ಬೆಂಗಳೂರು: ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ ಮಂಗಳ ವಾರ 30 ರೂ. ಏರಿಕೆಯಾಗಿದೆ. ಪ್ರತಿ 10 ಗ್ರಾಮ್‌ಗೆ ೫೨,೬೭೦ ರೂ.ಗೆ (24 ಕ್ಯಾರಟ್) ವೃದ್ಧಿಸಿದೆ. 22 ಕ್ಯಾರಟ್ ಅಥವಾ ಆಭರಣ ಚಿನ್ನದ ದರದಲ್ಲಿ 30 ರೂ. ಏರಿದ್ದು, ೪೮,೨೯೦ ರೂ.ಗೆ (Gold price ) ಹೆಚ್ಚಳವಾಗಿದೆ.
ಬೆಳ್ಳಿಯ ದರದಲ್ಲಿ 200 ರೂ. ಏರಿಕೆಯಾಗಿದ್ದು, ಪ್ರತಿ ಕೆಜಿಗೆ 67,500 ರೂ.ಗೆ ಏರಿಕೆಯಾಗಿದೆ. ಪ್ಲಾಟಿನಮ್ ದರದಲ್ಲಿ 10 ಗ್ರಾಮ್‌ಗೆ 160 ರೂ. ಇಳಿಕೆಯಾಗಿದ್ದು, ೨೬,೪೨೦ ರೂ.ಗೆ ತಗ್ಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿಯ ವಿನಿಮಯ ದರವನ್ನು ಆಧರಿಸಿ ಸ್ಥಳೀಯ ದರಗಳಲ್ಲಿ ವ್ಯತ್ಯಾಸವಾಗುತ್ತದೆ.