ಬೆಂಗಳೂರು: ಬಂಗಾರದ ದರದಲ್ಲಿ ಭಾನುವಾರ ₹200 ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ಗಳ ಪ್ರತಿ 10 ಗ್ರಾಮ್ ಚಿನ್ನದ ದರ ₹50,450 ಇತ್ತು. 22 ಕ್ಯಾರಟ್ ಚಿನ್ನದ ದರ ₹46,250 ಇತ್ತು. ಕಳೆದ ಎರಡು ದಿನಗಳಲ್ಲಿ ಚಿನ್ನದ ದರದಲ್ಲಿ ₹1,040 ತಗ್ಗಿದೆ.
ಬೆಳ್ಳಿಯ ದರದಲ್ಲಿ ₹300 ಏರಿಕೆಯಾಗಿದ್ದು, ₹63,700ಕ್ಕೆ ವೃದ್ಧಿಸಿದೆ. ಚಿನ್ನದ ದರ ಅಂತಾರಾಷ್ಟ್ರೀಯ ದರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,800 ಡಾಲರ್ ಆಸುಪಾಸಿನಲ್ಲಿದೆ.
ಡಾಲರ್ ಪ್ರಾಬಲ್ಯ ಉನ್ನತ ಮಟ್ಟದಲ್ಲಿ ಇರುವ ಕಾರಣ ಬಂಗಾರದ ದರ ಅಲ್ಲಿ ಇಳಿಕೆಯಾಗುತ್ತಿದೆ. ಪ್ರಮುಖ ಕರೆನ್ಸಿಗಳೆದುರು ಡಾಲರ್ ತನ್ನ ಬೆಲೆಯನ್ನು ಕಳೆದ ಕೆಲ ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿಕೊಂಡಿದೆ.
ಇದನ್ನೂ ಓದಿ: GOLD PRICE: ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ ₹820 ರೂ.ಗಳ ಗಣನೀಯ ಇಳಿಕೆ