ಬೆಂಗಳೂರು: ಇತ್ತೀಚೆಗೆ ಏರುಗತಿಯಲ್ಲಿದ್ದ ಬಂಗಾರ (Gold price) ಮತ್ತು ಬೆಳ್ಳಿಯ ದರದಲ್ಲಿ ಕಳೆದ ಕೆಲ ದಿನಗಳಿಂದ ಇಳಿಕೆ ಕಂಡು ಬಂದಿದ್ದು, ಮಂಗಳವಾರ ಯಥಾಸ್ಥಿತಿಯಲ್ಲಿತ್ತು.
ಬೆಂಗಳೂರಿನಲ್ಲಿ ಮಂಗಳವಾರ ಆಭರಣ ಚಿನ್ನ ಅಥವಾ 22 ಕ್ಯಾರಟ್ ಪ್ರತಿ 10 ಗ್ರಾಮ್ ಬಂಗಾರದ ದರ 49,850 ರೂ. ಇತ್ತು. 24 ಕ್ಯಾರಟ್ ಬಂಗಾರದ ದರ 54,390 ರೂ.ನಷ್ಟಿತ್ತು.
ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಆಧರಿಸಿ ಚಿನ್ನದ ದರದಲ್ಲಿ ಏರಿಳಿತಗಳು ಉಂಟಾಗುತ್ತವೆ. ಭಾರತದ ದೇಶೀಯ ದರದ ಮೇಲೆ ಪ್ರಭಾವ ಬೀರುತ್ತವೆ. 2023ರಲ್ಲಿ ಬಂಗಾರದ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.