ಬೆಂಗಳೂರು: ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಸೂಚ್ಯಂಕಗಳು ಮುಗ್ಗರಿಸಿದ್ದು, ಬಂಗಾರದ ದರದಲ್ಲಿ ತುಸು ಚೇತರಿಕೆ ಕಂಡು ಬಂದಿತು.
ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಮ್‌ಗೆ 100 ರೂ.ಗಳ ಏರಿಕೆ ಉಂಟಾಗಿದ್ದು, 51,710 ರೂ.ಗೆ ವೃದ್ಧಿಸಿತು. ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ಬೆಲೆಯಲ್ಲೂ 100 ರೂ. ತಗ್ಗಿದ್ದು, 47,400 ರೂ.ನಷ್ಟಿತ್ತು. ಸ್ವಾರಸ್ಯವೇನೆಂದರೆ ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ 100 ರೂ. ಇಳಿಕೆಯಾಗಿದ್ದು, 66,700 ರೂ.ಗೆ ತಗ್ಗಿತು.
ಬಂಗಾರದ ಬೆಲೆ ದಿಲ್ಲಿಯಲ್ಲಿ 10 ಗ್ರಾಮ್‌ಗೆ (24 ಕ್ಯಾರಟ್) 51,810 ರೂ, ಚೆನ್ನೈನಲ್ಲಿ 53,000 ರೂ, ಕೋಲ್ಕತಾದಲ್ಲಿ 51,810 ರೂ, ಹೈದರಾಬಾದ್‌ನಲ್ಲಿ 51,810 ರೂ.ನಷ್ಟಿತ್ತು.
ಸಾಮಾನ್ಯವಾಗಿ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಕುಸಿತಕ್ಕೀಡಾದಾಗ ಬಂಗಾರದ ದರಗಳು ಏರಿಕೆಯಾಗುತ್ತವೆ. ಸುರಕ್ಷಿತ ಹೂಡಿಕೆಯ ಸಾಧನವಾಗಿ ಬಂಗಾರಕ್ಕೆ ಆದ್ಯತೆಯನ್ನು ಗಮನಿಸಬಹುದು.