ಬೆಂಗಳೂರು: ಅಮೂಲ್ಯವಾದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಗುರುವಾರ (Gold price) ಇಳಿಕೆ ಉಂಟಾಗಿದೆ. ಬೆಂಗಳೂರಿನಲ್ಲಿ ೨೪ ಕ್ಯಾರಟ್‌ನ ೧೦ ಗ್ರಾಮ್ ಚಿನ್ನದ ದರ ಬುಧವಾರ ೩೩೦ ರೂ. ತಗ್ಗಿದ್ದು, ೫೩,೮೩೦ ರೂ.ನಷ್ಟಿತ್ತು. ಆಭರಣ ಚಿನ್ನ ಅಥವಾ ೨೨ ಕ್ಯಾರಟ್ ಬಂಗಾರದ ದರದಲ್ಲಿ ೩೦೦ ರೂ. ಇಳಿಕೆಯಾಗಿದ್ದು, ೧೦ ಗ್ರಾಮ್ ದರ ೪೯,೬೫೦ ರೂ.ನಷ್ಟು ಇತ್ತು. ಬೆಳ್ಳಿಯ ಪ್ರತಿ ಕೆ.ಜಿ ದರದಲ್ಲಿ 1,700 ರೂ. ಇಳಿಕೆಯಾಗಿದ್ದು, ೭೦,೮೦೦ ರೂ.ನಷ್ಟಿತ್ತು.
ಪ್ಲಾಟಿನಮ್ ದರ ೧೦ ಗ್ರಾಮ್‌ಗೆ ೨೬,೪೧೦ ರೂ.ಗಳಾಗಿದ್ದು, 290 ರೂ. ಇಳಿದಿದೆ. ಬಂಗಾರದ ದರ ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಇತ್ತು.
ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ ಪ್ರಭಾವ ಬೀರುತ್ತದೆ.