Site icon Vistara News

Gold price | ಚಿನ್ನದ ದರದಲ್ಲಿ 110 ರೂ. ಏರಿಕೆ, ಬೆಳ್ಳಿ 200 ರೂ. ಇಳಿಕೆ

Gold Bond Scheme

ಬೆಂಗಳೂರು: ಬಂಗಾರದ ದರದಲ್ಲಿ ಬುಧವಾರ 110 ರೂ. (Gold price) ಏರಿಕೆಯಾಗಿದೆ. ಬೆಳ್ಳಿಯ ದರದಲ್ಲಿ 200 ರೂ. ತಗ್ಗಿದೆ.

ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನದ ದರದಲ್ಲಿ 110 ರೂ. ವೃದ್ಧಿಸಿದ್ದು, 10 ಗ್ರಾಮ್‌ಗೆ 50,070 ರೂ.ಗೆ ವೃದ್ಧಿಸಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 200 ರೂ. ತಗ್ಗಿದ್ದು, 62,000 ರೂ.ಗೆ ಇಳಿದಿದೆ.

ಅಂತಾರಾಷ್ಟ್ರೀಯ ದರವನ್ನು ಆಧರಿಸಿ ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಏರಿಳಿತಗಳು ಉಂಟಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಮತ್ತು ಬಂಗಾರದ ದರ ಇಳಿಕೆಯ ಹಾದಿಯಲ್ಲಿತ್ತು. 10 ಗ್ರಾಮ್‌ ಪ್ಲಾಟಿನಮ್‌ ದರದಲ್ಲಿ 540 ರೂ. ಏರಿಕೆಯಾಗಿದ್ದು, 23,580 ರೂ.ಗೆ ವೃದ್ಧಿಸಿದೆ.

Exit mobile version