ಬೆಂಗಳೂರು: ಬಂಗಾರದ ದರದಲ್ಲಿ ಕಳೆದ ಎರಡು ದಿನಗಳಲ್ಲಿ ೫೪೦ ರೂ. ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ೨೪ ಕ್ಯಾರಟ್‌ನ ೧೦ ಗ್ರಾಮ್ ಚಿನ್ನದ ದರ ಗುರುವಾರ ೧೬೦ ರೂ. ತಗ್ಗಿದ್ದು, ೫೧,೬೫೦ ರೂ.ನಷ್ಟಿತ್ತು. ಆಭರಣ ಚಿನ್ನ ಅಥವಾ ೨೨ ಕ್ಯಾರಟ್ ಬಂಗಾರದ ದರದಲ್ಲಿ ೧೫೦ ರೂ. ಇಳಿಕೆಯಾಗಿದ್ದು, ೧೦ ಗ್ರಾಮ್ ದರ ೪೭,೨೦೦ ರೂ.ನಷ್ಟು ಇತ್ತು. ಬೆಳ್ಳಿಯ ಪ್ರತಿ ಕೆ.ಜಿ ದರದಲ್ಲಿ ೭೦೦ ರೂ. ಇಳಿಕೆಯಾಗಿದ್ದು, ೬೦,೦೦೦ ರೂ.ನಷ್ಟಿತ್ತು.
ಪ್ಲಾಟಿನಮ್ ದರ ೧೦ ಗ್ರಾಮ್‌ಗೆ ೨೧,೯೩೦ ರೂ.ಗಳಾಗಿದ್ದು, ೨೦೦ ರೂ. ಇಳಿಕೆಯಾಗಿದೆ. ಖರೀದಿದಾರರು ಇದರ ಉಪಯೋಗ ಪಡೆಯಬಹುದು
ಅಮೆರಿಕದಲ್ಲಿ ಡಾಲರ್ ಪ್ರಾಬಲ್ಯದ ಪರಿಣಾಮ ಹೂಡಿಕೆದಾರರು ಚಿನ್ನದಿಂದ ಹೂಡಿಕೆ ಹಿಂತೆಗೆದುಕೊಳ್ಳುತ್ತಿದ್ದು, ದರದ ಮೇಲೆ ಪ್ರಭಾವ ಬೀರಿತು. ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ.