ಬೆಂಗಳೂರು: ಬಂಗಾರದ ದರದಲ್ಲಿ ಕಳೆದ ಕೆಲವು ದಿನಗಳಿಂದ ಏರುಗತಿ ಕಂಡು ಬಂದಿದೆ. ಶನಿವಾರ 220 ರೂ. ಏರಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ಬಂಗಾರದ ದರ 5೨,೧೨೦ ರೂ.ಗೆ ವೃದ್ಧಿಸಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್ ಸ್ವರ್ಣ ದರ 47,೭80 ರೂ.ಗೆ ಏರಿದೆ. ಪ್ಲಾಟಿನಮ್ ದರದಲ್ಲಿ ೧೧೦ ರೂ. ಏರಿಕೆಯಾಗಿದ್ದು, 10 ಗ್ರಾಮ್‌ಗೆ 23,೫೯೦ ರೂ. ಆಗಿದೆ. ಬೆಳ್ಳಿಯ ದರ 66,000 ರೂ.ಗಳ ಯಥಾಸ್ಥಿತಿಯಲ್ಲಿತ್ತು.
.ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,848 ಡಾಲರ್‌ಗೆ ಮುಟ್ಟಿದೆ.
ಒಟ್ಟಾರೆಯಾಗಿ ಬಂಗಾರದ ದರ ಉನ್ನತ ಮಟ್ಟದಲ್ಲಿದ್ದರೂ, ಜ್ಯುವೆಲ್ಲರ್ಸ್ ತಮ್ಮ ಗ್ರಾಹಕರಿಗೆ ಡಿಸ್ಕೌಂಟ್‌ಗಳು ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಿವೆ.