Site icon Vistara News

Gold Rate | ಬಂಗಾರದ ದರದಲ್ಲಿ 120 ರೂ. ಇಳಿಕೆ, ಬೆಳ್ಳಿ 5,800 ರೂ. ಏರಿಕೆ

gold bond

ಬೆಂಗಳೂರು: ಬಂಗಾರದ ದರದಲ್ಲಿ ಬುಧವಾರ 120 ರೂ. (Gold price) ಇಳಿಕೆಯಾಗಿದೆ. ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ ೫,೮೦೦ ರೂ. ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನದ ದರದಲ್ಲಿ 120 ರೂ. ಇಳಿಕೆಯಾಗಿದ್ದು, 10 ಗ್ರಾಮ್‌ಗೆ 51,210 ರೂ.ಗೆ ತಗ್ಗಿದೆ. 22 ಕ್ಯಾರಟ್‌ ಚಿನ್ನದ ದರ ಹತ್ತು ಗ್ರಾಮ್‌ಗೆ 46,950 ರೂ.ಗೆ ಇಳಿದಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 5,800 ರೂ. ಏರಿಕೆಯಾಗಿದ್ದು, 66,300 ರೂ.ಗೆ ಜಿಗಿದಿದೆ.

ಅಂತಾರಾಷ್ಟ್ರೀಯ ದರವನ್ನು ಆಧರಿಸಿ ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಏರಿಳಿತಗಳು ಉಂಟಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಮತ್ತು ಬಂಗಾರದ ದರ ಇಳಿಕೆಯ ಹಾದಿಯಲ್ಲಿತ್ತು. 10 ಗ್ರಾಮ್‌ ಪ್ಲಾಟಿನಮ್‌ ದರದಲ್ಲಿ 160 ರೂ. ಇಳಿಕೆಯಾಗಿದ್ದು, 25,140 ರೂ.ಗೆ ತಗ್ಗಿದೆ.

Exit mobile version