ಬೆಂಗಳೂರು: ಕಳೆದ ಕೆಲ ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ದರದಲ್ಲಿ ಶುಕ್ರವಾರ 490 ರೂ. ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ 10 ಗ್ರಾಮ್ ಹಾಗೂ 24 ಕ್ಯಾರಟ್ ಚಿನ್ನದ ದರ 51,490 ರೂ.ಗೆ ಜಿಗಿದಿದೆ.
ಆಭರಣ ಚಿನ್ನ ಅಥವಾ 22 ಕ್ಯಾರಟ್ ಚಿನ್ನದ ದರದಲ್ಲಿ 490 ರೂ. ಹೆಚ್ಚಳವಾಗಿದ್ದು, 51,490ರೂ.ಗೆ ಹೆಚ್ಚಳವಾಗಿದೆ.
ಕಳೆದ ಎರಡು ದಿನಗಳಲ್ಲಿ ಬಂಗಾರದ ದರದಲ್ಲಿ 810 ರೂ. ಹೆಚ್ಚಳ ಆಗಿತ್ತು.
ಬಂಗಾರದ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳನ್ನು ಅವಲಂಬಿಸಿ ಏರಿಳಿತವಾಗುತ್ತವೆ. ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿದೆ. ಬೆಳ್ಳಿಯ ದರದಲ್ಲಿ ಕೆ.ಜಿಗೆ 200 ರೂ. ಹೆಚ್ಚಳವಾಗಿದ್ದು, 65,000 ರೂ.ಗೆ ವೃದ್ಧಿಸಿದೆ.