Site icon Vistara News

Good News | ಇಳಿಯಲಿದೆ ಚಿನ್ನದ ದರ! ಡಾಲರ್‌, ಅಮೆರಿಕದ ಎಕಾನಮಿ, ತೈಲ ದರ ನಿರ್ಣಾಯಕ

gold import

ನವ ದೆಹಲಿ: ಬಂಗಾರದ ದರದಲ್ಲಿ ಮುಂಬರುವ ದಿನಗಳಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಸಂಭವಿಸುವ ನಿರೀಕ್ಷೆ ಇದ್ದು, ಹೂಡಿಕೆದಾರರು ಚಿನ್ನದ ಬದಲಿಗೆ ಡಾಲರ್‌ನಲ್ಲಿ ಹೂಡಿಕೆ ಬಯಸುತ್ತಿದ್ದಾರೆ. ಇದರಿಂದ ಚಿನ್ನದ ದರ ಇಳಿಕೆಯಾಗಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಹೆಚ್ಚುತ್ತಿರುವ ಡಾಲರ್‌ ದರ, ಅಮೆರಿಕದ ಆರ್ಥಿಕತೆಯ ಏರೀಳಿತ, ಕಚ್ಚಾ ತೈಲ ದರಗಳು ಬಂಗಾರದ ದರದ ಮೇಲೆ ಪ್ರಭಾವ ಬೀರುತ್ತವೆ. ಅಮೆರಿಕದಲ್ಲಿ ಜುಲೈ ೧೩ರಂದು ಹಣದುಬ್ಬರ ಕುರಿತ ಅಂಕಿ ಅಂಶಗಳು ಪ್ರಕಟವಾಗಲಿದ್ದು, ಹೂಡಿಕೆದಾರರ ಚಿತ್ತ ಅದರತ್ತ ನೆಟ್ಟಿದೆ. ವಿಶ್ವಾದ್ಯಂತ ಚಿನ್ನದ ದರದ ಮೇಲೆ ಡಾಲರ್‌ ಪ್ರಭಾವ ಹೆಚ್ಚು. ಡಾಲರ್‌ ದರ ಹೆಚ್ಚಿದರೆ ಇತರ ದೇಶಗಳಲ್ಲಿ ಹಳದಿ ಲೋಹದ ಆಮದು ವೆಚ್ಚ ಹೆಚ್ಚಳವಾಗಿ ಚಿನ್ನದ ದರ ಕೂಡ ಏರಿಕೆಯಾಗುತ್ತದೆ. ಆದರೆ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಭಾರಿ ಪ್ರಮಾಣದಲ್ಲಿ ಹಿಂತೆಗೆದುಕೊಂಡರೆ ದರ ಇಳಿಕೆಯಾಗಲಿದೆ.

ಅಮೆರಿಕದಲ್ಲಿ ಕಳೆದ ಜೂನ್‌ನಲ್ಲಿ ಹಣದುಬ್ಬರ ೮.೮%ಕ್ಕೆ ಏರಿತ್ತು. ಇದು ಕಳೆದ ೪೦ ವರ್ಷಗಳಲ್ಲಿಯೇ ಗರಿಷ್ಠ ಮಟ್ಟವಾಗಿತ್ತು.

Exit mobile version