ಬೆಂಗಳೂರು: ಬಂಗಾರದ ದರದಲ್ಲಿ ಕಳೆದ 6 ದಿನಗಳಲ್ಲಿ 610 ರೂ. ಏರಿಕೆಯಾಗಿದೆ. ಪ್ರತಿ 10 ಗ್ರಾಮ್‌ಗೆ ( 24 ಕ್ಯಾರಟ್) ಸೆಪ್ಟೆಂಬರ್ 14ರಂದು ೫೦,೬೮೦ ರೂ.ನಷ್ಟಿದ್ದ ದರ (Gold price) ಮಂಗಳವಾರ 50,070 ರೂ.ಗೆ ಇಳಿಕೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಇಳಿಕೆಯ ಹಾದಿಯಲ್ಲಿದ್ದ, ವಿಶೇಷವಾಗಿ ಸೋಮವಾರ ಒಂದೇ ದಿನ 5,300 ರೂ. ಕುಸಿತಕ್ಕೀಡಾಗಿದ್ದ ಬೆಳ್ಳಿಯ ದರದಲ್ಲಿ ಮಂಗಳವಾರ ಪ್ರತಿ ಕೆ.ಜಿಗೆ 530 ರೂ. ಹೆಚ್ಚಳವಾಗಿದೆ. ಅಂದರೆ ಪ್ರತಿ ಕೆ.ಜಿ ದರ 62,000 ರೂ.ಗೆ ಏರಿಕೆಯಾಗಿದೆ.
ಪ್ಲಾಟಿನಮ್ ದರದಲ್ಲಿ 10 ಗ್ರಾಮ್‌ಗೆ 170 ರೂ. ಇಳಿಕೆಯಾಗಿದ್ದು, 23,040 ರೂ.ಗೆ ಇಳಿದಿದೆ. ಅಂತಾರಾಷ್ಟ್ರೀಯ ದರಗಳನ್ನು ಆಧರಿಸಿ ದೇಶಿ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಏರಿಳಿತ ಸಂಭವಿಸುತ್ತದೆ.