Site icon Vistara News

Gold price | ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿಯ ದರಗಳಲ್ಲಿ ಯಥಾಸ್ಥಿತಿ

gold

ಬೆಂಗಳೂರು: ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕಳೆದ ಮೂರು ದಿನಗಳಿಂದ ಮಂದಗತಿ ಕಂಡು ಬಂದಿದೆ. ಸೋಮವಾರ ದರಗಳು ಯಥಸ್ಥಿತಿಯಲ್ಲಿ ಇತ್ತು. 22 ಕ್ಯಾರಟ್‌ ಚಿನ್ನದ ದರ (Gold price) ಪ್ರತಿ 10 ಗ್ರಾಮ್‌ಗೆ 46,800 ರೂ.ನಷ್ಟಿತ್ತು.

24 ಕ್ಯಾರಟ್‌ ಚಿನ್ನದ ದರ ಪ್ರತಿ 10 ಗ್ರಾಮ್‌ಗೆ 51,050 ರೂ.ಗಳ ಮಟ್ಟದಲ್ಲಿ ಇತ್ತು. ಬೆಳ್ಳಿಯ ಒಂದು ಕೆ.ಜಿಗೆ ದರ 57,500 ರೂ. ಇತ್ತು. ಪ್ಲಾಟಿನಮ್‌ನ 10 ಗ್ರಾಮ್‌ಗೆ 24,910 ರೂ. ದರವಿತ್ತು.

ಚಿನ್ನ ಮತ್ತು ಬೆಳ್ಳಿಯ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಗಳನ್ನು ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿಯ ದರವನ್ನು ಆಧರಿಸಿ ವ್ಯತ್ಯಾಸವಾಗುತ್ತದೆ.

Exit mobile version