ago

Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್‌ ವೆಹಿಕಲ್‌; ಎಂದಿನಂತೆ ಮೆಟ್ರೋ ಓಡಾಟ

BBK Season 10 KicchaSudeep
ಕಿರುತೆರೆ16 hours ago

BBK Season 10 : ಅಕ್ಟೋಬರ್‌ 8 ರಿಂದ ಬಿಗ್‌ ಬಾಸ್‌ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?

dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!

Actor Nagabhushana
ಕರ್ನಾಟಕ2 days ago

Actor Nagabhushana : ಡ್ರಂಕ್‌ ಆ್ಯಂಡ್‌ ಡ್ರೈವ್‌ನಲ್ಲಿ ನಟ ನಾಗಭೂಷಣ್‌ ನೆಗಟಿವ್‌; ವಿಚಾರಣೆಗೆ ಕರೆದ ಪೊಲೀಸರು

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಆಪ್ತರೊಂದಿಗೆ ಮಾಡುವ ವ್ಯಾಪಾರ ನಷ್ಟ ತಂದೀತು ಹುಷಾರ್‌!

Terrorist Attack in Turkey Suicide bomber blows himself near parliament
ಪ್ರಮುಖ ಸುದ್ದಿ2 days ago

Terrorist Attack: ಟರ್ಕಿ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ, ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ಕ್ಷಣಗಳು!

prajwal and yashswini
ಕರ್ನಾಟಕ3 days ago

Actor Nagabhushana : ಆ್ಯಕ್ಟಿಂಗ್‌ ನೋಡಿ ಮೆಚ್ಚಿದವರ ಪಾಲಿಗೆ ಯಮನಾಗಿಬಿಟ್ಟ; ಮೃತ ಕುಟುಂಬಸ್ಥರ ಆಕ್ರೋಶ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಆಪ್ತರೊಂದಿಗೆ ಅತಿಯಾದ ಸಲುಗೆ ಈ ರಾಶಿಯವರಿಗೆ ಒಳ್ಳೆಯದಲ್ಲ!

dina bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನ ಪೂರ್ತಿ ಈ ರಾಶಿಯವರಿಗೆ ಟೆನ್ಷನ್‌ ಜತೆಗೆ ಪ್ರೆಶರ್‌

ಟ್ರೆಂಡಿಂಗ್‌