ಬೆಂಗಳೂರು: ಬಂಗಾರದ ದರದಲ್ಲಿ ಮಂಗಳವಾರ ₹೧೬೦ ರೂ. ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ಗಳ ಪ್ರತಿ 10 ಗ್ರಾಮ್ ಚಿನ್ನದ ದರ ₹5೨,೪೨೦ ರೂ. ಇತ್ತು. ಅಂದರೆ ೧೬೦ ರೂ. ತಗ್ಗಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್ ಚಿನ್ನದ ದರ ₹4೮,೦50 ಇತ್ತು. ಅಂದರೆ ೧೫೦ ರೂ. ತಗ್ಗಿದೆ. ಬೆಳ್ಳಿಯ ದರ ಕೆ.ಜಿಗೆ ೬೩,೪೦೦ ರೂ.ಗೆ ಇಳಿಕೆಯಾಗಿದೆ. ಅಂದರೆ ೧,೪೦೦ ರೂ. ಕಡಿಮೆಯಾಗಿದೆ.
ಚಿನ್ನದ ದರ ಅಂತಾರಾಷ್ಟ್ರೀಯ ದರಕ್ಕೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,780 ಡಾಲರ್ ಆಸುಪಾಸಿನಲ್ಲಿದೆ. ಡಾಲರ್ ಪ್ರಾಬಲ್ಯ ಉನ್ನತ ಮಟ್ಟದಲ್ಲಿ ಇರುವ ಕಾರಣ ಬಂಗಾರದ ದರ ಅಲ್ಲಿ ಇಳಿಕೆಯಾಗುತ್ತಿದೆ. ಪ್ರಮುಖ ಕರೆನ್ಸಿಗಳೆದುರು ಡಾಲರ್ ತನ್ನ ಬೆಲೆಯನ್ನು ಕಳೆದ ಕೆಲ ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿಕೊಂಡಿದೆ.
ಚೀನಾದಲ್ಲಿ ಆರ್ಥಿಕತೆ ಮಂದಗತಿಯಲ್ಲಿದ್ದು, ಚಿನ್ನದ ಬೇಡಿಕೆ ತಗ್ಗಿದೆ. ದರ ಇಳಿಕೆಗೆ ಇದೂ ಒಂದು ಕಾರಣವಾಗಿದೆ ಎನ್ನುತ್ತಾರೆ ತಜ್ಞರು.