Site icon Vistara News

Gold price | ಬಂಗಾರ, ಪ್ಲಾಟಿನಮ್ ದರ ಯಥಾಸ್ಥಿತಿ, ಬೆಳ್ಳಿ 100 ರೂ. ಏರಿಕೆ

Gold Bond Scheme

ಬೆಂಗಳೂರು:‌ ಬಂಗಾರ ಮತ್ತು ಪ್ಲಾಟಿನಮ್‌ ದರ ಕಳೆದ ಎರಡು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಕುಸಿಯುತ್ತಿದ್ದ ಬೆಳ್ಳಿಯ ದರ ಸ್ವಲ್ಪ ಚೇತರಿಸಿದೆ.

ಬೆಂಗಳೂರಿನಲ್ಲಿ ೨೪ ಕ್ಯಾರಟ್‌ನ ೧೦ ಗ್ರಾಮ್‌ ಚಿನ್ನದ ದರ ಸೋಮವಾರ ೫೨,೨೦೦ ರೂ.ನಷ್ಟಿತ್ತು. ಆಭರಣ ಚಿನ್ನ ಅಥವಾ ೨೨ ಕ್ಯಾರಟ್‌ ಬಂಗಾರದ ದರದಲ್ಲಿ ೧೦೦ ರೂ. ಇಳಿಕೆಯಾಗಿದ್ದು, ೧೦ ಗ್ರಾಮ್‌ ದರ ೪೭,೮೫೦ ರೂ.ನಷ್ಟು ಇತ್ತು. ಬೆಳ್ಳಿಯ ಪ್ರತಿ ಕೆ.ಜಿ ದರದಲ್ಲಿ ೧೦೦ ರೂ. ಏರಿಕೆಯಾಗಿದ್ದು, ೫೫,೬೦೦ ರೂ.ನಷ್ಟಿತ್ತು.

ಪ್ಲಾಟಿನಮ್‌ ದರ ೧೦ ಗ್ರಾಮ್‌ಗೆ ೨೩,೦೨೦ ರೂ.ಗಳಾಗಿದೆ. ಬಂಗಾರದ ದರದಲ್ಲಿ ಕಳೆದ ಎರಡು ದಿನಗಳಲ್ಲಿ ಯಥಾಸ್ಥಿತಿಯಲ್ಲಿದ್ದು, ಖರೀದಿದಾರರು ಇದರ ಉಪಯೋಗ ಪಡೆಯಬಹುದು.

ಹೀಗಿದ್ದರೂ ಕಳೆದ ಜುಲೈ ೧ರಂದು ೨೪ ಕ್ಯಾರಟ್‌ ಚಿನ್ನದ ದರ ೧೦ ಗ್ರಾಮ್‌ಗೆ ೫೨,೨೫೦ ರೂ. ಹಾಗೀ ೨೨ ಕ್ಯಾರಟ್‌ ಚಿನ್ನದ ದರ ೪೭,೯೦೦ ರೂ. ಇತ್ತು. ಇದಕ್ಕೆ ಹೋಲಿಸಿದರೆ ಈಗ ಬಂಗಾರದ ದರ ಹೆಚ್ಚಳವಾಗಿದೆ.

Exit mobile version