ಬೆಂಗಳೂರು: ಬಂಗಾರದ ದರದಲ್ಲಿ ಕಳೆದ ಎರಡು ದಿನಗಳಿಂದ ಏರುಗತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ನ 10 ಗ್ರಾಮ್ ಬಂಗಾರದ ದರ ಶುಕ್ರವಾರ 110 ರೂ. ವೃದ್ಧಿಸಿದ್ದು 51,820 ರೂ.ಗೆ ಏರಿದೆ. 22 ಕ್ಯಾರಟ್ ಚಿನ್ನದ ದರದಲ್ಲಿ 100 ರೂ. ಹೆಚ್ಚಳವಾಗಿದ್ದು 47,600 ರೂ.ಗೆ ಹೆಚ್ಚಳವಾಗಿದೆ.
ಬೆಳ್ಳಿಯ ದರ 1 ಕೆಜಿಗೆ 67,000 ರೂ.ಗಳ ಯಥಾಸ್ಥಿತಿಯಲ್ಲಿತ್ತು. ಪ್ಲಾಟಿನಮ್ ದರದಲ್ಲಿ 600 ರೂ. ಏರಿದ್ದು, 10 ಗ್ರಾಮ್ ದರ 24,770 ರೂ. ಆಗಿದೆ.
ಅಮೆರಿಕದಲ್ಲಿ ಡಾಲರ್ ಪ್ರಾಬಲ್ಯದ ಪರಿಣಾಮ ಹೂಡಿಕೆದಾರರು ಚಿನ್ನದಿಂದ ಹೂಡಿಕೆ ಹಿಂತೆಗೆದುಕೊಳ್ಳುತ್ತಿದ್ದು, ದರದ ಮೇಲೆ ಪ್ರಭಾವ ಬೀರಿತು. ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,835 ಡಾಲರ್‌ಗೆ ಮುಟ್ಟಿದೆ.
ಇದನ್ನೂ ಓದಿ: GOLD PRICE: ಬಂಗಾರದ ದರದಲ್ಲಿ 100 ರೂ. ಇಳಿಕೆ, ಬೆಳ್ಳಿ ದರ 500 ರೂ. ಹೆಚ್ಚಳ