ನವದೆಹಲಿ: ಬಂಗಾರದ ದರ ಮಂಗಳವಾರ ಬರೋಬ್ಬರಿ 1,050 ರೂ. ಇಳಿದಿದೆ. ಬೆಳ್ಳಿ ದರದಲ್ಲೂ 1,300 ರೂ. ತಗ್ಗಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ದರದಲ್ಲಿ 1,050 ರೂ. ಅಗ್ಗವಾಗಿದ್ದು, 51,710 ರೂ.ಗೆ ತಗ್ಗಿದೆ. 22 ಕ್ಯಾರಟ್ ಬಂಗಾರದ ದರದಲ್ಲಿ 960 ರೂ. ಕಡಿತವಾಗಿದ್ದು, 47,400 ರೂ.ಗೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿಯ ದರದಲ್ಲಿ 1,300 ರೂ. ತಗ್ಗಿದ್ದು, 66,000 ರೂ.ಗೆ ಇಳಿದಿದೆ.
ಪ್ಲಾಟಿನಮ್ ದರ ಕೂಡ ಇಳಿದಿದ್ದು, 10 ಗ್ರಾಮ್ ದರ 23,580 ರೂ.ಗೆ ತಗ್ಗಿದೆ. ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,848 ಡಾಲರ್‌ಗೆ ಮುಟ್ಟಿದೆ.
ಒಟ್ಟಾರೆಯಾಗಿ ಬಂಗಾರದ ದರ ಉನ್ನತ ಮಟ್ಟದಲ್ಲಿದ್ದರೂ, ಜ್ಯುವೆಲ್ಲರ್ಸ್ ತಮ್ಮ ಗ್ರಾಹಕರಿಗೆ ಡಿಸ್ಕೌಂಟ್‌ಗಳು ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಿವೆ.