Site icon Vistara News

Gold In Country: ಅತೀ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳಲ್ಲಿ ಭಾರತ ಯಾವ ಸ್ಥಾನದಲ್ಲಿದೆ?

Gold In Country

ವಿಶ್ವದಲ್ಲೇ ಅತೀ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳಲ್ಲಿ (Gold In Country) ಯುನೈಟೆಡ್ ಸ್ಟೇಟ್ಸ್ (United States ) ಮೊದಲ ಸ್ಥಾನದಲ್ಲಿದ್ದು, ಜರ್ಮನಿ (germany), ಇಟಲಿ (Italy) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ (world gold council) 2024ರಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಚಿನ್ನ ಹೊಂದಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಾಪ್ ಹತ್ತರೊಳಗೆ ಇರುವ ದೇಶಗಳಲ್ಲಿ ಯಾವೆಲ್ಲ ದೇಶದಲ್ಲಿ ಎಷ್ಟು ಚಿನ್ನವಿದೆ ಎನ್ನುವ ಕುರಿತು ಮಾಹಿತಿ ನೀಡಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯುನೈಟೆಡ್ ಕಿಂಗ್‌ಡಮ್ ನಿಂದ ತನ್ನ 100 ಟನ್ ಚಿನ್ನದ ನಿಕ್ಷೇಪಗಳ ಮರಳಿ ಪಡೆಯಲು ಪ್ರಾರಂಭ ಮಾಡಿದೆ. 1991ರಿಂದ ಸಾಗರೋತ್ತರ ಚಿನ್ನದ ನಿಕ್ಷೇಪದ ಒಂದು ಭಾಗವನ್ನು ಮರಳಿ ಸ್ವದೇಶಕ್ಕೆ ಹಿಂದಿರುಗಿಸುವ ಕಾರ್ಯ ನಡೆಯುತ್ತಿದೆ.

ಸುಮಾರು 500 ಟನ್‌ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಹೊಂದಿರುವ ಭಾರತ 300 ಟನ್‌ಗಳಷ್ಟು ದೇಶದಲ್ಲಿ ಹೊಂದಿದೆ. ವಿದೇಶದಿಂದ 100 ಟನ್‌ಗಳು ವಾಪಾಸ್ ಆಗಲಿರುವುದರಿಂದ ಶೇ. 50ರಷ್ಟು ಜಯವನ್ನು ಸಾಧಿಸಿದಂತಾಗಿದೆ ಎಂದು ಆರ್ ಬಿಐ ಹೇಳಿದೆ. ಆದರೆ ಚಿನ್ನವನ್ನು ಮರಳಿ ತರುವ ಹಿಂದಿನ ತಾರ್ಕಿಕತೆಯ ಬಗ್ಗೆ ತಜ್ಞರು ಗೊಂದಲವನ್ನು ವ್ಯಕ್ತಪಡಿಸಿದ್ದಾರೆ.

ಅದೇನೇ ಇರಲಿ 2024ರ ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ, ಹೆಚ್ಚು ಚಿನ್ನವನ್ನು ಹೊಂದಿರುವ ಟಾಪ್ 10 ದೇಶಗಳ ಭಾರತ ಯಾವ ಸ್ಥಾನದಲ್ಲಿದೆ ನೋಡೋಣ.


ಅಮೆರಿಕ

ವಿಶ್ವದಲ್ಲೇ ಅತಿ ಹೆಚ್ಚು ಚಿನ್ನವನ್ನು ಹೊಂದಿರುವ ಯುನೈಟೆಡ್ ಸ್ಟೇಟ್ಸ್ ನಲ್ಲಿ 8,133.46 ಟನ್‌ ಚಿನ್ನದ ನಿಕ್ಷೇಪಗಳು, ಸಂಗ್ರಹದಲ್ಲಿರುವ ಚಿನ್ನ ಮೌಲ್ಯ 4,84,96,863.22 ರೂ.

Gold In Country


ಜರ್ಮನಿ

ವಿಶ್ವದಲ್ಲೇ ಅತಿ ಹೆಚ್ಚು ಚಿನ್ನವಿರುವ ದೇಶಗಳಲ್ಲಿ ಜರ್ಮನಿ ಎರಡನೇ ಸ್ಥಾನದಲ್ಲಿದ್ದು, ಇಲ್ಲಿ 3,352.65 ಟನ್‌ ಚಿನ್ನದ ನಿಕ್ಷೇಪಗಳು, 2,00,19,628.10 ರೂ. ಮೌಲ್ಯದ ಚಿನ್ನದ ಸಂಗ್ರಹವಿದೆ.


ಇಟಲಿ

ಮೂರನೇ ಸ್ಥಾನದಲ್ಲಿರುವ ಇಟಲಿಯಲ್ಲಿ 2,451.84 ಟನ್‌ ಚಿನ್ನದ ನಿಕ್ಷೇಪಗಳು, 1,46,41,791.72 ರೂ. ಮೌಲ್ಯದ ಚಿನ್ನದ ಸಂಗ್ರಹವಿದೆ.


ಫ್ರಾನ್ಸ್

2,436.88 ಟನ್‌ ಚಿನ್ನದ ನಿಕ್ಷೇಪಗಳು, 14,552,231.79 ರೂ. ಮೌಲ್ಯದ ಚಿನ್ನದ ಸಂಗ್ರಹವಿದೆ.


ರಷ್ಯನ್ ಒಕ್ಕೂಟ

2,332.74 ಟನ್‌ ಚಿನ್ನದ ನಿಕ್ಷೇಪಗಳು, 13,930,123.38 ರೂ. ಮೌಲ್ಯದ ಚಿನ್ನದ ಸಂಗ್ರಹವಿದೆ.


ಚೀನಾ

ಭಾರತದ ನೆರೆಯ ರಾಷ್ಟ್ರವಾದ ಚೀನಾದಲ್ಲಿ 2,262.45 ಟನ್‌ ಚಿನ್ನದ ನಿಕ್ಷೇಪಗಳು, 13,510,099.89 ರೂ. ಮೌಲ್ಯದ ಚಿನ್ನದ ಸಂಗ್ರಹವಿದೆ.


ಸ್ವಿಟ್ಜರ್ಲೆಂಡ್

1,040 ಟನ್‌ ಚಿನ್ನದ ನಿಕ್ಷೇಪಗಳು, 58,29,140.18 ರೂ. ಮೌಲ್ಯದ ಚಿನ್ನದ ಸಂಗ್ರಹವನ್ನು ಹೊಂದಿದೆ.


ಜಪಾನ್

845.97 ಟನ್‌ಗಳಲ್ಲಿ ಚಿನ್ನದ ನಿಕ್ಷೇಪಗಳು, 50,51,790.75 ರೂ. ಮೌಲ್ಯದ ಚಿನ್ನದ ಸಂಗ್ರಹವನ್ನು ಹೊಂದಿದೆ.

ಇದನ್ನೂ ಓದಿ: Indian Economy : 2027ರ ವೇಳೆಗೆ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಐಎಂಎಫ್​ನ ಗೀತಾ ಗೋಪಿನಾಥ್


ಭಾರತ

822.09 ಟನ್‌ ಚಿನ್ನದ ನಿಕ್ಷೇಪಗಳು, 49,09,156.21 ರೂ. ಮೌಲ್ಯದ ಚಿನ್ನದ ಸಂಗ್ರಹವನ್ನು ಹೊಂದಿದೆ.


ನೆದರ್ಲ್ಯಾಂಡ್ಸ್

612.45 ಟನ್‌ ಚಿನ್ನದ ನಿಕ್ಷೇಪಗಳು, 3,657,367.67 ರೂ. ಮೌಲ್ಯದ ಚಿನ್ನದ ಸಂಗ್ರಹವನ್ನು ಹೊಂದಿದೆ.

Exit mobile version