Site icon Vistara News

Gold import | ಏಪ್ರಿಲ್-ಜುಲೈನಲ್ಲಿ ಬಂಗಾರದ ಆಮದು 6.4% ಇಳಿಕೆ

gold import

ನವ ದೆಹಲಿ: ಭಾರತದ ಬಂಗಾರದ ಆಮದು ಕಳೆದ ಏಪ್ರಿಲ್-ಜುಲೈ ಅವಧಿಯಲ್ಲಿ ೬.೪% ಇಳಿಕೆಯಾಗಿದೆ. (Gold import ) ಈ ಅವಧಿಯಲ್ಲಿ ೧೩ ಶತಕೋಟಿ ಡಾಲರ್‌ (೧.೦೪ ಲಕ್ಷ ಕೋಟಿ ರೂ.) ಮೌಲ್ಯದ ಬಂಗಾರವನ್ನು ಆಮದು ಮಾಡಿಕೊಳ್ಳಲಾಗಿದೆ.

ಹೀಗಿದ್ದರೂ, ೨೦೨೨ರ ಜುಲೈನಲ್ಲಿ ಬಂಗಾರದ ಆಮದು ೪೩% ಇಳಿಕೆಯಾಗಿತ್ತು. ೨.೪ ಶತಕೋಟಿ ಡಾಲರ್‌ಗೆ ಇಳಿಕೆಯಾಗಿತ್ತು ( ಅಂದಾಜು ೧೮,೯೬೦ ಕೋಟಿ ರೂ.) ಎಂದು ವಾಣಿಜ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಕಳೆದ ನಾಲ್ಕು ತಿಂಗಳಿನಲ್ಲಿ ತೈಲ ಮತ್ತು ಬಂಗಾರದ ಆಮದು ಹೆಚ್ಚಳದ ಪರಿಣಾಮ ವ್ಯಾಪಾರ ಕೊರತೆ ೩೦ ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. (೨.೪೦ ಲಕ್ಷ ಕೋಟಿ ರೂ.)

ಚೀನಾ ಹೊರತುಪಡಿಸಿದರೆ ಎರಡನೇ ಅತಿ ದೊಡ್ಡ ಚಿನ್ನದ ಆಮದುದಾರ ರಾಷ್ಟ್ರ ಭಾರತವಾಗಿದೆ. ಜ್ಯುವೆಲ್ಲರಿ ಇಂಡಸ್ಟ್ರಿಗೆ ಅತ್ಯಧಿಕ ಬಂಗಾರ ಆಮದಾಗುತ್ತದೆ.

Exit mobile version