Site icon Vistara News

ಚಿನ್ನದ ದರದಲ್ಲಿ 220 ರೂ. ಹೆಚ್ಚಳ

ಬೆಂಗಳೂರು: ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಶುಕ್ರವಾರ 220 ರೂ. ಏರಿಕೆಯಾಗಿದೆ. 24 ಕ್ಯಾರಟ್‌ನ ಪ್ರತಿ 10 ಗ್ರಾಂ ಚಿನ್ನದ ದರ 50,510 ರೂ.ಗೆ ಏರಿಕೆಯಾಗಿದೆ.


22 ಕ್ಯಾರಟ್‌ನ 10 ಗ್ರಾಮ್‌ ಬಂಗಾರಕ್ಕೆ 46,300 ರೂ. ದರ ನಿಗದಿಯಾಗಿದೆ. 100 ಗ್ರಾಮ್‌ ಆಭರಣ ಚಿನ್ನದ ದರ 4,63,000 ರೂ.ಗಳಾಗಿದೆ.


ಬೆಂಗಳೂರಿನಲ್ಲಿ 1 ಕೆ.ಜಿ ಬೆಳ್ಳಿಯ ದರದಲ್ಲಿ 400 ರೂ. ಇಳಿಕೆಯಾಗಿದ್ದು, 65,000ರೂ.ಗಳಾಗಿದೆ. 10 ಗ್ರಾಮ್‌ ಪ್ಲಾಟಿನಂ ದರದಲ್ಲಿ 270 ರೂ. ಇಳಿಕೆಯಾಗಿದೆ. 23,510 ರೂ.ಗೆ ತಗ್ಗಿದೆ. ಅಂತಾರಾಷ್ಟ್ರೀಯ ದರವನ್ನು ಆಧರಿಸಿ ಭಾರತದಲ್ಲಿ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಮ್‌ ದರಗಳಲ್ಲಿ ಪರಿಷ್ಕರಣೆಯಾಗುತ್ತವೆ. ಭಾರತ ತನ್ನ ಬೇಡಿಕೆಯ ಬಹುಪಾಲು ಚಿನ್ನವನ್ನೂ ಆಮದು ಮಾಡಿಕೊಳ್ಳುತ್ತದೆ.

Exit mobile version