ಬೆಂಗಳೂರು: ಬಂಗಾರದ ದರದಲ್ಲಿ 110 ರೂ. ಏರಿಕೆಯಾಗಿದ್ದು, 52,090 ರೂ.ಗೆ ವೃದ್ಧಿಸಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ ಶನಿವಾರ ಈ ಮಟ್ಟಕ್ಕೆ ಏರಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್ ಚಿನ್ನದ ದರ 100 ರೂ. ವೃದ್ಧಿಸಿದ್ದು, 47,750 ರೂ.ಗೆ ತಲುಪಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 600 ರೂ. ಏರಿಕೆಯಾಗಿದ್ದು, 66,600 ರೂ.ಗೆ ಹೆಚ್ಚಳವಾಗಿದೆ. ಆದರೆ ಪ್ಲಾಟಿನಮ್ ದರದಲ್ಲಿ 210 ರೂ. ಇಳಿಕೆಯಾಗಿದ್ದು, 23,530 ರೂ.ಗೆ ತಗ್ಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳು ದೇಶಿ ಚಿನಿವಾರ ಪೇಟೆಯ ದರಗಳ ಮೇಲೆ ಪ್ರಭಾವ ಬೀರಿವೆ. ಆದರೆ ಕಳೆದ ವಾರ ಷೇರು ಮಾರುಕಟ್ಟ ಮಂದಗತಿಯಲ್ಲಿ ಇತ್ತು ಎಂಬುದನ್ನು ಗಮನಿಸಬಹುದು. ಬಡ್ಡಿ ದರ ಹೆಚ್ಚಳ
ಬಡ್ಡಿದರ ಹೆಚ್ಚಳ, ಹೆಚ್ಚುತ್ತಿರುವ ಹಣದುಬ್ಬರದ ಒತ್ತಡ, ಕಾರ್ಪೊರೇಟ್‌ಗಳ ಲಾಭ ಇಳಿಕೆ, ಕುಸಿಯುತ್ತಿರುವ ಚಿಲ್ಲರೆ ಮಾರಾಟ, ಕಡಿಮೆ ಬೇಡಿಕೆಗಳು, ರೂಪಾಯಿ ಮೌಲ್ಯ ಕುಸಿತದ ನಡುವೆ ಚಿನ್ನದ ದರಗಳು ಏರಿಕೆ ದಾಖಲಿಸಿದೆ.
ಇದನ್ನೂ ಓದಿ:GOLD PRICE: ಖರೀದಿದಾರರ ಜೇಬಿಗೆ ಭಾರವಾದ ಚಿನ್ನದ ದರ, ಬೆಂಗಳೂರಿನಲ್ಲಿ 3 ದಿನಗಳಲ್ಲಿ 850 ರೂ. ಹೆಚ್ಚಳ