ನವ ದೆಹಲಿ: ಬಂಗಾರದ ದರದಲ್ಲಿ ಮಂಗಳವಾರ 100 ರೂ. ಏರಿಕೆಯಾಗಿದ್ದು, (Gold price) ಪ್ರತಿ 10 ಗ್ರಾಮ್‌ಗೆ 54,510 ರೂ.ಗೆ (24 ಕ್ಯಾರಟ್) ವೃದ್ಧಿಸಿದೆ.
22 ಕ್ಯಾರಟ್ ಬಂಗಾರದ ದರದಲ್ಲಿ 100 ರೂ. ಹೆಚ್ಚಳವಾಗಿದ್ದು, ಪ್ರತಿ 10 ಗ್ರಾಮ್‌ಗೆ 50,000 ರೂ.ಗೆ ವೃದ್ಧಿಸಿದೆ.
ಬೆಳ್ಳಿಯ ದರ ಪ್ರತಿ ಕೆಜಿಗೆ 74,000 ರೂ.ಗಳ ಯಥಾಸ್ಥಿತಿಯಲ್ಲಿತ್ತು. ಪ್ಲಾಟಿನಮ್ ದರದಲ್ಲಿ ಪ್ರತಿ 10 ಗ್ರಾಮ್‌ಗೆ 27,230 ರೂ.ನಷ್ಟಿತ್ತು. 10 ರೂ. ಏರಿಕೆಯಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳು, ಡಾಲರ್ ಎದುರು ರೂಪಾಯಿ ವಿನಿಮಯ ದರವು ಸ್ಥಳೀಯ ದರದ ಮೇಲೆ ಪ್ರಭಾವ ಬೀರುತ್ತದೆ.